ETV Bharat / state

ಆಟೋದಲ್ಲಿ ಬಂದು ಮನೆಗಳ್ಳತನ: ಅಪ್ರಾಪ್ತ ಸೇರಿ ಮೂವರ ಬಂಧನ - Arrest of Vijayapura housekeeper

ಮನೆಗಳ್ಳತನ ಮಾಡುತ್ತಿದ್ದ ಓರ್ವ ಅಪ್ರಾಪ್ತ ಸೇರಿ ಮೂವರನ್ನು ಬಂಧಿಸುವಲ್ಲಿ ಜಲನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿಗಳು ಮನೆಯಲ್ಲಿ ಯಾರೂ ಇಲ್ಲದ ವೇಳೆ ಆಟೋದಲ್ಲಿ ಬಂದು ಮನೆಗಳ್ಳತನ ಮಾಡಿ ಪರಾರಿಯಾಗುತ್ತಿದ್ದರು ಎಂಬ ಮಾಹಿತಿ ದೊರೆತಿದೆ.

SP Anupam Agarwal announces reward for  Jalanagar police staff
ಮನೆಗಳ್ಳರ ಬಂಧಿಸಿದ ಪೊಲೀಸರಿಗೆ ಬಹುಮಾನ ಘೋಷಿಸಿದ ಎಸ್​ಪಿ ಅನುಪಮ್ ಅಗರವಾಲ್
author img

By

Published : Aug 22, 2020, 2:46 PM IST

ವಿಜಯಪುರ: ಮನೆಗಳ್ಳತನ ಮಾಡುತ್ತಿದ್ದ ಓರ್ವ ಅಪ್ರಾಪ್ತ ಸೇರಿ ಮೂವರನ್ನು ಇಲ್ಲಿನ ಜಲನಗರ ಪೊಲೀಸರು ಅರೆಸ್ಟ್‌ ಮಾಡಿದ್ದಾರೆ. ಆರೋಪಿಗಳಿಂದ 12 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಕಳ್ಳತನಕ್ಕೆ ಬಳಸುತ್ತಿದ್ದ ಆಟೋ ಜಪ್ತಿ ಮಾಡಿದ್ದಾರೆ.

ಮನೆಗಳ್ಳರ ಬಂಧಿಸಿದ ಪೊಲೀಸರಿಗೆ ಬಹುಮಾನ ಘೋಷಿಸಿದ ಎಸ್​ಪಿ ಅನುಪಮ್ ಅಗರವಾಲ್

ಬಂಧಿತರನ್ನು ಗೋಬಿಮಂಚೂರಿ ಮಾರಾಟ ಮಾಡುತ್ತಿದ್ದ ಗಣೇಶ ನಗರ ನಿವಾಸಿ ಕಿರಣ ವಿಶಾಲ ಶರ್ಮಾ, ಆಟೋರಿಕ್ಷಾ ಚಾಲಕ ವೀರೇಶ ಶಿವಾನಂದ ಬಂಥನಾಳ ಹಾಗೂ ಇನ್ನೊಬ್ಬ ಅಪ್ರಾಪ್ತ ಬಾಲಕ ಎಂದು ಗುರುತಿಸಲಾಗಿದೆ. ಇವರು ಮನೆಯಲ್ಲಿ ಯಾರೂ ಇಲ್ಲದ ವೇಳೆ ಆಟೋದಲ್ಲಿ ಬಂದು ಮನೆಗಳ್ಳತನ ಮಾಡಿ ಪರಾರಿಯಾಗುತ್ತಿದ್ದರು ಎಂಬ ಮಾಹಿತಿ ದೊರೆತಿದೆ.

ಜಲನಗರ ಪೊಲೀಸ್ ಠಾಣೆಯಲ್ಲಿ ಐದು ಪ್ರಕರಣ ಹಾಗೂ ಗಾಂಧಿಚೌಕ ಠಾಣೆ ವ್ಯಾಪ್ತಿಯಲ್ಲಿ ನಡೆದ ಮನೆಗಳ್ಳತನ ಪ್ರಕರಣವನ್ನು ಭೇದಿಸಿದ್ದಾರೆ. ಆರೋಪಿಗಳಿಂದ 190 ಗ್ರಾಂ ಚಿನ್ನ ಮತ್ತು 145 ಗ್ರಾಂ ಬೆಳ್ಳಿ ಜೊತೆಗೆ 1.50 ಲಕ್ಷ ರೂಪಾಯಿ ನಗದು, ಒಂದು ಲ್ಯಾಪ್​ಟ್ಯಾಪ್, ಒಂದು ಕ್ಯಾಮೆರಾ ವಶಪಡಿಸಿಕೊಂಡಿದ್ದಾರೆ.

ಪ್ರಕರಣ ಭೇದಿಸಿದ ಎಲ್ಲಾ ಪೊಲೀಸ್ ಸಿಬ್ಬಂದಿಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅನುಪಮ್ ಅಗರರ್ವಾಲ್ ಬಹುಮಾನ ಘೋಷಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.