ETV Bharat / state

ವಿಜಯಪುರದ ಸಿದ್ಧೇಶ್ವರ ಸಹಕಾರಿ ಬ್ಯಾಂಕ್ ನಿರ್ದೇಶಕರ ಚುನಾವಣಾ ಫಲಿತಾಂಶ ಪ್ರಕಟ - Siddheshwar Cooperative Bank

ಸಿದ್ಧೇಶ್ವರ ಸಹಕಾರಿ ಬ್ಯಾಂಕ್‌ಗೆ ನಡೆದ ನಿರ್ದೇಶಕರ ಚುನಾವಣೆಯ ಫಲಿತಾಂಶ ಭಾನುವಾರ ಪ್ರಕಟಗೊಂಡಿದೆ. ಒಟ್ಟು 37 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದು, 19 ಜನ ಅಭ್ಯರ್ಥಿಗಳು ಬ್ಯಾಂಕ್‌ಗೆ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.

Vijaypur
ಸಿದ್ದೇಶ್ವರ ಸಹಕಾರಿ ಬ್ಯಾಂಕ್ ನಿರ್ದೇಶಕರ ಚುನಾವಣಾ ಫಲಿತಾಂಶ ಪ್ರಕಟ
author img

By

Published : Nov 9, 2020, 7:38 AM IST

ವಿಜಯಪುರ: ನಗರದ ಪ್ರತಿಷ್ಠಿತ ಸಿದ್ಧೇಶ್ವರ ಸಹಕಾರಿ ಬ್ಯಾಂಕ್‌ಗೆ ನಡೆದ ನಿರ್ದೇಶಕರ ಚುನಾವಣೆಯ ಫಲಿತಾಂಶ ಭಾನುವಾರ ಪ್ರಕಟಗೊಂಡಿದೆ. 19 ಸ್ಥಾನಗಳ ಪೈಕಿ 18 ಮಂದಿ ಹಳೆಯ ನಿರ್ದೇಶಕರು ಮರು ಆಯ್ಕೆಯಾಗಿದ್ದಾರೆ.

ನಗರದ ಎಸ್‌ಎಸ್ ಹೈಸ್ಕೂಲ್ ಮೈದಾನಲ್ಲಿ ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆವರಿಗೂ ಮತದಾನ ನಡೆಸಲಾಗಿತ್ತು. ಬಳಿಕ ಮತ ಎಣಿಕೆ‌ ಆರಂಭಿಸಲಾಯಿತು.

ಸಿದ್ದೇಶ್ವರ ಸಹಕಾರಿ ಬ್ಯಾಂಕ್ ನಿರ್ದೇಶಕರ ಚುನಾವಣಾ ಫಲಿತಾಂಶ ಪ್ರಕಟ: ಪಟಾಕಿ ಸಿಡಿಸಿ ಸಂಭ್ರಮಾಚರಣೆ..

ಸಾಮಾನ್ಯ ಕ್ಷೇತದಿಂದ ಶ್ರೀ ಹರ್ಷಾ ಶಿವಶರಣ ಪಾಟೀಲ್( 3078 ಮತ), ಗುರುಪಾದಯ್ಯ ಶ್ರೀಶೈಲ್ ಗಚ್ಚಿನಮಠ(2997ಮತ), ಸುರೇಶ್ ಗುರುಲಿಂಗಪ್ಪ ಗಚ್ಚಿನಕಟ್ಟಿ (2806 ಮತ), ವಿಜಯಕುಮಾರ್ ರೇವಣಸಿದ್ದಪ್ಪ ಅವರಂಗಬಾದ( 2843 ಮತ), ವಿಶ್ವನಾಥ್ ಶಿವನಗೌಡ ಪಾಟೀಲ(ಮುಸಬಿನಾಳ) (2801ಮತ),ಈರಣ್ಣ ಮಲ್ಲಪ್ಪ ಪಟ್ಟಣಶೆಟ್ಟಿ (2667ಮತ), ರಮೇಶ್ ಹನುಮಂತ್ ಬಿದನೂರು (2491 ಮತ), ರವೀಂದ್ರ ಶಂಕರ್ ಬಿಜ್ಜರಗಿ (2452ಮತ), ರಾಜೇಂದ್ರ ಮಲಕನಗೌಡ ಪಾಟೀಲ (ಉಪ್ಪಲದಿನ್ನಿ)( 2547ಮತ), ಡಾ.ವಿಜಯಕುಮಾರ್ ನಾನಾಸಾಹೇಬ್ ಪಾಟೀಲ್( ಮುಳವಾಡ), (2536 ಮತ), ವಿಜಯಕುಮಾರ್ ದುಂಡಪ್ಪ ಇಂಜೇರಿ (2246 ಮತ), ವೈಜನಾಥ್ ದುಂಡಯ್ಯ ಕರ್ಪೂರಮಠ (2241 ಮತ), ಶಾಂತಪ್ಪ ಸದಾಶಿವಪ್ಪ ಜತ್ತಿ 2199 ಮತಗಳು ಪಡೆದು ವಿಜಯ ಗಳಿಸಿದರು.

ಮಹಿಳಾ ಮೀಸಲು ಕ್ಷೇತ್ರದಿಂದ ಸೌಭಾಗ್ಯ ಸೋಮನಾಥ ಭೋಗಶೆಟ್ಟಿ (3306 ಮತ ), ಬೋರಮ್ಮ ಬಾಬು ಗೊಬ್ಬೂರ( 2745 ಮತ), ಹಿಂದುಳಿದ ಪ್ರವರ್ಗ 'ಎ' ಕ್ಷೇತ್ರದಲ್ಲಿ: ಗುರುರಾಜ್ ಸಿದ್ದಪ್ಪ ಗಂಗನಹಳ್ಳಿ 3089 ಮತ ಪಡೆದು ಜಯ ಗಳಿಸಿದರೆ, ಹಿಂದುಳಿದ ಪ್ರವರ್ಗ 'ಬ' ಕ್ಷೇತ್ರದಿಂದ ಪ್ರಕಾಶ್ ಶಿವಪ್ಪ ಬಗಲಿ 2525 ಮತ ಪಡೆದು ಆಯ್ಕೆಯಾಗಿದ್ದಾರೆ. ಪರಿಶಿಷ್ಟ ಜಾತಿ ಕ್ಷೇತ್ರದಿಂದ ಸಾಯಬಣ್ಣ ಸಿದ್ದಪ್ಪ ಭೋವಿ ಹಾಗೂ ಪರಿಶಿಷ್ಟ ಪಂಗಡ ಕ್ಷೇತ್ರದಿಂದ ಅಮೋಘಸಿದ್ಧ ಮಳಸಿದ್ಧ ನಾಯ್ಕೋಡಿ 2240 ಮತ ಪಡೆದು‌ ವಿಜಯ ಸಾಧಿಸಿದ್ದಾರೆ. ಸಿದ್ದೇಶ್ವರ ಸಹಕಾರಿ ಬ್ಯಾಂಕ್ ನಿರ್ದೇಶಕರಾಗಿ 19 ಜನ ಆಯ್ಕೆ‌ಯಾಗಿದ್ದಾರೆ ಎಂದು ರಿಟರ್ನಿಂಗ್ ಆಫೀಸರ್ ಹಾಗೂ ಚುನಾವಣಾಧಿಕಾರಿ ಪಿ.ಬಿ. ಕಾಳಗಿ ತಿಳಿಸಿದ್ದಾರೆ.

ಒಟ್ಟು 37 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದರು. 19 ಜನ ಅಭ್ಯರ್ಥಿಗಳು ಬ್ಯಾಂಕ್‌ಗೆ ನಿರ್ದೇಶಕರಾಗಿ ಆಯ್ಕೆಗೊಂಡಿದ್ದಾರೆ. ಇನ್ನು 6,347 ಜನ ಮತದಾರರ ಪೈಕಿ ಈ ಭಾರಿ ಪತ್ರಿಶತ 81.11 ರಷ್ಟು ಮತದಾನವಾಗಿದೆ. 5,148 ಜನರು ಮತದಾನ ಮಾಡಿದ್ದಾರೆ. ಈ ಪೈಕಿ 1,102 ಮತಗಳು ತಿರಸ್ಕೃತಗೊಂಡಿವೆ. ಒಬ್ಬರಿಗೆ 6 ಮತ ಚಲಾಯಿಸಲು ಅವಕಾಶ ನೀಡಲಾಗಿತ್ತು. ಚುನಾವಣೆಯಲ್ಲಿ ಸುಮಾರು 300 ಸಿಬ್ಬಂದಿ ಕರ್ತವ್ಯ ನಿರ್ವಹಿಸಿದ್ದಾರೆ ಎಂದು ಚುನಾವಣಾಧಿಕಾರಿ ಮಾಹಿತಿ ನೀಡಿದ್ದಾರೆ.

ಒಂದು ಸ್ಥಾನಕ್ಕೆ ಹೊಸ ಅಭ್ಯರ್ಥಿ ಆಯ್ಕೆ: ಸಿದ್ದೇಶ್ವರ ಸಹಕಾರಿ ಬ್ಯಾಂಕ್ ನಿರ್ದೇಶಕರಾಗಿ ಪರಿಶಿಷ್ಟ ಪಂಗಡ ಕ್ಷೇತಕ್ಕೆ ಹೊಸ ಅಭ್ಯರ್ಥಿ ಅಮೋಘಸಿದ್ದ ನಾಯ್ಕೋಡಿ ಆಯ್ಕೆಗೊಂಡರು.

ಪಟಾಕಿ ಸಿಡಿಸಿ ಸಂಭ್ರಮಿಸಿದ ಜನರು: ತಡರಾತ್ರಿ ಚುನಾವಣಾ ಫಲಿತಾಂಶ ಪ್ರಕಟವಾಗುತ್ತಿದಂತೆ, ಬೆಂಬಲಿತ ಅಭ್ಯರ್ಥಿಗಳು ‌ಜಯಗಳಿಸಿದ ಸಂಭ್ರಮದಲ್ಲಿ ಜಾನಪದ ವಾದ್ಯಗಳ ಸದ್ದಿಗೆ ಕುಣಿದು ಕುಪ್ಪಳಿಸಿದರು. ‌ಅಭಿಮಾನಿಗಳು ಎಸ್‌ಎಸ್ ಹೈಸ್ಕೂಲ್ ಮುಂಭಾಗದ ರಸ್ತೆಯಲ್ಲಿ ಪಟಾಕಿ ಸಿಡಿಸಿದರು. ಅಲ್ಲದೆ ಕೆಸರಿ ಬಣ್ಣ ಬಳಿದುಕೊಂಡು ಸಂಭ್ರಮಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.