ವಿಜಯಪುರ: ನಗರದಲ್ಲಿ ನಡೆದ ಅದ್ಧೂರಿ ಶಿವಾಜಿ ಜಯಂತಿ ಉತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ತಪ್ಪಿಯೂ ಟಿಪ್ಪು ಸುಲ್ತಾನ್ ಬೆಂಬಲಿಗರಿಗೆ ವೋಟು ಹಾಕಬೇಡಿ, ಇನ್ಮುಂದೆ ಟಿಪ್ಪು ಸುಲ್ತಾನ್ ಗೆಲ್ಲೋದಿಲ್ಲ. ಶಿವಾಜಿ ಮಹಾರಾಜರ ಭಗವಾಧ್ವಜ ಗೆಲ್ಲುತ್ತದೆ ಎಂದು ಯತ್ನಾಳ್ ಭವಿಷ್ಯ ನುಡಿದರು.
ನನ್ನ ಕೆಡವೋಕೆ 50 ಕೋಟಿ ಖರ್ಚು ಮಾಡ್ತಾರಂತೆ.. ನನ್ನ ಕೆಡವಲು ಬಿಜಾಪುರಕ್ಕೆ ಬಹಳ ರೊಕ್ಕ ಬರೋದಿದೆ, ಬಸನಗೌಡನನ್ನು ಕೆಡವೋಕೆ 50 ಕೋಟಿ ಖರ್ಚು ಮಾಡ್ತಾರಂತೆ, ನನ್ನ ಸೋಲಿಸೋಕೆ ಪಕ್ಕದ ಜಿಲ್ಲೆಯವ ಹಾಗೂ ಬೆಂಗಳೂರಲ್ಲಿ ಒಬ್ಬ ರೆಡಿಯಾಗಿದ್ದಾರೆ. ಬರಲಿ ಅವರು ಕೊಡೊ 50 ಕೋಟಿ ರೂ.ಯಲ್ಲಿ ಎಲ್ಲರೂ ಡಾಬಾಗಳಲ್ಲಿ ಫುಲ್ ಊಟ ಮಾಡಿ, ಹೊಸ ಹೊಸ ಬಟ್ಟೆ ತಗೊಳ್ಳಿ, 15 ದಿನ ಮಜಾ ಮಾಡಿ, ವೋಟ್ ಮಾತ್ರ ನನಗೆ ಹಾಕಿ ಎಂದು ಯತ್ನಾಳ್ ಹೇಳಿದರು. ಶಿವಾಜಿ ಮಹಾರಾಜರ ಸಂಕಲ್ಪ ಈಡೇರಿಸಬೇಕಿದೆ, ದೇಶಕ್ಕೆ ಒಬ್ಬ ಒಳ್ಳೆಯ ಪ್ರಧಾನಿ ಸಿಕ್ಕಿದ್ದಾರೆ ಎಂದು ಯತ್ನಾಳ್ ಮೋದಿಯವರನ್ನು ಕೊಂಡಾಡಿದರು. ಈ ವೇಳೆ ಯತ್ನಾಳ್ ಭಾಷಣದ ನಡುವೆ ಮೋದಿ.. ಮೋದಿ.. ಎಂದು ಜನರು ಕೂಗಿದರು.
ಮುಂದುವರಿದು, ನಾನು ಹಿಂದೂ, ಆದರೆ ಹಿಂದೂತ್ವದ ವಿರೋಧಿ ಎಂದ ಸಿದ್ದರಾಮಯ್ಯ ವಿರುದ್ಧ ಯತ್ನಾಳ್ ವಾಗ್ದಾಳಿ ನಡೆಸಿದರು. "ನಾನು ಅಪ್ಪಗ ಹುಟ್ಟಿದ್ದ ಖರೇ ಐತಿ, ಆದ್ರ ಗ್ಯಾರಂಟಿ ಇಲ್ಲ" . ನಾನು ಕುಂಕುಮ ಹಚ್ಚೊಲ್ಲ, ನಮಾಜ್ ಟೋಪಿ ಹಾಕೋಕೆ ರೆಡಿ.. ರೇಶ್ಮೆ ಪಟಗಾ ಧರಿಸಲ್ಲ, ಅನ್ಯಕೋಮಿನ ಟೋಪಿ ಹಾಕ್ತೀನಿ ಎನ್ನುವಂತಿದ್ದಾರೆ ಎಂದು ಸಿದ್ದರಾಮಯ್ಯ ವಿರುದ್ಧ ಪರೋಕ್ಷವಾಗಿ ಲೇವಡಿ ಮಾಡಿದರು. ಟಿಪ್ಪು ಮೆರವಣಿಗೆ ಮಾಡುವ ಕೆಲ ಹಿಂದೂಗಳು ನಮ್ಮ ದೇಶದಲ್ಲಿದ್ದಾರೆ ಎಂದು ಆಕ್ರೋಶ ಹೊರ ಹಾಕಿದರು. ಛತ್ರಪತಿ ಶಿವಾಜಿ ಯುದ್ಧಕ್ಕೆ ಹೊರಟರೆ ಅವರ ಸೈನ್ಯದಲ್ಲಿ ಮುಸ್ಲಿಂ ಯೋಧರು ಇರುತ್ತಿದ್ದರು. ಯುದ್ಧ ಗೆದ್ದ ಮೇಲೆ ವಿರೋಧಿ ರಾಜ್ಯದ ಹೆಣ್ಣು ಮಕ್ಕಳಿಗೆ ಶಿವಾಜಿ ಮಹಾರಾಜ ಭದ್ರತೆ ನೀಡುತ್ತಿದ್ದರು.
ಹೆಣ್ಣು ಮಕ್ಕಳ ವಿರುದ್ಧ ಯಾರೇ ದೌರ್ಜನ್ಯ ಎಸಗಲು ಮುಂದಾದರೆ ಅಂಥವರ ಕೈ ಕತ್ತರಿಸುತ್ತಿದ್ದರು. ಆದರೆ ಟಿಪ್ಪು ಸುಲ್ತಾನ ಯುದ್ಧಕ್ಕೆ ಹೋದಾಗ ಲಕ್ಷಾಂತರ ಸೈನಿಕರನ್ನು ಕೊಲ್ಲುತ್ತಿದ್ದರು. ಮಹಿಳೆಯರ ಮೇಲೆ ದೌರ್ಜನ್ಯ ಎಸಗುತ್ತಿದ್ದರು. ಕೊಡಗು ಜಿಲ್ಲೆಯನ್ನು ವಶಪಡಿಸಿಕೊಳ್ಳಲು ಟಿಪ್ಪು ಸಾಕಷ್ಟು ಪ್ರಯತ್ನ ನಡೆಸಿದರೂ ಆಗಿರಲಿಲ್ಲ. ಮೋಸದಿಂದ ಅಲ್ಲಿನ ಜನರನ್ನು ಒಂದೆಡೆ ಸೇರಿಸಿ ಮಾರಣಹೋಮ ನಡೆಸಿದನು ಎಂದು ಟಿಪ್ಪು ಕುರಿತಾಗಿ ಆಕ್ರೋಶ ಹೊರಹಾಕಿದರು.
ಬೃಹತ್ ಮೆರವಣಿಗೆ: ಇನ್ನು, ಶಿವಾಜಿ ಜಯಂತಿ ಅಂಗವಾಗಿ ನಗರದಲ್ಲಿ ಬೃಹತ್ ಮೆರವಣಿಗೆ ಆಯೋಜಿಸಲಾಗಿತ್ತು. ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದಲ್ಲಿ ಮೆರವಣಿಗೆ ನಗರದ ರಾಮಮಂದಿರದಿಂದ ಆರಂಭವಾಗಿ ಸಿದ್ದೇಶ್ವರ ದೇವಸ್ಥಾನ ಗಾಂಧಿ ಚೌಕ್ ಮಾರ್ಗವಾಗಿ ಶಿವಾಜಿ ಚೌಕ್ ವರೆಗೆ ಆಗಮಿಸಿತು. ಈ ಬೃಹತ್ ಮೆರವಣಿಗೆಯಲ್ಲಿ ಸಾವಿರಾರು ಯುವಕರು ಭಾಗಿಯಾಗಿ, ಡಿಜೆ ಸೌಂಡ್ ಗೆ ಹೆಜ್ಜೆ ಹಾಕಿ ಕುಳಿದು ಕುಪ್ಪಳಿಸಿದರು. ಯುವಕರು ಮೆರವಣಿಗೆ ಸಾಗುವ ರಸ್ತೆಗಳಲ್ಲಿ ಸಂಚಾರ ಬಂದ್ ಮಾಡಿ ಪರ್ಯಾಯ ಮಾರ್ಗದ ವ್ಯವಸ್ಥೆಯನ್ನು ಪೊಲೀಸರು ಮಾಡಿದ್ದರು. ಮೆರವಣಿಗೆಯುದ್ದಕ್ಕೂ ಬಿಗಿ ಪೊಲೀಸ್ ಬಂದೋಬಸ್ತ್ ಆಯೋಜಿಸಲಾಗಿತ್ತು.
ಇದನ್ನೂ ಓದಿ: ಅಭಿಮಾನಿಗಳು ತಂದ 80 ಕೆಜಿ ಕೇಕ್ ಕತ್ತರಿಸಿ ಜನ್ಮದಿನ ಆಚರಿಸಿಕೊಂಡ ರಾಜಾಹುಲಿ..