ETV Bharat / state

ಒಂದು ವಾರದೊಳಗೆ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಆರಂಭಗೊಳ್ಳಲಿದೆ: ಶಂಭುಲಿಂಗಗೌಡ ಪಾಟೀಲ - Teacher Transfer Process Begins

ಪ್ರಾಥಮಿಕ ಶಾಲಾ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಪ್ರಾರಂಭಿಸುವಂತೆ ಶಿಕ್ಷಕರ ಸಂಘ ನಡೆಸಿದ ಪ್ರಯತ್ನ ಸಫಲಗೊಂಡಿದ್ದು, ಈ ಕುರಿತು ಶಿಕ್ಷಣ ಸಚಿವರು ಮತ್ತು ಇಲಾಖೆಯ ಅಧಿಕಾರಿಗಳು ಸ್ಪಷ್ಟ ಭರವಸೆ ನೀಡಿರುವುದಾಗಿ ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.

school teachers union press meet at Vijayapur
ಶಾಲಾ ಶಿಕ್ಷಕರ ಸಂಘದಿಂದ ಸುದ್ದಿಗೋಷ್ಠಿ
author img

By

Published : Mar 19, 2021, 8:30 PM IST

ವಿಜಯಪುರ : ಕಳೆದ ಎರಡು ವರ್ಷದಿಂದ ಸ್ಥಗಿತಗೊಂಡಿರುವ ಪ್ರಾಥಮಿಕ ಶಾಲಾ ಶಿಕ್ಷಕರ ವರ್ಗಾವಣೆಗಾಗಿ ಸರ್ಕಾರದ ‌ಮೇಲೆ ಒತ್ತಡ ಹೇರಿದ್ದು, ಬಹುತೇಕ ಮುಂದಿನ ಒಂದು ವಾರದೊಳಗೆ ವರ್ಗಾವಣೆ ಪ್ರಕ್ರಿಯೆ ಆರಂಭಗೊಳ್ಳಲಿದೆ ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಶಂಭುಲಿಂಗಗೌಡ ಪಾಟೀಲ ಹೇಳಿದರು.

ಜಿಲ್ಲೆಯ ‌ನಿಡಗುಂದಿ ತಾಲೂಕಿನ‌ ಆಲಮಟ್ಟಿಯ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಈಗಾಗಲೇ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಸ್ಪಷ್ಟ ಭರವಸೆ ನೀಡಿದ್ದಾರೆ. ಈ ಕುರಿತು ಸಂಘ ನಡೆಸಿದ ಎಲ್ಲಾ ರೀತಿಯ ಪ್ರಯತ್ನಕ್ಕೆ ಪ್ರತಿಫಲ ಸಿಗಲಿದೆ ಎಂದರು.

ಶಿಕ್ಷಕರ ಸಂಘದ ಪದಾಧಿಕಾರಿಗಳು ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು

ಹಿಂದಿ ಶಿಕ್ಷಕರಿಗೆ ಹಾಗೂ ಕಲ್ಯಾಣ ಕರ್ನಾಟಕದ ಶಿಕ್ಷಕರಿಗೆ ಇರುವ ನಿಬಂಧನೆಗಳನ್ನು ತೆಗೆದು ಹಾಕುವಂತೆ ಒತ್ತಾಯಿಸಲಾಗಿದೆ. ಇಡೀ ರಾಜ್ಯದಲ್ಲಿ ಪ್ರತ್ಯೇಕ ವೇತನ ಶ್ರೇಣಿಯಿಲ್ಲದ ಏಕೈಕ ಹುದ್ದೆ ಮುಖ್ಯೋಪಾಧ್ಯಾಯರ ಹುದ್ದೆಯಾಗಿದ್ದು, ಈ ಹುದ್ದೆಗೆ ವೇತನ ಶ್ರೇಣಿ ನಿಗದಿಗೊಳಿಸಬೇಕು. ಬಡ್ತಿ ವ್ಯತ್ಯಾಸ ಕೂಡ ಆಗುತ್ತಿದೆ. ಅದನ್ನು ಸರಿಪಡಿಸಲು 6 ನೇ ವೇತನ ಆಯೋಗದ ಅಂತಿಮ ವರದಿಯಲ್ಲಿ ಶಿಫಾರಸು ಮಾಡಿದ್ದರೂ, ಇನ್ನೂ ಜಾರಿಗೆ ಆಗಿಲ್ಲ ಎಂದು ಹೇಳಿದರು.

ಮಾದರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರ ಹುದ್ದೆ, ಶಿಕ್ಷಣ ಸಂಯೋಜಕ ಹುದ್ದೆಗಳನ್ನು ಬಡ್ತಿ ಪಡೆದ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ನೀಡಬೇಕು ಎಂದು ಶಿಕ್ಷಣ ಸಚಿವರಿಗೆ ಮನವಿ ಮಾಡಲಾಗಿದೆ ಎಂದ ಅವರು, ಬಿಎ, ಬಿಇಡಿ ತರಬೇತಿ ಪಡೆದ ಪ್ರಾಥಮಿಕ ಶಾಲಾ ಶಿಕ್ಷಕರಿಗೆ, ಈಗ ಇರುವ ಬಡ್ತಿ ಪ್ರಮಾಣವನ್ನು ಶೇ. 50 ರಿಂದ ಶೇ. 75 ಕ್ಕೆ ಹೆಚ್ಚಿಸಬೇಕು. ಪ್ರೌಢಶಾಲೆ ಮುಖ್ಯೋಪಾಧ್ಯಾಯರ ಹುದ್ದೆಗೆ ಬಡ್ತಿ ನೀಡುವಾಗ ಶೇ. 25 ರಷ್ಟು ಹುದ್ದೆಗಳನ್ನು ಪ್ರಾಥಮಿಕ ವೃಂದದಿಂದ ಬಡ್ತಿ ಪಡೆದವರಿಗೆ ಕಾಯ್ದಿರಿಸಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿ : ಪ್ರಧಾನಿ ಮೋದಿ ಪರೀಕ್ಷಾ ಪೇ ಚರ್ಚಾ ಸಂವಾದಕ್ಕೆ ಉಡುಪಿಯ ವಿದ್ಯಾರ್ಥಿನಿ ಅನುಷಾ ಆಯ್ಕೆ

ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಲಿ ಮಾತನಾಡಿ, ರಾಜ್ಯದಲ್ಲಿರುವ 22 ಸಾವಿರ ಕಿರಿಯ ಪ್ರಾಥಮಿಕ ಶಾಲೆಗಳಿಗೆ ಮುಖ್ಯೋಪಾಧ್ಯಾಯ ಹುದ್ದೆಗಳನ್ನು ಮಂಜೂರು ಮಾಡಬೇಕೆಂದು ಸರ್ಕಾರವನ್ನು ಒತ್ತಾಯಿಸಲಾಗಿದೆ. ರಾಜ್ಯದಲ್ಲಿ ಹೊಸ ತಾಲೂಕುಗಳು ರಚನೆಯಾಗಿ, ವಿವಿಧ ತಾಲೂಕು ಹಂತದ ಕಚೇರಿಗಳು ಆರಂಭಗೊಂಡರೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಆರಂಭಿಸಿಲ್ಲ. ಬಜೆಟ್ ಪೂರ್ವದಲ್ಲಿಯೇ ಈ‌ ಕುರಿತು ಸಂಘದ ವತಿಯಿಂದ ಮುಖ್ಯಮಂತ್ರಿಗಳಲ್ಲಿ ವಿನಂತಿಸಲಾಗಿತ್ತು. ಆದರೂ, ಇದಕ್ಕೆ ಅಗತ್ಯವಿದ್ದ 155 ಕೋಟಿ ರೂ. ಬಿಡುಗಡೆಗೆ ಆರ್ಥಿಕ ಇಲಾಖೆ ಒಪ್ಪಲಿಲ್ಲ. ಬಿಇಓ‌ ಕಚೇರಿ ಆರಂಭಕ್ಕೆ ಸಂಘದ ಒತ್ತಡ ನಿರಂತರ ಇರಲಿದೆ ಎಂದರು.

ಶಾಲಾ ನಿರ್ವಹಣೆಗಾಗಿ ಇರುವ ಶಾಲಾ ಅನುದಾನ ಒಂದೇ ಹಂತದಲ್ಲಿ ವಿಳಂಬವಿಲ್ಲದೆ ಬಿಡುಗಡೆ ಮಾಡಬೇಕು. ಗ್ರಾಮೀಣ ಭಾಗದಲ್ಲಿ ಕಾರ್ಯನಿರ್ವಹಿಸುವ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಗ್ರಾಮೀಣ ಭತ್ಯೆ ನೀಡಬೇಕು, ಪ್ರಾಥಮಿಕ ಶಾಲಾ ಶಿಕ್ಷಕರಲ್ಲಿ ಪದವೀಯೇತರರು, ಪದವಿಧರರು ಎಂಬ ಬೇಧ ಭಾವ ಮಾಡದೆ ಸಮಾನ ಸೇವಾ ನಿಯಮಗಳನ್ನು ರಚಿಸಬೇಕು. ಪ್ರಾಥಮಿಕ ಶಾಲೆಯಲ್ಲಿ ಕಾರ್ಯ ನಿರ್ವಹಿಸುವ ಶಿಕ್ಷಕರನ್ನು ಪ್ರೌಢಶಾಲೆಗೆ ನಿಯೋಜಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಲಾಗುವುದು. ಪ್ರತಿ ತಾಲೂಕಿಗೆ ಮೂರು ದೈಹಿಕ ಶಿಕ್ಷಣ ಸಂಯೋಜಕ ಹುದ್ದೆ ಸೃಷ್ಟಿ, ದೈಹಿಕ ಶಿಕ್ಷಕರನ್ನು ಸಾಮಾನ್ಯ ಶಿಕ್ಷಕರಂತೆ ಪರಿಗಣಿಸಿ ಬಡ್ತಿಗೆ ಅವಕಾಶ, ಪ್ರಭಾರಿ ಮುಖ್ಯ ಗುರುಗಳಿಗೆ ಪ್ರಭಾರಿ ಭತ್ಯೆ, ನಲಿಕಲಿ ವ್ಯವಸ್ಥೆಯಲ್ಲಿ ಬದಲಾವಣೆ ಸೇರಿ ಹಲವು ಬೇಡಿಕೆಗಳನ್ನು ಸಂಘ ಸರ್ಕಾರದ ಮುಂದಿಟ್ಟಿದ್ದು, ಹಂತ ಹಂತವಾಗಿ ಅವುಗಳ ಕಾರ್ಯಗತಕ್ಕಾಗಿ ಸಾಕಷ್ಟು ಪ್ರಯತ್ನ ನಡೆಸುತ್ತಿದೆ ಎಂದು ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.