ವಿಜಯಪುರ: ಇಂದಿನಿಂದ ಜಿಲ್ಲೆಯಲ್ಲಿ ಸೆಕ್ಷನ್ 144 ಜಾರಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್ ತಿಳಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾತನಾಡಿದ ಅವರು, ಮಾರ್ಚ್ 31 ರ ಮಧ್ಯರಾತ್ರಿವರೆಗೂ ಜಿಲ್ಲೆಯಲ್ಲಿ 144 ಸೆಕ್ಷನ್ ಜಾರಿಯಲ್ಲಿತ್ತದೆ. ಹಾಗೂ ಜಿಲ್ಲೆಯ ಗಡಿಯಲ್ಲಿ 23 ಚೆಕ್ ಪೋಸ್ಟ್ ಹಾಕಲಾಗುತ್ತದೆ. ನಾಳೆಯಿಂದ ಬೇರೆ ಜಿಲ್ಲೆಗಳಿಗೆ ಯಾವುದೇ ಬಸ್ ಸೌಲಭ್ಯವಿರುವುದಿಲ್ಲ. ಜಿಲ್ಲೆಯ ಒಳಗೆ ಮಾತ್ರ ಬಸ್ ಸಂಚಾರ ಇರಲಿದೆ. ನಿಷೇಧಾಜ್ಞೆ ಉಲ್ಲಂಘಿಸಿದವರ ವಿರುದ್ಧ ಕ್ರಮಕ್ಕೆ ಕೈಗೊಳಗಳಲಾಗುತ್ತದೆ ಎಂದರು.
ಮಾರುಕಟ್ಟೆ, ಮಾಲ್ ಹಾಗೂ ಸೂಪರ್ ಬಜಾರ್ ಬಂದ್ ಮಾಡಲಾಗಿದ್ದು, ಜಿಲ್ಲೆಗೆ ಇದುವರೆಗೂ 290 ಜನ ವಿದೇಶದಿಂದ ಬಂದಿದ್ದಾರೆ. ಅದರಲ್ಲಿ 173 ಜನರ ಮೇಲೆ ನಿಗಾ ಇಡಲಾಗಿದೆ. ಹೋಮ್ ಕೊರೆಂಟಿನ್ ಉಲ್ಲಂಘಿಸಿದವರ ಮೇಲೆ ಪ್ರಕರಣ ದಾಖಲಿಸಲು ನಿರ್ಧರಿಸಲಾಗಿದೆ. ಅನುಮತಿ ಇಲ್ಲದೆ ಸಮಾರಂಭ ನಡಿಸಿದವರ ಮೇಲೆ ಕೇಸ್ ಮಾಡಲಾಗುತ್ತಿದೆ. ವಿಜಯಪುರ ಜಿಲ್ಲೆಯ ಸುತ್ತ ಮುತ್ತಲಿನ ಜಿಲ್ಲೆಗಳು ಸಹ ಲಾಕ್ ಡೌನ್ ಆಗಿದ್ದು, ಎಚ್ಚರ ವಹಿಸಿ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್ ತಿಳಿಸಿದರು.