ETV Bharat / state

ವಿಜಯಪುರ: ಸಿಂದಗಿಯ ಆಲಮೇಲದಲ್ಲಿ ಸರಣಿ ಕಳ್ಳತನ

ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಆಲಮೇಲ ಪಟ್ಟಣದಲ್ಲಿ ಸರಣಿ ಕಳ್ಳತನವಾಗಿದ್ದು, ಸ್ಥಳಕ್ಕೆ ಆಲಮೇಲ ಪಿಎಸ್ಐ ಪೂಜಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಜಯಪುರದಲ್ಲಿ ಸರಣಿ ಕಳ್ಳತನ
ವಿಜಯಪುರದಲ್ಲಿ ಸರಣಿ ಕಳ್ಳತನ
author img

By

Published : Dec 18, 2020, 2:52 PM IST

Updated : Dec 18, 2020, 3:13 PM IST

ವಿಜಯಪುರ: ಜಿಲ್ಲೆಯ ಸಿಂದಗಿ ತಾಲೂಕಿನ ಆಲಮೇಲ ಪಟ್ಟಣದಲ್ಲಿ ಎರಡು ದೇವಸ್ಥಾನ ಸೇರಿ 8 ಮನೆಗಳಲ್ಲಿ ಕಳ್ಳತನ ನಡೆದಿದೆ.

ಸಿಂದಗಿಯ ಆಲಮೇಲದಲ್ಲಿ ಸರಣಿ ಕಳ್ಳತನ

ಕರಿದೇವರ ದೇಗುಲದಲ್ಲಿ 40 ಗ್ರಾಂ ಚಿನ್ನಾಭರಣ, 1 ಕೆಜಿ ಬೆಳ್ಳಿ ಕಳ್ಳತನವಾಗಿದೆ. ಇದೇ ರೀತಿ ವೀರನಾಗಮ್ಮ ದೇವಸ್ಥಾನದಲ್ಲಿ 40 ಗ್ರಾಂ ಚಿನ್ನಾಭರಣ ಕಳ್ಳತನವಾಗಿದೆ. 8 ಮನೆಗಳಲ್ಲಿ ಒಟ್ಟು 80 ಗ್ರಾಂ ಚಿನ್ನಾಭರಣ, 3 ಲಕ್ಷ ರೂ. ಹಣ ದೋಚಿ ಕಳ್ಳರು ಪರಾರಿಯಾಗಿದ್ದಾರೆ.

ಓದಿ:ಪತಿ ಬೇಡ, ಪ್ರೇಮಿ ಬೇಕು.. ನಾಪತ್ತೆಯಾಗಿದ್ದ ಗೃಹಿಣಿ ಪ್ರಿಯಕರನೊಂದಿಗೆ ಪತ್ತೆ

ಇತ್ತೀಚೆಗೆ ಫಿನಾಯಿಲ್​​ ಮಾರುವ ನೆಪದಲ್ಲಿ ಅನುಮಾನಾಸ್ಪದ ವ್ಯಕ್ತಿಗಳು ಆಲಮೇಲ ಪಟ್ಟಣದಲ್ಲಿ ಅಡ್ಡಾಡಿದ್ದರು. ಅವರೇ ಕಳ್ಳತನಕ್ಕೆ ಇಳಿದಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ರಾತ್ರಿ 1ರಿಂದ 3 ಗಂಟೆಯ ಒಳಗೆ ಈ ಕಳ್ಳತನ ನಡೆದಿರುವ ಸಾಧ್ಯತೆ ಇದೆ. ಸ್ಥಳಕ್ಕೆ ಆಲಮೇಲ ಪಿಎಸ್ಐ ಪೂಜಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆಲಮೇಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Last Updated : Dec 18, 2020, 3:13 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.