ETV Bharat / state

ವಿಜಯಪುರದ ಮುತ್ತೂಟ್​ ಫೈನಾನ್ಸ್​ನಲ್ಲಿ ಬಂದೂಕು ತೋರಿಸಿ ದರೋಡೆಗೆ ಯತ್ನ! - ಎಪಿಎಂಸಿ ಪೊಲೀಸರು

ಹಾಡಹಗಲೇ ಮುತ್ತೂಟ್ ಫೈನಾನ್ಸ್​ನಲ್ಲಿ ಕಳ್ಳತನಕ್ಕೆ ಯತ್ನಿಸಿದ ಘಟನೆ ವಿಜಯಪುರ ನಗರದಲ್ಲಿ ನಡೆದಿದೆ.

show-gun-and-attempt-robbery-at-vijayapur-muthoot-finance

author img

By

Published : Mar 2, 2020, 11:11 AM IST

Updated : Mar 2, 2020, 12:06 PM IST

ವಿಜಯಪುರ: ನಾಲ್ಕು ಜನ ದುಷ್ಕರ್ಮಿಗಳು‌ ಹಾಡಹಗಲೇ ಮುತ್ತೂಟ್ ಫೈನಾನ್ಸ್​ನಲ್ಲಿ ಕಳ್ಳತನಕ್ಕೆ ಯತ್ನಿಸಿರುವ ಘಟನೆ ವಿಜಯಪುರ ನಗರದಲ್ಲಿ ನಡೆದಿದೆ.

ಮುತ್ತೂಟ್​ ಫೈನಾನ್ಸ್​ನಲ್ಲಿ ಬಂದೂಕು ತೋರಿಸಿ ದರೋಡೆಗೆ ಯತ್ನ

ನಗರದ ಆಶ್ರಮ ರಸ್ತೆಯಲ್ಲಿರುವ ಮೂತ್ತೂಟ್ ಫೈನಾನ್ಸ್​ನಲ್ಲಿ ನಾಲ್ಕು‌ ಜನ ಖದೀಮರು ದರೋಡೆಗೆ ಯತ್ನಿಸಿದ್ದಾರೆ. ಶಸ್ತ್ರಾಸ್ತ್ರದ ಜೊತೆಗೆ ಫೈನಾನ್ಸ್ ಕಚೇರಿ ಒಳಗೆ ಬಂದು ಹಣವಿಟ್ಟ ಭದ್ರತಾ ತಿಜೋರಿ ತೆಗೆಯುಂತೆ ಸಿಬ್ಬಂದಿಗೆ ಕಳ್ಳರು ಆವಾಜ್ ಹಾಕಿದ್ದಾರೆ‌.

ಬಂದೂಕು ಹಿಡಿದು ಫೈನಾನ್ಸ್ ಸಿಬ್ಬಂದಿಗೆ ಬೆದರಿಕೆ ಹಾಕಿದ್ದಾರೆ. ತಕ್ಷಣವೇ ಫೈನಾನ್ಸ್ ಸಿಬ್ಬಂದಿ ಸೈರನ್ ಆನ್ ಮಾಡಿದಾಗ ನಾಲ್ಕು ಜನ ದರೋಡೆಕೋರರು ಸ್ಥಳದಿಂದ ಪರಾರಿಯಾಗಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಡಿವೈಎಸ್‌ಪಿ ಲಕ್ಷ್ಮೀನಾರಾಯಣ ಹಾಗೂ ಎಪಿಎಂಸಿ ಪೊಲೀಸರ ತಂಡ ಘಟನಾ ಸ್ಥಳಕ್ಕೆ ಬಂದು ಮಾಹಿತಿ ಕಲೆಹಾಕುತ್ತಿದೆ.

Last Updated : Mar 2, 2020, 12:06 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.