ETV Bharat / state

ವಿಜಯಪುರ-ಯಶವಂತಪುರ ವಿಶೇಷ ರೈಲಿಗೆ ಹಸಿರು ನಿಶಾನೆ

author img

By

Published : Oct 22, 2019, 11:25 PM IST

ವಿಜಯಪುರ-ಯಶವಂತಪುರ ಮಧ್ಯೆ ನೇರ ರೈಲು ಆರಂಭಿಸುವ ಕುರಿತಂತೆ ಚುನಾಯಿತ ಪ್ರತಿನಿಧಿಗಳು, ಸಾರ್ವಜನಿಕರು ಬೇಡಿಕೆ ಇಟ್ಟಿದ್ದರು. ಈ ಹಿನ್ನೆಲೆಯಲ್ಲಿ ದೀಪಾವಳಿ ಹಬ್ಬದ ಅಂಗವಾಗಿ ಈ ವಿಶೇಷ ರೈಲಿಗೆ ಚಾಲನೆ ನೀಡಲಾಗಿದೆ. ಇದು ಡಿಸೆಂಬರ್ 20ರವರೆಗೆ ನಿಯಮಿತವಾಗಿ ಸಂಚಾರ ನಡೆಸಲಿದೆ.

ವಿಜಯಪುರ- ಯಶವಂತಪುರ ವಿಶೇಷ ರೈಲಿಗೆ ಹಸಿರು ನಿಶಾನೆ

ವಿಜಯಪುರ: ವಿಜಯಪುರ-ಯಶವಂತಪುರ ನಡುವೆ ಆರಂಭಿಸಲಾದ ವಿಶೇಷ ರೈಲಿನ ಸಮಯ ಬದಲಾವಣೆಗೆ ಸಂಬಂಧಪಟ್ಟಂತೆ ಜನತೆಯ ಅನುಕೂಲಕ್ಕೆ ತಕ್ಕಂತೆ ಕ್ರಮ ಕೈಗೊಳ್ಳಲಾಗುವುದು ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್​ ಅಂಗಡಿ ಹೇಳಿದರು.

ನಗರದ ರೈಲ್ವೆ ನಿಲ್ದಾಣದಲ್ಲಿ ವಿಜಯಪುರ-ಯಶವಂತಪುರ ನಡುವಿನ ವಿಶೇಷ ರೈಲಿಗೆ ಚಾಲನೆ ನೀಡಿ ಮಾತನಾಡಿದ ಅವರು, ವಿಜಯಪುರ-ಯಶವಂತಪುರ ಮಧ್ಯೆ ನೇರ ರೈಲನ್ನು ಆರಂಭಿಸುವ ಕುರಿತಂತೆ ಚುನಾಯಿತ ಪ್ರತಿನಿಧಿಗಳು, ಸಾರ್ವಜನಿಕರು ಬೇಡಿಕೆ ಇಟ್ಟಿದ್ದರು. ಈ ಹಿನ್ನೆಲೆಯಲ್ಲಿ ದೀಪಾವಳಿ ಹಬ್ಬದ ಅಂಗವಾಗಿ ಈ ವಿಶೇಷ ರೈಲಿಗೆ ಚಾಲನೆ ನೀಡಲಾಗಿದೆ. ಇದು ಡಿಸೆಂಬರ್ 20ರವರೆಗೆ ನಿಯಮಿತವಾಗಿ ಸಂಚಾರ ನಡೆಸಲಿದೆ ಎಂದರು.

ವಿಜಯಪುರ-ಯಶವಂತಪುರ ವಿಶೇಷ ರೈಲಿಗೆ ಹಸಿರು ನಿಶಾನೆ

ರೈಲ್ವೆ ಸುರಕ್ಷತೆ ಬಗ್ಗೆ ವಿಶೇಷವಾಗಿ ಗಮನ ಹರಿಸಲಾಗುತ್ತಿದ್ದು, ಸ್ವಚ್ಛತೆ, ಸಮಯ ಪಾಲನೆಗೆ ಒತ್ತು ನೀಡಲಾಗುತ್ತಿದೆ. ರೈಲ್ವೆ ಅಧಿಕಾರಿಗಳು ಹಾಗೂ ಕಾರ್ಮಿಕರ ಶ್ರಮದ ಫಲವಾಗಿ ಹಿಂದಿಗಿಂತಲೂ ಈಗ ರೈಲ್ವೆಯಲ್ಲಿ ಸ್ವಚ್ಛತೆ ಕಾಣಬಹುದಾಗಿದೆ. ರೈಲ್ವೆ ಇಲಾಖೆಯಲ್ಲಿ ಹೆಚ್ಚಿನ ಸುಧಾರಣೆ ತರುವ ಉದ್ದೇಶ ಹೊಂದಲಾಗಿದ್ದು, 50 ಲಕ್ಷ ಕೋಟಿ ರೂ. ವಿನಿಯೋಗ ಮಾಡುವ ಯೋಚನೆಯಿದೆ. ಇದರಿಂದ ಉದ್ಯೋಗಾವಕಾಶ ಸೃಷ್ಟಿಗೂ ಅನುಕೂಲವಾಗಲಿದೆ. ವಿಜಯಪುರ, ಬಾಗಲಕೋಟೆ, ಹಂಪಿ ಸೇರಿದಂತೆ ವಿವಿಧ ಪ್ರವಾಸಿ ತಾಣಗಳಿಗೆ ಪ್ರವಾಸಿಗರ ಅನುಕೂಲಕ್ಕಾಗಿ ಗೋಲ್ಡನ್ ಚಾರಿಯೆಟ್ ರೈಲು ಸಂಚಾರವನ್ನು ಆರಂಭಿಸುವ ಚಿಂತನೆ ಇದೆ. ಅದರಂತೆ ದೇಶಾದ್ಯಂತ 150 ನೂತನ ರೈಲು ಓಡಾಟ ಆರಂಭಿಸಲಾಗಿದೆ. ವಿಜಯಪುರ ನಗರದಲ್ಲಿ ಆರ್​ಒಬಿ ಹಾಗೂ ಆರ್​ಯೂಬಿಗಳನ್ನು ಮುಂಬರುವ 6 ತಿಂಗಳುಗಳ ಅವಧಿಯಲ್ಲಿ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿಗಳು ಮತ್ತು ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದ ತಿಳಿಸಿದರು.

Intro:ವಿಜಯಪುರ Body:ವಿಜಯಪುರ: ವಿಜಯಪುರ-ಯಶವಂತಪುರ-ವಿಜಯಪುರ ನಡುವೆ ಆರಂಭಿಸಲಾದ ವಿಶೇಷ ರೈಲು ಸಮಯ ಬದಲಾವಣೆಗೆ ಸಂಬಂಧಪಟ್ಟಂತೆ ಜನತೆಯ ಅನುಕೂಲತೆಗೆ ತಕ್ಕಂತೆ ಸಮಯ ಬದಲಾವಣೆ ಮಾಡಲಾಗುವುದೆಂದು ಕೇಂದ್ರ ರೇಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಹೇಳಿದರು.
         ವಿಜಯಪುರ ನಗರದ ರೇಲ್ವೆ ನಿಲ್ದಾಣದಲ್ಲಿಂದು ವಿಜಯಪುರ-ಯಶವಂತಪುರ-ವಿಜಯಪುರ ನಡುವೆ ವಿಶೇಷ ರೈಲಿಗೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ವಿಜಯಪುರದಿಂದ ಯಶವಂತಪುರ ಮಧ್ಯೆ ನೇರ ರೈಲನ್ನು ಆರಂಭಿಸುವ ಕುರಿತಂತೆ ಚುನಾಯಿತ ಪ್ರತಿನಿಧಿಗಳು ಸೇರಿದಂತೆ ಸಾರ್ವಜನಿಕರ ಬೇಡಿಕೆ ಹಿನ್ನಲೆಯಲ್ಲಿ ದೀಪಾವಳಿ ಹಬ್ಬದ ಅಂಗವಾಗಿ ಈ ರೈಲನ್ನು ಬರುವ ಡಿಸೆಂಬರ್ 20ರವರೆಗೆ ನಿಯಮಿತವಾಗಿ ಸಂಚಾರ ನಡೆಸಲಿದೆ. ಈ ರೈಲಿನ ಸಮಯ ಬದಲಾವಣೆಯನ್ನು ಜನತೆಯ ಅನುಕೂಲತೆಗೆ ತಕ್ಕಂತೆ ಮಾಡುವುದಾಗಿ ಸಚಿವರು ಭರವಸೆ ನೀಡಿದರು.
         ರೈಲ್ವೆ ಸುರಕ್ಷತೆಗೆ ವಿಶೇಷ ಗಮನ ನೀಡಲಾಗುತ್ತಿದೆ. ಅದರಂತೆ ರೈಲ್ವೆ ಸ್ವಚ್ಛತೆ, ಸಮಯ ಪರಿಪಾಲನೆಗೆ ಒತ್ತನ್ನು ನೀಡಲಾಗುತ್ತಿದೆ. ರೇಲ್ವೆ ಅಧಿಕಾರಿಗಳು ಹಾಗೂ ಕಾರ್ಮಿಕರ ಶ್ರಮದ ಫಲವಾಗಿ ಈ ಹಿಂದಿಗಿಂತಲೂ ಈಗ ರೈಲ್ವೆ ಸ್ವಚ್ಛತೆಯನ್ನು ಕಾಣಬಹುದಾಗಿದ್ದು, ರೈಲ್ವೆ ಸುರಕ್ಷತೆಗೂ ವಿಶೇಷ ಆದ್ಯತೆ ನೀಡಲಾಗಿದೆ. ರೇಲ್ವೆ ಇಲಾಖೆ ವ್ಯಾಪ್ತಿಯಲ್ಲಿ ಇನ್ನೂ ಹೆಚ್ಚಿನ ಸುಧಾರಣೆ ತರುವ ಉದ್ದೇಶ ಹೊಂದಲಾಗಿದ್ದು, 50 ಲಕ್ಷ ಕೋಟಿ ರೂ. ವಿನಿಯೋಗ ಮಾಡುವ ಉದ್ದೇಶ ಹೊಂದಲಾಗಿದೆ. ಇದರಿಂದ ಉದ್ಯೋಗಾವಕಾಶ ಸೃಷ್ಟಿಗೂ ಅನುಕೂಲವಾಗಲಿದೆ ಎಂದು ಹೇಳಿದರು.
         ವಿಜಯಪುರ ಹಾಗೂ ಬಾಗಲಕೋಟೆ ಮತ್ತು ಹಂಪಿ ಸೇರಿದಂತೆ ವಿವಿಧ ಪ್ರವಾಸಿ ತಾಣಗಳಿಗೆ ಹಾಗೂ ಪ್ರೇಕ್ಷಣೀಯ ಸ್ಥಳಗಳ ಪ್ರವಾಸಿಗರ ವೀಕ್ಷಣೆಯ ಅನುಕೂಲಕ್ಕಾಗಿ ಗೋಲ್ಡನ್ ಚಾರಿಯಟ್ ರೈಲು ಸಂಚಾರವನ್ನು ಮಾಡಲು ಚಿಂತನೆ ಇದೆ. ಅದರಂತೆ ದೇಶಾದ್ಯಂತ 150 ನೂತನ ರೈಲು ಗಾಡಿಯನ್ನು ಸಹ ಓಡಾಟ ಆರಂಭಿಸಿವೆ ಎಂದು ಸಚಿವರು ಹೇಳಿದರು.
         ವಿಜಯಪುರ ನಗರದಲ್ಲಿ ಆರ್‍ಓಬಿ ಹಾಗೂ ಆರ್‍ಯುಬಿಗಳನ್ನು ಮುಂಬರುವ 6 ತಿಂಗಳುಗಳ ಅವಧಿಯಲ್ಲಿ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿಗಳು ಮತ್ತು ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದ ಅವರು, ಈ ಅವಧಿಯಲ್ಲಿ ಪೂರ್ಣಗೊಳಿಸಿದ ಬಗ್ಗೆ ವರದಿಯನ್ನು ಸಹ ಸಲ್ಲಿಸುವಂತೆ ಸೂಚಿಸಿದರು.
         ರೇಲ್ವೆ ಇಲಾಖೆ ವ್ಯಾಪ್ತಿಯಲ್ಲಿ ಈ ಹಿಂದೆ ಮಂಜೂರಾಗಿರುವ ಯೋಜನೆಗಳನ್ನು ಪೂರ್ಣಗೊಳಿಸಲು ಪ್ರಥಮ ಆದ್ಯತೆ ನೀಡಲಾಗುತ್ತದೆ. ಈ ಎಲ್ಲ ಯೋಜನೆಗಳು ಪೂರ್ಣಗೊಂಡ ನಂತರ ಹೊಸ ಯೋಜನೆ ಕೈಗೆತ್ತಿಕೊಳ್ಳಲಾಗುವುದು. ಭಾರತೀಯ ರೈಲು ಸಂಚಾರ ಜನರ ನಾಡಿಮಿಡಿತದಂತಿದ್ದು, ಆರ್ಥಿಕ ಅಭಿವೃದ್ದಿಗೂ ಸಹಕಾರಿಯಾಗಿದೆ. ಈ ಹಿನ್ನಲೆಯಲ್ಲಿ ಭಾರತದ ಪ್ರತಿ ಪ್ರಜೆ ಹಾಗೂ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸೌಲಭ್ಯ ದೊರಕಿಸಲು ಪ್ರಾಮಾಣಿಕ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದ ಅವರು ರೇಲ್ವೆ ಇಲಾಖೆ ವ್ಯಾಪ್ತಿಯಲ್ಲಿ ಅಧಿಕಾರಿಗಳೂ ಸಲ್ಲಿಸುತ್ತಿರುವ ಪ್ರಾಮಾಣಿಕ ಸೇವೆ ಕುರಿತು ಪ್ರಶಂಸೆ ವ್ಯಕ್ತಪಡಿಸಿದರು.
         ಕಾರ್ಯಕ್ರಮದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳ ಜನತೆಯ ಬಹುದಿನಗಳ ಬೇಡಿಕೆ ಈಡೇರಿದೆ. ವಿಜಯಪುರ ಜಿಲ್ಲೆ ರೈಲ್ವೆ ವಂಚಿತ ಜಿಲ್ಲೆಯಾಗಿದ್ದು, ಎನ್.ಟಿ.ಪಿ.ಸಿ. ಮತ್ತು ಡಬಲ್ ಲೈನ್ ಸ್ಥಾಪನೆ ನಂತರ ರೈಲ್ವೆ ಬೇಡಿಕೆ ಇನ್ನೂ ಹೆಚ್ಚಿದೆ. ಕಾರಣ ವಿಜಯಪುರದಿಂದ ತಿರುಪತಿ ಹಾಗೂ ಕರ್ನಾಟಕ ಎಕ್ಸಪ್ರೆಸ್ ರೈಲುಗಳ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಈಗ ಆರಂಭಿಸಿದ ವಿಜಯಪುರ-ಯಶವಂತಪುರ ರೈಲು ಸಮಯದಲ್ಲಿ ಬದಲಾವಣೆ ಮಾಡುವಂತೆ ಸಲಹೆ ನೀಡಿದರು.
         ಬಾಗಲಕೋಟೆ ಸಂಸದ ಪಿ.ಸಿ.ಗದ್ದಿಗೌಡರ ಅವರು ಐತಿಹಾಸಿಕ ಪ್ರಸಿದ್ದ ವಿಜಯಪುರ-ಬಾಗಲಕೋಟೆ ಜನರಿಗೆ ಇದು ಹೆಚ್ಚು ಅನೂಕೂಲಕರವಾಗಿದೆ ಎಂದು ಹೇಳಿದರು.
         ಬಾಗಲಕೋಟೆ ಶಾಸಕ ವೀರಣ್ಣ ಚರಂತಿಮಠ, ಈ ಅವಳಿ ಜಿಲ್ಲೆಗಳಲ್ಲಿ ರೈಲ್ವೆ ಅನಾನೂಕೂಲತೆ ಹೆಚ್ಚಾಗಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ರೈಲುಗಳ ಸೇವೆಯನ್ನು ಕಲ್ಪಿಸುವಂತೆ ಸಲಹೆ ನೀಡಿದರು.
         ಸಂಸದ ರಮೇಶ ಜಿಗಜಿಣಗಿ ಮಾತನಾಡಿ, ಈ ಹಿಂದೆ ಬೆಂಗಳೂರಿಗೆ ಆರಂಭಿಸಲಾಗಿದ್ದ ರೈಲು ಅನೇಕ ಕಾರಣಗಳಿಂದ ಸ್ಥಗಿತಗೊಳಿಸಲಾಗಿದೆ. ಈ ಬಾರಿ ಹೊಸಪೇಟೆ ಮಾರ್ಗವಾಗಿ ಈ ರೈಲು ಆರಂಭಿಸಿರುವುದು ಹೆಚ್ಚು ಸೂಕ್ತ. ಕೇಂದ್ರ ಸರ್ಕಾರದ ಮುತುವರ್ಜಿಯಿಂದಾಗಿ ವಿಜಯಪುರ ರೈಲು ನಿಲ್ದಾಣ ನವೀಕರಣಕ್ಕೆ ಹಣ ಬಿಡುಗಡೆಯಾಗಿದೆ. ಅಲಿಯಾಬಾದ್‍ನಲ್ಲಿ ಗೂಡ್ಸ್ ಶೆಡ್ ಹಾಗೂ ಡಬಲ್ ಲೈನ್ ಸಹ ನಿರ್ಮಿಸಲಾಗಿದೆ. ಈ ರೈಲಿನ ಸಮಯ ಬದಲಾವಣೆಗೆ ಸಚಿವರು ಸಹ ಭರವಸೆ ನೀಡಿರುವುದಾಗಿ ತಿಳಿಸಿದ ಅವರು, ನಗರದ ವಜ್ರ ಹನುಮಾನ ಆರ್‍ಓಬಿ ಕೆಲಸ ಮಂದಗತಿಯಲ್ಲಿ ನಡೆಯುತ್ತಿದ್ದು, ತೀವ್ರಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲು ಮನವಿ ಮಾಡಿದರು.
         ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ಶಾಸಕ ಶಿವಾನಂದ ಎಸ್.ಪಾಟೀಲ, ಶಾಸಕರಾದ ಸೋಮನಗೌಡ ಪಾಟೀಲ, ಸುನೀಲಗೌಡ ಪಾಟೀಲ, ಹಣಮಂತ ನಿರಾಣಿ, ಜಿಲ್ಲಾ ಪಂಚಾಯತ್ ಅಧ್ಯಕ್ಷ ಶಿವಯೋಗೆಪ್ಪ ನೇದಲಗಿ ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ, ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ, ಪ್ರಭಾರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದರೆಡ್ಡಿ ಇತರರು ಉಪಸ್ಥಿತರಿದ್ದರು.Conclusion:ವಿಜಯಪುರ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.