ETV Bharat / state

ಫೆ.1 ರಂದು ರಾಜ್ಯ ಮಟ್ಟದ ಹಡಪದ ಜನಜಾಗೃತಿ ಸಮಾವೇಶ: ಎಸ್​ಟಿ ಸೇರ್ಪಡೆಗೆ ಆಗ್ರಹ

ಹಡಪದ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ(ಎಸ್‌ಟಿ) ಸೇರ್ಪಡೆ ಮಾಡುವುದು ಮತ್ತು ಅಭಿವೃದ್ಧಿಗೆ ನಿಗಮ ಸ್ಥಾಪನೆ ಮಾಡಲು ಆಗ್ರಹಿಸಲಾಗಿದೆ.

Society of Hadapa
ಹಡಪದ ಸಮಾಜ
author img

By

Published : Jan 31, 2023, 8:13 AM IST

Updated : Jan 31, 2023, 9:14 AM IST

ಫೆಬ್ರವರಿ 1 ರಂದು ರಾಜ್ಯ ಮಟ್ಟದ ಹಡಪದ ಜನಜಾಗೃತಿ ಸಮಾವೇಶ

ಮುದ್ದೇಬಿಹಾಳ (ವಿಜಯಪುರ) : "ತಾಲೂಕಿನ ತಂಗಡಗಿ ಗ್ರಾಮದಲ್ಲಿ ಹಡಪದ ಅಪ್ಪಣ್ಣ ಸಮುದಾಯ ಭವನ ಉದ್ಘಾಟನೆ, ನೂತನ ಕಟ್ಟಡಗಳ ಅಡಿಗಲ್ಲು ಸಮಾರಂಭ ಹಾಗೂ ಹಡಪದ ಸಮಾಜದ ರಾಜ್ಯಮಟ್ಟದ ಜನಜಾಗೃತಿ ಸಮಾವೇಶವನ್ನು ಫೆ.1 ರಂದು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದ ಉದ್ಘಾಟನಾ ಸಮಾರಂಭಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಆಗಮಿಸಲಿದ್ದಾರೆ" ಎಂದು ಹಡಪದ ಅಪ್ಪಣ್ಣ ಗುರುಪೀಠದ ಅನ್ನದಾನಿ ಭಾರತಿ ಅಪ್ಪಣ್ಣ ಶ್ರೀಗಳು ಹೇಳಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ನಡೆಸಿ ಅವರು ಮಾತನಾಡಿದರು.

"ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಗದಗ ತೋಂಟದಾರ್ಯಮಠದ ಜಗದ್ಗುರು ಸಿದ್ದರಾಮ ಶ್ರೀ, ಇಲಕಲ್ ವಿಜಯಮಹಾಂತೇಶ್ವರ ಮಠದ ಗುರುಮಹಾಂತ ಶ್ರೀ, ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಶ್ರೀ, ಹುಲಸೂರಿನ ಶಿವಾನಂದ ಶ್ರೀ, ಬೀದರ್‌ನ ಬೆಲ್ದಾಳ ಶರಣರು, ಹೊಸದುರ್ಗದ ಪುರುಷೋತ್ತಮಾನಂದಪುರಿ ಶ್ರೀ, ಭೋವಿಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಶ್ರೀ, ಚಿತ್ರದುರ್ಗದ ಕುಂಚಿಟಿಗ ಮಠದ ಶಾಂತವೀರ ಶ್ರೀ, ಕಾಗಿನೆಲೆ ಗುರುಪೀಠದ ಈಶ್ವರಾನಂದಪುರಿ ಶ್ರೀ, ವೇಮನ ಗುರುಪೀಠದ ವೇಮಾನಂದಪುರಿ ಶ್ರೀ, ಅಣ್ಣಿಗೇರಿಯ ಶಿವಕುಮಾರ ಶ್ರೀ, ತೆಲಸಂಗದ ಬಸವಕುಂಬಾರ ಗುಂಡಯ್ಯ ಶ್ರೀ, ಹಂಸನೂರಿನ ಬಸವರಾಜೇಂದ್ರ ಶ್ರೀ, ಇರಕಲ್ಲದ ಬಸವಪ್ರಸಾದ ಶರಣರು, ಕೊರಟಗೇರಿಯ ಮಹಾಲಿಂಗ ಶ್ರೀ, ಅಥಣಿ ಶಿವಬಸವ ಶ್ರೀ, ದಾವಣಗೆರೆ ಬಸವಪ್ರಭು ಶ್ರೀಗಳು ವಹಿಸುವರು" ಎಂದು ಅವರು ತಿಳಿಸಿದರು.

"ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಕಾರ್ಯಕ್ರಮಕ್ಕೆ ಬರಲಿದ್ದಾರೆ. ಅಧ್ಯಕ್ಷತೆಯನ್ನು ಶಾಸಕರು, ಸ್ವಾಗತ ಸಮಿತಿ ಅಧ್ಯಕ್ಷ ಎ.ಎಸ್.ಪಾಟೀಲ್ ನಡಹಳ್ಳಿ ವಹಿಸುವರು. ಈ ಸಂದರ್ಭದಲ್ಲಿ ಹಡಪದ ಸಮಾಜವನ್ನು ಎಸ್​ಸ್ಟಿ ಗೆ ಸೇರ್ಪಡೆ ಮಾಡಬೇಕು. ಸಮಾಜದ ಅಭಿವೃದ್ಧಿಗೆ ನಿಗಮ, ಮಂಡಳಿ ಸ್ಥಾಪನೆ ಮಾಡಬೇಕು ಎಂಬುದೂ ಸೇರಿದಂತೆ ಸಮಾಜದ ವಿವಿಧ ಬೇಡಿಕೆಗಳನ್ನು ಸಿಎಂ ಗಮನಕ್ಕೆ ತರಲಾಗುತ್ತದೆ" ಎಂದು ಹೇಳಿದರು.

ಬಳಿಕ ಮಾತನಾಡಿದ ಹಡಪದ ಸಮಾಜದ ರಾಜ್ಯಾಧ್ಯಕ್ಷ ಸಿದ್ದಪ್ಪ, "ಗೋವಾ, ಮಹಾರಾಷ್ಟ್ರ, ಕರ್ನಾಟಕದ ವಿವಿಧ ಭಾಗಗಳಿಂದ 60 ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಸಮಾಜದ ಬಾಂಧವರು ಆಗಮಿಸಲಿದ್ದಾರೆ" ಎಂದರು. ಕಾರ್ಯಕ್ರಮದಲ್ಲಿ ಜಿಲ್ಲೆಯ ನಗರ ಶಾಸಕರು ಸೇರಿದಂತೆ ಇನ್ನುಳಿದ ಶಾಸಕರು, ವಿಧಾನಪರಿಷತ್ ಸದಸ್ಯರ ಹೆಸರುಗಳನ್ನು ಆಮಂತ್ರಣ ಪತ್ರಿಕೆಯಲ್ಲಿ ಹಾಕದೇ ಇರುವ ಕುರಿತು ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿ, "ರಾಜ್ಯದ ಎಲ್ಲ ಭಾಗಗಳಲ್ಲೂ ನಮ್ಮ ಸಮಾಜದ ಬಾಂಧವರಿದ್ದು ತಮ್ಮ ಭಾಗದ ಶಾಸಕರು ಹೆಸರು ಹಾಕಬೇಕು ಎಂಬ ಬೇಡಿಕೆ ಇರಿಸಿದ್ದರು. ಆದರೆ ನಮ್ಮ ಕಾರ್ಯಕ್ರಮ ನಡೆಯುವ ಸ್ಥಳ ಮುದ್ದೇಬಿಹಾಳ ಕ್ಷೇತ್ರವಾದ್ದರಿಂದ ಇಲ್ಲಿಯ ಸ್ಥಳೀಯ ಶಾಸಕರು, ಪಕ್ಕದ ಕ್ಷೇತ್ರದ ಶಾಸಕರನ್ನು ಆಮಂತ್ರಣ ಪತ್ರಿಕೆಯಲ್ಲಿ ಹಾಕಿದ್ದೇವೆ. ಜಿಲ್ಲೆಯ ಎಲ್ಲ ಶಾಸಕರುಗಳಿಗೆ ಆಮಂತ್ರಣ ನೀಡಿದ್ದೇವೆ. ಇನ್ನುಳಿದ ಶಾಸಕರುಗಳ ಬಗ್ಗೆ ನಮಗೆ ಗೌರವವಿದೆ" ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಹಡಪದ ಸಮಾಜದ ಕಾರ್ಯಾಧ್ಯಕ್ಷ ಎಚ್.ಡಿ.ವೈದ್ಯ, ನಾಗರಾಜ ಸರ್ಜಾಪೂರ, ಬಸವರಾಜ ಬೆಳಗಾವಿ, ಉಪಾಧ್ಯಕ್ಷ ಸಂತೋಷ ಹಡಪದ, ಚಿದಾನಂದ ಬಸರಕೋಡ, ಹನಮಂತರಾಯ ನಿಡಗುಂದಿ, ಮುದ್ದೇಬಿಹಾಳ ತಾಲೂಕಾಧ್ಯಕ್ಷ ಶಿವಶಂಕರ ಹಡಪದ, ಶೇಖರ ಹಡಪದ, ಭೀಮರಾಯ ಬಳವಾಟ, ಪ್ರಹ್ಲಾದ ಹಡಪದ, ಮಹಾಂತೇಶ ಹಡಪದ, ಬಸಲಿಂಗಪ್ಪ ಹಡಪದ, ಶಿವಕುಮಾರ ಬಿದರಕುಂದಿ ಮೊದಲಾದವರು ಇದ್ದರು.

ಇದನ್ನೂ ಓದಿ: ರೇವಣಸಿದ್ದೇಶ್ವರ ದೇವಸ್ಥಾನದಲ್ಲಿ ಸಾವಿರಾರು ಭಕ್ತರಿಂದ ಶಿವ ಪಂಚಾಕ್ಷರಿ ಮಂತ್ರ ಪಠಣ..

Last Updated : Jan 31, 2023, 9:14 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.