ETV Bharat / state

ಬಿಸಿಯೂಟದ ಅಕ್ಕಿ ಕದ್ದೊಯ್ಯುತ್ತಿದ್ದ ಆರೋಪ.. ಶಾಲೆಯ ಮುಖ್ಯ ಶಿಕ್ಷಕ ಅಮಾನತು - ಶಾಲೆ ಮುಖ್ಯ ಶಿಕ್ಷಕರಿಂದ ಅಕ್ಕಿ ಕಳ್ಳತನ ಪ್ರಕರಣ

ಬಿಸಿಯೂಟದ ಅಕ್ಕಿ ಕದ್ದೊಯ್ಯಲು ಯತ್ನಿಸಿದ ಆರೋಪದ ಮೇಲೆ ಸಿಂದಗಿ ತಾಲೂಕಿನ ಬೊಮ್ಮನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಅಮಾನತುಗೊಂಡಿದ್ದಾರೆ.

headmaster-of-school-suspended-in-rice-stealing-case
ಬಿಸಿಯೂಟದ ಅಕ್ಕಿ ಕದ್ದೊಯ್ಯುತ್ತಿದ್ದ ಶಾಲೆ ಮುಖ್ಯ ಶಿಕ್ಷಕ ಅಮಾನತು
author img

By

Published : Jun 12, 2022, 5:57 PM IST

ವಿಜಯಪುರ: ಬಿಸಿಯೂಟದ ಅಕ್ಕಿ ಕದ್ದೊಯ್ಯಲು ಯತ್ನಿಸಿದ ಆರೋಪದ ಮೇಲೆ ಸಿಂದಗಿ ತಾಲೂಕಿನ ಬೊಮ್ಮನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕನನ್ನು ಅಮಾನತುಗೊಳಿಸಲಾಗಿದೆ. ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಎಂ. ಹರನಾಳ ಆದೇಶ ಹೊರಡಿಸಿದ್ದಾರೆ.

ಶಾಲೆಯ ಅಡುಗೆ ಕೋಣೆಯಲ್ಲಿ 50 ಅಕ್ಕಿ ಚೀಲವನ್ನು ಮುಖ್ಯ ಶಿಕ್ಷಕ ಶರಣಪ್ಪ ಬಿದನೂರ ವಾಹನದಲ್ಲಿ ಸಾಗಿಸುವಾಗ ಗ್ರಾಮಸ್ಥರು ತಡೆದಿದ್ದರು. ಇದರಿಂದ ಗಾಬರಿಗೊಂಡ ಮುಖ್ಯ ಶಿಕ್ಷಕ ಹಾಗೂ ವಾಹನ ಚಾಲಕ ಪರಾರಿಯಾಗಿದ್ದರು. ತಕ್ಷಣ ಮುಖ್ಯ ಶಿಕ್ಷಕನನ್ನು ಅಮಾನತುಗೊಳಿಸಬೇಕೆಂದು ಒತ್ತಾಯಿಸಿ ಶಾಲೆ ಎದುರು ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರು.

ನಂತರ ಸ್ಥಳಕ್ಕೆ ಶಿಕ್ಷಣ ಇಲಾಖೆ ಹಾಗೂ ಬಿಸಿಯೂಟ ಮೇಲ್ವಿಚಾರಕರ ನಿರ್ವಹಣಾ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದರು. ಈ ವೇಳೆ ಸದ್ಯ ಮುಖ್ಯ ಶಿಕ್ಷಕ ಪರಾರಿಯಾಗಿದ್ದು, ಅವರು ಕರ್ತವ್ಯಕ್ಕೆ ಹಾಜರಾದ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದ್ದರು.

ಅದರಂತೆ ಶಾಲೆಯಲ್ಲಿ ಶೈಕ್ಷಣಿಕ ಚಟುವಟಿಕೆ ಹಾಗೂ ತರಗತಿ ನಡೆಸದೇ ಲೋಪ ಎಸಗಿದ್ದಾರೆ ಎಂದು ಮುಖ್ಯ ಶಿಕ್ಷಕರನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಅಮಾನತುಗೊಳಿಸಿದ್ದಾರೆ.

ಇದನ್ನೂ ಓದಿ: ವಿಜಯಪುರ: ಬಿಸಿಯೂಟದ ಅಕ್ಕಿ ಕದ್ದು ಮಾರಾಟಕ್ಕೆ ಯತ್ನಿಸಿದ ಮುಖ್ಯ ಶಿಕ್ಷಕ

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.