ETV Bharat / state

ಪ್ರತ್ಯೇಕ ಪ್ರಕರಣ: ಹಣಕ್ಕಾಗಿ ತಂದೆ ಕೊಲೆ ಮಾಡಿದ ಮಗ.. ಹೊಲಕ್ಕೆ ತಂದೆ ಭೇಟಿಗೆ ಹೋದ ಪುತ್ರ ಕಾಲುವೆಯಲ್ಲಿ ಬಿದ್ದು ಸಾವು - ETV Bharath Kannada news

30 ಲಕ್ಷ ಹಣವೇ ಸಾವಿಗೆ ಕಾರಣ - ಕಾಂಚಾಣದ ಆಸೆಗೆ ತಂದೆಯನ್ನೇ ಕೊಂದ ಮಗ - ಕೊಲೆಗೆ ತಾಯಿಯಿಂದಲೂ ಸಹಕಾರ

vijayapura
ವಿಜಯಪುರ
author img

By

Published : Feb 22, 2023, 12:08 PM IST

ಹಣಕ್ಕಾಗಿ ತಂದೆ ಕೊಲೆ ಮಾಡಿದ ಮಗ - ಎಸ್​ಪಿ ಹೆಚ್‌. ಡಿ. ಆನಂದ್​ ಕುಮಾರ್ ಮಾಹಿತಿ

ವಿಜಯಪುರ: ಹಣ ಕಂಡರೆ ಹೆಣವೂ ಬಾಯಿ ಬಿಡುತ್ತದೆ ಎಂಬ ಗಾದೆ ಇದೆ. ಮನುಷ್ಯ ಹಣದ ಆಸೆಗೆ ಸಂಬಂಧವನ್ನು ನೋಡುವುದಿಲ್ಲ ಎಂತಹಾ ಕೃತ್ಯಕ್ಕಾದರೂ ಇಳಿದು ಬಿಡುತ್ತಾನೆ. ಹಣದ ಲೋಭದಿಂದ ತಂದೆಯನ್ನೇ ಮಗ ಕೊಲೆ ಮಾಡಿರುವ ಪ್ರಕರಣ ವಿಜಯಪುರ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ಮಗ ಮತ್ತು ತಾಯಿ ಜೈಲು ಪಾಲಾಗಿದ್ದಾರೆ.

ಹಣ ಕೊಡದ್ದಕ್ಕೆ ಕೊಲೆ.. ತಂದೆ ಹಣ ಕೊಡಲಿಲ್ಲ ಎಂಬ ಸ್ನೆಹಿತರನ್ನು ಸೇರಿಸಿಕೊಂಡು ಮಲಗಿದ್ದ ವೇಳೆ ಕೊಲೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಈ ಸಂಬಂಧ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಹಣಕ್ಕಾಗಿ ಶಿವಾನಂದ ಕೋಟ್ಯಾಳ ಎಂಬುವವರ ಹತ್ಯೆಯಾಗಿದೆ. ಹತ್ಯೆಯಾದ ಶಿವಾನಂದ ಅವರ ಮಗ ಮುತ್ತುರಾಜ ಕೊಟ್ಯಾಳ್, ಅವರ ಪತ್ನಿ ಮಹಾದೇವಿ ಕೋಟ್ಯಾಳ, ಮಗನ ಸ್ನೇಹಿತ ಶ್ರೀಧರ್ ಹುಲೆಪ್ಪಗೋಳ ಅವರನ್ನು ಬಂಧಿಸಲಾಗಿದೆ.

ತಂದೆಯ ಬಳಿ 30ಲಕ್ಷ ಹಣ ಇರುವುದು ಮಗನಿಗೆ ತಿಳಿದಿತ್ತು. ಹಣದ ವಿಷಯಕ್ಕಾಗಿ ತಂದೆಯ ಜೊತೆ ಮನೆಯಲ್ಲಿ ಮಗ ದಿನಾಲು ಒತ್ತಾಯಿಸುತ್ತಿದ್ದ. ಹಣಕ್ಕಾಗಿ ಮಡದಿಯೂ ಗಂಡನನ್ನೂ ಪೀಡಿಸುತ್ತಿದ್ದಳು. ಹಣಕ್ಕಾಗಿ ದಿನಾಲು ಮನೆಯಲ್ಲಿ ಜಗಳ ನಡೆಯುತ್ತಿತ್ತು. ತಂದೆ ಹಣ ಕೊಟ್ಟಿಲ್ಲ ಎಂಬ ಕಾರಣಕ್ಕೆ ಮಗ ತನ್ನ ಸ್ನೇಹಿತನ್ನು ಸೇರಿಸಿಕೊಂಡು ಕೊಲೆಗೆ ಯೋಜನೆ ಮಾಡಿದ್ದಾನೆ. ತಂದೆ ಮಲಗಿರುವ ಸಮಯ ನೋಡಿಕೊಂಡು ತಲೆದಿಂಬಿನಿಂದ ಉಸಿರು ಕಟ್ಟಿಸಿ ಕೊಲೆ ಮಾಡಿದ್ದಾನೆ ಎಂದು ಪೊಲೀಸ್​ ವರಿಷ್ಠಾಧಿಕಾರಿ ಹೆಚ್​ ಡಿ ಆನಂದ ಕುಮಾರ್​ ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಬಬಲೇಶ್ವರ ಪೊಲೀಸ್ ಠಾಣೆಯ ಎಸ್​ಪಿ ಹೆಚ್‌. ಡಿ. ಆನಂದ್​ ಕುಮಾರ್​, ತಂದೆಯನ್ನು ಮಗ ಉಸಿರು ಕಟ್ಟಿಸಿ ಕೊಲೆ ಮಾಡಿದ್ದಾನೆ. ಮನೆಯಲ್ಲಿ ತಂದೆ ಮಗನ ನಡುವೆ ಹಣಕ್ಕಾಗಿ ಗಲಾಟೆ ನಡೆದಿದೆ. ಗಲಾಟೆ ನಡೆಯುತ್ತಿದ್ದ ಬಗ್ಗೆ ಹತ್ತಿರದ ಮನೆಯವರು ಮಾಹಿತಿ ನೀಡಿದ್ದಾರೆ. ಈ ವಿಚಾರವಾಗಿ ಮಗ ಮತ್ತು ತಂದೆಯ ನಡುವೆ ಮುನಿಸು ಉಂಟಾಗಿತ್ತು. ಮಗ ಸ್ನೇಹಿತನ ಸಹಾಯದಿಂದ ತಂದೆಯ ಕೊಲೆಗೆ ಪ್ಲಾನ್​ ಮಾಡಿದ್ದಾನೆ. ಅಲ್ಲದೇ ಮಗನೇ ತಂದೆ ಮಲಗಿರುವಾಗ ತಲೆದಿಂಬನ್ನು ಬಳಸಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಒಂದು ಕ್ವಿಂಟಲ್​ಗೂ ಅಧಿಕ ಚಿನ್ನ ಜಪ್ತಿ! ಡಿಆರ್​ಐ ಅಧಿಕಾರಿಗಳ ಭರ್ಜರಿ ಕಾರ್ಯಾಚರಣೆ

ಕಾಲುವೆಯಲ್ಲಿ ಜಾರಿ ಬಿದ್ದು ಬಾಲಕ ಸಾವು: ಕಾಲುವೆಯಲ್ಲಿ ಜಾರಿ ಬಿದ್ದು ಬಾಲಕ ಸಾವನ್ನಪ್ಪಿರುವ ಘಟನೆ ವಿಜಯಪುರ ಜಿಲ್ಲೆ ಕೊಲ್ಹಾರ ತಾಲೂಕಿನ ಚಿಕ್ಕ ಆಸಂಗಿ ಗ್ರಾಮದ ಹೊರ ಭಾಗದಲ್ಲಿ ನಡೆದಿದೆ. ಕಲ್ಲಯ್ಯ ಹಿರೇಮಠ (13) ಮೃತ ಬಾಲಕ ಎಂದು ಗುರುತಿಸಲಾಗಿದೆ. ಮಂಗಳವಾರ ಶಾಲೆಯಿಂದ ಮನೆಗೆ ಬಂದಿದ್ದ ಬಾಲಕ ಜಮೀನಿನಲ್ಲಿರೋ ತಂದೆ ಗಂಗಯ್ಯ ಅವರ ಭೇಟಿಗೆ ತೆರಳಿದ್ದ. ಈ ವೇಳೆ ಕಾಲು‌ ಜಾರಿ ತುಂಬಿ ಹರಿಯುತ್ತಿದ್ದ ಕಾಲುವೆಯಲ್ಲಿ ಬಿದ್ದು ಬಾಲಕ ಸಾವನ್ನಪ್ಪಿದ್ದಾನೆ.

ಮನೆಗೆ ಬಾರದ ಬಾಲಕನಿಗಾಗಿ ಶೋಧ‌ ನಡೆಸಿದ್ದ ಪೋಷಕರಿಗೆ ಇಂದು‌ ಬೆಳಗ್ಗೆ ಬಾಲಕನ ಶವ ಕಾಲುವೆಯಲ್ಲಿ ಪತ್ತೆಯಾಗಿದೆ. ಮುಳವಾಡ ಏತ‌ ನೀರಾವರಿ ಯೋಜನೆ ಮುಖ್ಯ ಕಾಲುವೆ ಬಳಿ ಘಟನೆ ನಡೆದಿದೆ. ಸ್ಥಳಕ್ಕೆ ಕೊಲ್ಹಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ: ಮಕ್ಕಳ ಅಕಾಲಿಕ ಮರಣದ ಬೇಸರ: ಅವಳಿ ಶಿಶುಗಳನ್ನೂ ಕೊಂದು ಸಾವಿಗೆ ಶರಣಾದ ತಾಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.