ETV Bharat / state

ವ್ಯಾಪಾರವಿಲ್ಲದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಸಸಿ ಮಾರಾಟಗಾರರು - ಕೋವಿಡ್ ಲಾಕ್​ ಡೌನ್

ಲಾಕ್​​ಡೌನ್​ನಿಂದ ವ್ಯಾಪಾರವಿಲ್ಲದೆ ಸಸಿ ಮಾರಾಟಗಾರರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.

Sapling sellers Facing Financial Problem due to Lockdown
ಸಸಿ ಮಾರಾಟಗಾರು
author img

By

Published : Jun 5, 2021, 10:12 AM IST

ವಿಜಯಪುರ: ಪರಿಸರ ದಿನ ಆಚರಣೆ ಮಾಡುತ್ತಿರುವ ಈ ಸಂದರ್ಭದಲ್ಲಿ ಪರಿಸರ ಸಂರಕ್ಷಣೆಗೆ ಪರೋಕ್ಷವಾಗಿ ಕೊಡುಗೆ ನೀಡುವ ಸಸಿ ಮಾರಾಟಗಾರರ ಬದುಕು ಮಾತ್ರ ಸಂಕಷ್ಟಕ್ಕೆ ಸಿಲುಕಿದೆ.

ಹೌದು, ಕೋವಿಡ್ ಲಾಕ್​​ಡೌನ್​ನಿಂದ ಜನ ಸಂಚಾರವಿಲ್ಲದೆ ಬೀದಿ ಬದಿಗಳಲ್ಲಿ ವಿವಿಧ ತಳಿಯ ಸಸಿಗಳನ್ನು ಮಾರಾಟ ಮಾಡಿ ಜೀವನ ನಡೆಸುವ ಜನರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಸಸಿ ಮಾರಾಟಗಾರರು

ವಿಜಯಪುರ ನಗರದ ಸ್ಟೇಶನ್ ರಸ್ತೆಯಲ್ಲಿ ಆಂಧ್ರ ಪ್ರದೇಶ ಮೂಲದ 5-6 ಕುಟುಂಬಗಳು ಸಸಿಗಳನ್ನು ಮಾರಾಟ ಮಾಡಿ ಬದುಕು ಸಾಗಿಸುತ್ತಿವೆ. ಆದರೆ, ಕೋವಿಡ್ ಲಾಕ್​​ಡೌನ್​ನಿಂದ ಇವರ ಸಸಿಗಳನ್ನು ಕೊಳ್ಳುವವರೇ ಇಲ್ಲದಂತಾಗಿದೆ. ಮಳೆಗಾಲ ಆಗಮಿಸಿದ್ದರಿಂದ ಸಸಿಗಳ ಮಾರಾಟಗಾರರಿಗೆ ಒಳ್ಳೆಯ ಸಂಪಾದನೆ ಆಗಬೇಕಿತ್ತು. ಆದರೆ ಲಾಕ್​​​ಡೌನ್​ನಿಂದ ಎಲ್ಲವೂ ಬಂದ್ ಆಗಿ, ಇವರ ಸಂಪಾದನೆಗೆ ಹೊಡೆತ ಬಿದ್ದಿದೆ. ಕೇರಳ, ತಮಿಳುನಾಡಿನಿಂದ ಸಸಿಗಳನ್ನು ತಂದು ಮಾರಾಟಕ್ಕಿಟ್ಟ ಈ ಕುಟುಂಬಗಳು ಊಟಕ್ಕೂ ಪರದಾಡುವಂತಾಗಿದೆ.

ಓದಿ : ಲಾಕ್​ಡೌನ್​​​ ಎಫೆಕ್ಟ್​​​: ಸಂಕಷ್ಟದಲ್ಲಿ ಬೆಣ್ಣೆನಗರಿಯ ಹೂವಿನ ವ್ಯಾಪಾರಸ್ಥರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.