ETV Bharat / state

ವಿಜಯಪುರ: ದಿ. ಅಶೋಕ ಗಸ್ತಿ ಪತ್ನಿಗೆ ರಾಜ್ಯಸಭಾ ಟಿಕೆಟ್ ನೀಡುವಂತೆ ಒತ್ತಾಯ - late ashok gasti wife to compete rajyasabha election

ಬಿಜೆಪಿಯಿಂದ ಅವಿರೋಧವಾಗಿ ರಾಜ್ಯಸಭೆಗೆ ಆಯ್ಕೆಯಾಗಿದ್ದ ಅಶೋಕ್​ ಗಸ್ತಿ ನಿಧನ ಹೊಂದಿದ ಹಿನ್ನೆಲೆ ಅವರ ಪತ್ನಿಗೆ ರಾಜ್ಯಸಭಾ ಟಿಕೆಟ್ ನೀಡಬೇಕೆಂದು ಕರ್ನಾಟಕ ರಾಜ್ಯ ಸವಿತಾ ಸಮಾಜ ಘಟಕದ ಕಾರ್ಯಕರ್ತರು ವಿಜಯಪುರದಲ್ಲಿ ಒತ್ತಾಯಿಸಿದ್ದಾರೆ.

savitha
ವಿಜಯಪುರ
author img

By

Published : Nov 9, 2020, 5:15 PM IST

ವಿಜಯಪುರ: ರಾಜ್ಯಸಭಾ ಸದಸ್ಯರಾಗಿದ್ದ ಅಶೋಕ್ ಗಸ್ತಿ ನಿಧನ ನಂತರ ತೆರವಾದ ಸ್ಥಾನವನ್ನು ಅವರ ಧರ್ಮಪತ್ನಿಗೆ ನೀಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಸವಿತಾ ಸಮಾಜ ಘಟಕದ ಕಾರ್ಯಕರ್ತರು ಜಿಲ್ಲಾಧಿಕಾರಿ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ವಿಜಯಪುರ
ಭಾರತೀಯ ಜನತಾ ಪಕ್ಷದಿಂದ ಅಶೋಕ್ ಗಸ್ತಿಯನ್ನು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ ಮಾಡಲಾಗಿತ್ತು. ಆದರೆ, ಅಶೋಕ್ ಗಸ್ತಿ ವಿಧಿವಶರಾಗಿ ಸವಿತಾ ಸಮಾಜಕ್ಕೆ‌ ಹಾಗೂ ರಾಜ್ಯದ ಜನತೆಗೆ ತುಂಬಲಾದ ನಷ್ಟವಾಗಿದೆ. ಬಿಜೆಪಿ ಪಕ್ಷದಲ್ಲಿ ಹಲವು ವರ್ಷಗಳಿಂದ ಪ್ರಾಮಾಣಿಕ ಕಾರ್ಯಕರ್ತರಾಗಿ ದುಡಿದ ಅಶೋಕ್ ಗಸ್ತಿ ಕುಟುಂಬಕ್ಕೆ ನ್ಯಾಯ ಒದಗಿಸುವ ಕೆಲಸ ಬಿಜೆಪಿ ಪಕ್ಷ ಮಾಡಬೇಕು. ಗಸ್ತಿಯವ್ರ ನಿಧನದಿಂದ ತೆರವಾದ ಸ್ಥಾನಕ್ಕೆ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿದೆ. ಬಿಜೆಪಿ ವರಿಷ್ಠರು ಅಶೋಕ್ ಗಸ್ತಿ ಅವರ ಧರ್ಮಪತ್ನಿ ರಾಜ್ಯಸಭಾ ಟಿಕೆಟ್ ನೀಡಬೇಕೆಂದು ಒತ್ತಾಯಿಸಿದ್ರು.
ಬಿಜೆಪಿ ಪಕ್ಷ ಸುಮಾ ಗಸ್ತಿಗೆ ರಾಜ್ಯಸಭಾ ಟಿಕೆಟ್ ನೀಡಿ ಅವಿರೋಧವಾಗಿ ಆಯ್ಕೆ ಮಾಡುವುದರಿಂದ, ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಹಲವು ವರ್ಷಗಳ‌ ಕಾಲ ಶ್ರಮಿಸಿದ ದಿ. ಅಶೋಕ ಗಸ್ತಿ ಪಕ್ಷ ನೀಡಿದ ಗೌರವ ಸಲ್ಲಿಸಿದಂತಾಗುತ್ತದೆ ಎಂದು ಸವಿತಾ ಸಮಾಜ ಘಟಕದ ಕಾರ್ಯಕರ್ತರು ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.