ETV Bharat / state

ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿ ಸ್ಥಾನದ ಹುಚ್ಚು ಹಿಡಿದಿದೆ: ಈಶ್ವರಪ್ಪ - undefined

ಸಿದ್ದರಾಮಯ್ಯ ಹುಚ್ಚುಚ್ಚಾಗಿ ಮಾತನಾಡಿದರೆ ಅವರನ್ನು ಟೀಕೆ ಮಾಡಲು ಯಾರೂ ಹೋಗುವುದಿಲ್ಲ. ನಾನೇ ಮುಖ್ಯಮಂತ್ರಿ ಎಂದು ಪದೇ ಪದೇ ಅವರು ಹೇಳುತ್ತಿದ್ದು, ಇಂತವರನ್ನು ನಾನು ನನ್ನ ಜೀವನದಲ್ಲಿ ಕಂಡಿಲ್ಲ ಎಂದು ಕೆ.ಎಸ್.ಈಶ್ವರಪ್ಪ ಟೀಕಿಸಿದ್ದಾರೆ.

ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ
author img

By

Published : May 13, 2019, 6:10 PM IST

ವಿಜಯಪುರ: ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿ ಸ್ಥಾನದ ಹುಚ್ಚು ಹಿಡಿದ್ದಿದ್ದು, ಹುಚ್ಚುಚ್ಚಾಗಿ ಮಾತನಾಡಿದರೆ ನಾಳೆ ಯಾರು ಸಿದ್ದರಾಮಯ್ಯನ ಬಗ್ಗೆ ಟೀಕೆ ಮಾಡಲು ಹೋಗುವುದಿಲ್ಲ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಗುಡುಗಿದ್ದಾರೆ.

ನಗರದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇದೇ ರೀತಿ ಹುಚ್ಚುಚ್ಚಾಗಿ ಮಾತನಾಡಿದರೆ ನಾಳೆ ಯಾರು ಸಿದ್ದರಾಮಯ್ಯನ ಬಗ್ಗೆ ಟೀಕೆ ಮಾಡಲು ಹೋಗುವುದಿಲ್ಲ. ನಾನೇ ಮುಖ್ಯಮಂತ್ರಿ ಎಂದು ಪದೇ ಪದೇ ಅವರು ಹೇಳುತ್ತಿದ್ದು, ಇಂತವರನ್ನು ನಾನು ನನ್ನ ಜೀವನದಲ್ಲಿ ಕಂಡಿಲ್ಲ. ವಾಟಾಳ್​ ನಾಗರಾಜ್​ ಕೂಡ ಈ ರೀತಿ ಹೇಳಿಲ್ಲ. ನನ್ನದು ಒಂದು ಪಕ್ಷ ಇದೆ. ಅನೇಕ ಚುನಾವಣೆಯಲ್ಲಿ ಭಾಗವಹಿಸುತ್ತೇವೆ. ನನ್ನ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿದ್ದರೆ ವಿನಾ ನಾನೇ ಮುಖ್ಯಮಂತ್ರಿ ಆಗುತ್ತೇನೆ ಎಂದು ವಾಟಾಳ್​ ಹೇಳಿಲ್ಲ ಎಂದರು.

ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ

ಆದರೆ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಸ್ಥಾನಕ್ಕೆ ಹುಚ್ಚು ಹಿಡಿಸಿಕೊಂಡಿದ್ದು, ಹಗಲು ರಾತ್ರಿ ಆ ಸ್ಥಾನದ ಕನಸು ಕಾಣುತ್ತಿದ್ದಾರೆ. ಮುಖ್ಯಮಂತ್ರಿ ಸ್ಥಾನದ ಬಗ್ಗೆ ಹುಚ್ಚು ಹಿಡಿದಿರುವ ಇವರಿಗೆ ಸರಿಯಾದ ಟ್ರೀಟ್​ಮೆಂಟ್​ ಕೊಡಿಸಿ ಎಂದು ಕಾಂಗ್ರೆಸ್​​ ನಾಯಕರಿಗೆ ಒತ್ತಾಯ ಮಾಡುತ್ತೀನಿ ಎಂದರು.

ನಮ್ಮದು ಶಿಸ್ತಿನ ಪಕ್ಷ. ಯಾರನ್ನು ಮುಖ್ಯಮಂತ್ರಿ ಮಾಡಬೇಕು ಎಂಬುವುದರ ಕುರಿತು ಚರ್ಚೆ ಮಾಡುತ್ತೇವೆ. ಸಿದ್ದರಾಮಯ್ಯನ ಹಾಗೆ ನನಗೇನು ಹುಚ್ಚು ಹಿಡಿದಿಲ್ಲ. ನಮ್ಮ ಪಕ್ಷದಲ್ಲಿ ವ್ಯವಸ್ಥೆ ಇದೆ. ಎಲ್ಲರೂ ಕೂತು ಚರ್ಚೆ ಮಾಡಿ ತೀರ್ಮಾನಿಸುತ್ತೇವೆ. ನಿನ್ನೆ ತನಕ ಆ ಪಕ್ಷದಲ್ಲೂ ಶಿಸ್ತು ಇತ್ತು. ಯಾವಾಗ ಈ ಹುಚ್ಚು ಹಿಡಿದ ಮನುಷ್ಯ ಬಂದ ನಂತರ ಶಿಸ್ತು ಹೋಗಿದೆ ಎಂದು ವ್ಯಂಗ್ಯವಾಡಿದರು.

ಇಡೀ ಪ್ರಪಂಚ ಮೋದಿ ಪ್ರಧಾನಿ ಆಗಬೇಕು ಎಂದು ಅಪೇಕ್ಷ ಪಡ್ತಿದೆ. ಆದರೆ ಖರ್ಗೆ ಮಾತ್ರ ಮೋದಿ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ. ಖರ್ಗೆ ಅವರು ಮೊದಲು ತಮ್ಮ ಪಕ್ಷದ ಬಗ್ಗೆ ನೋಡಿಕೊಳ್ಳಲಿ. ಸಿದ್ದರಾಮಯ್ಯನಿಗೆ ಬಾಯಿ ಮುಚ್ಕೊಂಡು ಇರಿ ಅಂತ ಹೇಳೋದಿಕ್ಕೆ ಆಗಲ್ವಾ? ಖರ್ಗೆಗೆ ಆ ತಾಕತ್ತು ಇಲ್ವಾ ಎಂದು ಪ್ರಶ್ನಿಸಿದರು.

ಯಡಿಯೂರಪ್ಪ ಬಳಿಕ ನಾನೇ ಸಿಎಂ ಎಂದ ಯತ್ನಾಳ್​​ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಈಶ್ವರಪ್ಪ, ಆತ ಇನ್ನೊಬ್ಬ ಹುಚ್ಚ ಬಿಡ್ರಿ ಎಂದರು.

sample description

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.