ETV Bharat / state

ಭೀಮಾ ತೀರದ ಗುಂಡಿನ ದಾಳಿ ಪ್ರಕರಣ: ಮಹಾದೇವ ಸಾಹುಕಾರನ ಕಾರು ಚಾಲಕ ಸಾವು - ವಿಜಯಪುರ ಗುಂಡಿನ ದಾಳಿ ಪ್ರಕರಣ

ದುಷ್ಕರ್ಮಿಗಳ ಗುಂಡಿನ ದಾಳಿಯಿಂದ ಗಾಯಗೊಂಡಿದ್ದ ಭೀಮಾ ತೀರದ ನಟೋರಿಯಸ್​ ಮಹಾದೇವ ಸಾಹುಕಾರ ಭೈರಗೊಂಡ ಅವರ ಕಾರು ಚಾಲಕ ಮೃತಪಟ್ಟಿದ್ದಾನೆ. ನಿನ್ನೆ ವಿಜಯಪುರ ಜಿಲ್ಲೆಯ ಕನ್ನಾಳ್​ ಬಳಿ ನಡೆದಿದ್ದ ಗುಂಡಿನ ದಾಳಿ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದ, ಇಂದು ಮತ್ತೋರ್ವ ಕೊನೆಯುಸಿರೆಳೆದಿದ್ದಾನೆ.

Shoot out case : Mahadev Sahukara Car driver dide
ಮಹಾದೇವ ಸಾಹುಕಾರ ಭೈರಗೊಂಡನ ಕಾರು ಚಾಲಕ ಸಾವು
author img

By

Published : Nov 3, 2020, 8:58 AM IST

Updated : Nov 3, 2020, 9:05 AM IST

ವಿಜಯಪುರ: ಭೀಮಾ ತೀರದ ನಟೋರಿಯಸ್ ಮಹಾದೇವ ಸಾಹುಕಾರ ಭೈರಗೊಂಡನ ಕಾರು ಚಾಲಕ ಲಕ್ಷ್ಮಣ ದಿಂಡೋರೆ (27) ಮೃತಪಟ್ಟಿದ್ದಾನೆ.

ನಿನ್ನೆ ಕನ್ನಾಳ ಕ್ರಾಸ್ ಬಳಿ ನಡೆದ ಗುಂಡಿನ ದಾಳಿಯಲ್ಲಿ ಲಕ್ಷ್ಮಣನಿಗೆ ಒಂದು ಗುಂಡು ತಗುಲಿತ್ತು. ಇಂದು ಬೆಳಗ್ಗೆ 5:45 ಕ್ಕೆ ಚಿಕಿತ್ಸೆ ಫಲಕಾರಿಯಾಗದೆ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ ಎಂದು ಎಸ್ಪಿ ಅನುಪಮ್ ಅಗರವಾಲ್ 'ಈಟಿವಿ ಭಾರತ'ಕ್ಕೆ ಮಾಹಿತಿ ನೀಡಿದ್ದಾರೆ.

ಸೋಮವಾರ ಮಧ್ಯಾಹ್ನ ಮಹಾದೇವ ಸಾಹುಕಾರ ಭೈರಗೊಂಡ ವಿಜಯಪುರದಿಂದ ಚಡಚಣ ಕಡೆಗೆ ಕಾರಿನಲ್ಲಿ ತೆರಳುತ್ತಿದ್ದಾಗ, ಅರಕೇರಿ ತಾಂಡಾ ಬಳಿಯ ರಾಷ್ಟ್ರೀಯ ಹೆದ್ದಾರಿಯ ಕನ್ನಾಳ ಕ್ರಾಸ್​ನಲ್ಲಿ ದುಷ್ಕರ್ಮಿಗಳು ಜೆಸಿಬಿ ಯಂತ್ರ ಹಾಯಿಸಿ, ಬಳಿಕ ಗುಂಡಿನ ದಾಳಿ ನಡೆಸಿದ್ದರು. ದಾಳಿಯಲ್ಲಿ ಆತನ ಸಹಚರ ಬಾಬುರಾಯ (64) ಸ್ಥಳದಲ್ಲೇ ಮೃತಪಟ್ಟಿದ್ದ. ಮಹಾದೇವ ಸಾಹುಕಾರ ಭೈರಗೊಂಡಗೆ ಮೂರು ಗುಂಡು ತಗುಲಿದ್ದು, ವಿಜಯಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಹೈದರಾಬಾದ್​ಗೆ ಶಿಫ್ಟ್: ಮೂರು ಗುಂಡು ತಗುಲಿ ವಿಜಯಪುರದ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಹಾದೇವ ಸಾಹುಕಾರ ಭೈರಗೊಂಡನನ್ನು ಹೆಚ್ಚಿನ ಚಿಕಿತ್ಸೆಗೆ ಹೈದರಾಬಾದ್​ಗೆ ಕರೆದೊಯ್ಯುವ ಸಾಧ್ಯತೆಗಳಿವೆ.

Last Updated : Nov 3, 2020, 9:05 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.