ವಿಜಯಪುರ: ಜಿಲ್ಲೆಯ ಚಡಚಣ ತಾಲೂಕಿನ ರೇವತಗಾಂವ್ ಗ್ರಾಮದಲ್ಲಿ 2 ಅಂಗಡಿಗಳು ಹಾಗೂ 4 ಮನೆಗಳಲ್ಲಿ ಸರಣಿ ಕಳ್ಳತನ ನಡೆದಿದೆ.
ರೇವತಗಾಂವ್ ಗ್ರಾಮದ ಸುಭಾಷ್ ದಾಬೆ, ಸೂರಪ್ಪ ದಾಬೆ, ಅನ್ನಪೂರ್ಣ ಖಾತೆ, ಸಿದ್ದಪ್ಪ ಜಾಬಗೊಂಡೆ, ಸಿದ್ದರಾಯ ಬಿರಾದಾರ ಎಂಬುವರಿಗೆ ಸೇರಿದ ಮನೆ ಹಾಗೂ ಅಂಗಡಿಗಳಲ್ಲಿ ಖದೀಮರು ಕಳ್ಳತನ ಮಾಡಿದ್ದಾರೆ.
ಮನೆಯವರು ಮಾಳಿಗೆ ಮೇಲೆ ಮಲಗಿದ್ದ ವೇಳೆ ಬೀಗ ಮುರಿದು ಒಳನುಗ್ಗಿದ ಕಳ್ಳರು ನಗದು, ಚಿನ್ನಾಭರಣ, ಬೈಕ್ ಸೇರಿದಂತೆ ವಿವಿಧ ಬೆಲೆ ಬಾಳುವ ವಸ್ತುಗಳನ್ನು ಕದ್ದೊಯ್ದಿದ್ದಾರೆ.
ಓದಿ: ತ್ರಿಕೋನ ವಿವಾಹೇತರ ಸಂಬಂಧ; ‘ಆತ’ನೊಂದಿಗೆ ‘ಇವಳ’ ನಂಟು.. ಹೆಣ ಉರುಳಿಸಿ ನೇಣಿಗೆ ಶರಾಣದ ‘ಈತ’..
ಸ್ಥಳಕ್ಕೆ ಚಡಚಣ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಚಡಚಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.