ETV Bharat / state

ಪುರಸಭೆ ದಾಖಲೆಗಳಲ್ಲಿ ಓಣಿಯ ಹೆಸರು ಮಾಯ : ಕಿಲ್ಲಾ ನಿವಾಸಿಯಿಂದ ಏಕಾಂಗಿ ಪ್ರತಿಭಟನೆ - solitary protest from Killa resident

ಪಟ್ಟಣದ ಕಿಲ್ಲಾ ಗಲ್ಲಿಯ ನಿವಾಸಿ ಉದಯ ರಾಯಚೂರು ಏಕಾಂಗಿಯಾಗಿ ಪ್ರತಿಭಟನೆ ನಡೆಸಿದವರು. ಪ್ರಾಚೀನ ಕಾಲದ ಈಶ್ವರಲಿಂಗ ದೇವಸ್ಥಾನ ಇದೆ. ಪ್ರಾಚೀನ ಲಕ್ಷ್ಮಿಬಾವಿ ಹಾಗೂ ಕೋಟೆ ಗೋಡೆಯೂ ಇದೆ. ಊರ ಅಗಸಿ ಬಾಗಿಲು ಹೊಂದಿದ್ದು, ಕಳೆದ 2017ರಿಂದ ಪುರಸಭೆಯ ದಾಖಲೆಗಳಲ್ಲಿ ಈ ಓಣಿಯ ಹೆಸರನ್ನೇ ರದ್ದು ಮಾಡಲಾಗಿದೆ..

Muddebihal
ಕಿಲ್ಲಾ ನಿವಾಸಿಯಿಂದ ಏಕಾಂಗಿ ಪ್ರತಿಭಟನೆ
author img

By

Published : Dec 9, 2020, 4:05 PM IST

ಮುದ್ದೇಬಿಹಾಳ : ಪಟ್ಟಣದ ಪ್ರಾಚೀನ ಕಾಲದ ಇತಿಹಾಸ ಹೊಂದಿರುವ ಕಿಲ್ಲಾ ಗಲ್ಲಿಯ ಹೆಸರು ಪುರಸಭೆಯ ದಾಖಲೆಗಳಲ್ಲಿ ರದ್ದುಗೊಳಿಸಲಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು ಎಂದು ನಿವಾಸಿಯೊಬ್ಬರು ಏಕಾಂಗಿಯಾಗಿ ಪುರಸಭೆಯ ಎದುರಿಗೆ ಬುಧವಾರ ದಿಢೀರ್ ಧರಣಿ ಆರಂಭಿಸಿದ್ದಾರೆ.

ಉದಯ ರಾಯಚೂರು ಏಕಾಂಗಿಯಾಗಿ ಪ್ರತಿಭಟನೆ ನಡೆಸಿದವರು..

ಪಟ್ಟಣದ ಕಿಲ್ಲಾ ಗಲ್ಲಿಯ ನಿವಾಸಿ ಉದಯ ರಾಯಚೂರು ಏಕಾಂಗಿಯಾಗಿ ಪ್ರತಿಭಟನೆ ನಡೆಸಿದವರು. ಪ್ರಾಚೀನ ಕಾಲದ ಈಶ್ವರಲಿಂಗ ದೇವಸ್ಥಾನ ಇದೆ. ಪ್ರಾಚೀನ ಲಕ್ಷ್ಮಿಬಾವಿ ಹಾಗೂ ಕೋಟೆ ಗೋಡೆಯೂ ಇದೆ. ಊರ ಅಗಸಿ ಬಾಗಿಲು ಹೊಂದಿದ್ದು, ಕಳೆದ 2017ರಿಂದ ಪುರಸಭೆಯ ದಾಖಲೆಗಳಲ್ಲಿ ಈ ಓಣಿಯ ಹೆಸರನ್ನೇ ರದ್ದು ಮಾಡಲಾಗಿದೆ.

ಅಲ್ಲದೇ ಕಿಲ್ಲಾದ ಓಣಿಯ ವಿಷಯ ಬಂದರೆ ಮೂಲಸೌಕರ್ಯಗಳ ಕೊರತೆಯೂ ಕಾಡುತ್ತಿದೆ. ಬೀದಿ ದೀಪ ಇಲ್ಲ, ಚರಂಡಿಗಳನ್ನು ಸರಿಯಾಗಿ ಶುಚಿಗೊಳಿಸುವುದಿಲ್ಲ. ಎಲ್ಲ ವಿಷಯಗಳಲ್ಲೂ ಕಿಲ್ಲಾವನ್ನು ಕಡೆಗಣಿಸಲಾಗಿದೆ. ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ದೂರಿದರು.

Muddebihal
ಕಿಲ್ಲಾ ಗಲ್ಲಿಯ ಹೆಸರು ಪುರಸಭೆಯ ದಾಖಲೆಗಳಲ್ಲಿ ರದ್ದು.. ಕ್ರಮಕ್ಕೆ ಆಗ್ರಹ

ಓದಿ: ಹಳ್ಳಕ್ಕೆ ಕಾರ್ಖಾನೆಯ ಕಲುಷಿತ ನೀರು ಬಿಡದಂತೆ ಆಗ್ರಹಿಸಿ ರಸ್ತೆ ತಡೆ

ಧರಣಿ ವಿಷಯ ತಿಳಿದ ಪುರಸಭೆ ಮುಖ್ಯಾಧಿಕಾರಿ ಗೋಪಾಲ ಕಾಸೆ, ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಆದರೂ ಧರಣಿ ನಿರತ ರಾಯಚೂರ ಮಾತ್ರ ತಮ್ಮ ಪಟ್ಟು ಸಡಿಲಿಸಲಿಲ್ಲ‌.

ಪುರಸಭೆಯಿಂದ ಜಿಲ್ಲಾಧಿಕಾರಿಗೆ ತನಿಖೆ ನಡೆಸಲು ಪತ್ರ ಬರೆಯಬೇಕು ಎಂದು ಒತ್ತಾಯಿಸಿದರು. ಅಲ್ಲದೇ ಅಲ್ಲಿಯವರೆಗೂ ಧರಣಿ ಅಂತ್ಯಗೊಳಿಸುವುದಿಲ್ಲ ಎಂದರು.

ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಅಶೋಕ ವನಹಳ್ಳಿ, ಭೋವಿ ಸಮಾಜದ ಮುಖಂಡ ಪರಶುರಾಮ ನಾಲತವಾಡ, ಮುಖಂಡ ಹುಸೇನ್ ಮುಲ್ಲಾ ಸೇರಿದಂತೆ ಇತರರು ಇದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.