ETV Bharat / state

ಮಕಾನದಾರ ಕುಟುಂಬಕ್ಕೆ ಪೊಲೀಸ​ರು ಕಿರುಕುಳ ನೀಡಿಲ್ಲ: ಎಸ್ಪಿ ಅಗರವಾಲ್ ಸ್ಪಷ್ಟನೆ

author img

By

Published : Nov 20, 2020, 2:57 PM IST

Updated : Nov 20, 2020, 5:31 PM IST

ಸೈಫಾನ್ ಮಕಾನದಾರ ಕುಟುಂಬಕ್ಕೆ ಪೊಲೀಸರು ಕಿರುಕುಳ ನೀಡಿಲ್ಲ. ಪೊಲೀಸರ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಎಸ್ಪಿ ಅಗರವಾಲ್ ಸ್ಪಷ್ಟನೆ ನೀಡಿದ್ದಾರೆ.

SP agarwal clarifies no police harassment to Makanadar family
ಸೈಫಾನ್ ಮಕಾನದಾರ ಕುಟುಂಬದ ಆರೋಪಕ್ಕೆ ಎಸ್ಪಿ ಅಗರವಾಲ್ ಸ್ಪಷ್ಟನೆ

ವಿಜಯಪುರ: ಆರೋಪಿ ಸೈಫಾನ್ ಮಕಾನದಾರ ಕುಟುಂಬಕ್ಕೆ ಪೊಲೀಸರು ಕಿರುಕುಳ ನೀಡಿಲ್ಲ. ನಮ್ಮ ತನಿಖೆಗೆ ಹೊಸ ರೂಪ‌‌ ನೀಡುತ್ತಿದ್ದಾರೆ ಎಂದು ಎಸ್ಪಿ ಅನುಪಮ್ ಅಗರವಾಲ್ ಹೇಳಿದರು.

ಇಂಡಿ ಪಿಎಸ್‌ಐ ಹಾಗೂ ಕೆಲವು ಕಾನ್ಸ್‌ಟೇಬಲ್‌ಗಳು ನಮ್ಮ ಕುಟುಂಬಕ್ಕೆ ಕಿರುಕುಳ ನೀಡುತ್ತಿದ್ದಾರೆ ಎಂದು ಮೆಹಮೂನ್‌ ಮಕಾನದಾರ ಎಸ್ಪಿ ಹಾಗೂ ಜಿಲ್ಲಾಧಿಕಾರಿಗೆ ದೂರು ನೀಡಿದ್ದರು. ಈ ಕುರಿತು ಸ್ಪಷ್ಟನೆ ನೀಡಿದ ಎಸ್ಪಿ ಅನುಪಮ್ ಅಗರವಾಲ್, ಆರೋಪಿ ಸೈಫಾನ್ ವಿರುದ್ಧ ಆಕ್ರಮ ಶಸ್ತ್ರಾಸ್ತ್ರ, ಸಾರ್ವಜನಿಕರಿಗೆ ತೊಂದರೆ, ಬಡ್ಡಿ ವಸೂಲಿಯಂತಹ ಹಲವು ಪ್ರಕರಣಗಳಿವೆ. 10 ವರ್ಷಗಳಿಂದ ವಿವಿಧ ಪ್ರಕರಣದ ಆರೋಪಿಯಾಗಿದ್ದು, ಗನ್ ಕಲ್ಚರ್ ಸೂತ್ರದಾರನಾಗಿದ್ದಾನೆ ಎಂದರು.

ಇನ್ನು ಇಂಡಿಯ ಓರ್ವ ಮಹಿಳೆಗೂ ಕೂಡ ಬಡ್ಡಿ ವ್ಯವಹಾರವಾಗಿ ಆತನ ಮೇಲೆ ಆರೋಪವಿದೆ. ಅಲ್ಲದೆ ಪಕ್ಕದ ಕಲಬುರಗಿ ಹಾಗೂ ಬಬಲೇಶ್ವರನಲ್ಲಿ ಆಕ್ರಮ ಶಸ್ತ್ರಾಸ್ತ್ರ ಕುರಿತು ಆತನ ಮೇಲೆ ಆರೋಪಗಳಿವೆ. ಈ ನಡುವೆ ಆರೋಪಿ ಸೈಫಾನ್ ಪುಣೆಯಲ್ಲಿದ್ದ. ಹೀಗಾಗಿ ನಮ್ಮ ಪೊಲೀಸ್ ತಂಡ ತಪಾಸಣೆ ನಡೆಸುವ ವೇಳೆ ಆತನ ಕುಟುಂಬಸ್ಥರು ತನಿಖೆಯನ್ನ ಬೇರೆ ರೂಪಕ್ಕೆ ತೆಗದುಕೊಂಡು ಹೋಗುತ್ತಿದ್ದಾರೆ. ಅಲ್ಲದೆ‌ ಪೊಲೀಸರ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ. ಆದರೂ ಡಿವೈಎಸ್‌ಪಿ ಮೂಲಕ ಕಿರುಕುಳ ಕುರಿತು ತನಿಖೆ ನಡೆಸುತ್ತೇವೆ ಎಂದು ಎಸ್ಪಿ ಭರವಸೆ ನೀಡಿದ್ದಾರೆ.

Last Updated : Nov 20, 2020, 5:31 PM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.