ವಿಜಯಪುರ: ಡಿಸೆಂಬರ್ 3 ಹಾಗೂ 4 ರಂದು ಎರಡು ದಿನ 12ನೇ ರಾಜ್ಯ ಮಟ್ಟದ ಟ್ರ್ಯಾಕ್ ಸೈಕ್ಲಿಂಗ್ ಚಾಂಪಿಯನ್ಶಿಪ್ನಡೆಸಲಾಗುವುದು ಎಂದು ಜಿಲ್ಲಾ ಅಮೆಚ್ಯೂರ್ ಸೈಕ್ಲಿಂಗ್ ಅಸೋಸಿಯೇಷನ್ ಅಧ್ಯಕ್ಷ ರಾಜು ಬಿರಾದಾರ ತಿಳಿಸಿದರು.
ಡಿ.3 ರಂದು ಬೆಳಗ್ಗೆ 9.30ಕ್ಕೆ ಸೈಕ್ಲಿಂಗ್ ಸ್ಪರ್ಧೆಯ ಉದ್ಘಾಟನೆಗೆ ಸಚಿವ ಕೆ ಎಸ್ ಈಶ್ವರಪ್ಪ ಆಗಮಿಸಲಿದ್ದು, ಭಾಗವಹಿಸುವ ಕ್ರೀಡಾಪಟುಗಳು ಟ್ರ್ಯಾಕ್ ರೇಸ್ ಸೈಕಲ್ ಬಳಸುವುದು ಕಡ್ಡಾಯವಾಗಿರುತ್ತದೆ. ಟೈಮ್ ಟ್ರಯಲ್,ವೈಯಕ್ತಿಕ ಪರ್ಶೂಟ್,ಪಾಯಿಂಟ್ ರೇಸ್ ಸೇರಿ 26 ಸ್ಪರ್ಧೆಗಳು ಜರುಗಲಿವೆ. ರಾಜ್ಯ, ರಾಷ್ಟ್ರ ಮಟ್ಟದ ಸೈಕ್ಲಿಂಗ್‌ಗೆ 150ಕ್ಕೂ ಅಧಿಕ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ.
ನಗರದ ಸೊಲ್ಲಾಪುರ ರಸ್ತೆಯಲ್ಲಿರುವ ಬಿಎಲ್‌ಡಿಇ ಹೊಸ ಕಾಲೇಜಿನಲ್ಲಿ ಸ್ಪರ್ಧೆ ನಡೆಯಲಿದ್ದು, ಭಾಗವಹಿಸುವ ಆಸಕ್ತಿ ಹೊಂದಿರುವವರು ನಾಳೆಯೊಳಗೆ ಹೆಸರು ನೊಂದಾಯಿಸಿಕೊಳ್ಳಬಹುದು ಎಂದು ರಾಜು ಬಿರಾದಾರ ಹೇಳಿದರು.