ವಿಜಯಪುರ: ಯೆಸ್ ಬ್ಯಾಂಕ್ಅನ್ನು ಆರ್ಬಿಐ ಸೂಪರ್ ಸೀಡ್ ಮಾಡಿದ ಕಾರಣ ಗ್ರಾಹಕರು ಪರದಾಡುವಂತಾಗಿದ್ದು, ನಗರದ ಬಿಎಲ್ಡಿ ರಸ್ತೆಯಲ್ಲಿರುವ ಬ್ಯಾಂಕ್ ಎಟಿಎಂಗಳಲ್ಲಿ ಹಣ ದೊರೆಯದ ಕಾರಣ ಗ್ರಾಹಕರು ಹೈರಾಣಾಗಿದ್ದಾರೆ.
ಏಕಾಏಕಿ ಸೂಪರ್ ಸೀಡ್ ಆಗಿದ್ದಕ್ಕೆ ಹಣ ಸಿಗದೇ ಕೆಲ ಗ್ರಾಹಕರು ಗೊಂದಲಕ್ಕೀಡಾಗಿದ್ದು, ಸಿಬ್ಬಂದಿ ಜೊತೆಗೆ ಗ್ರಾಹಕರು ಸೂಪರ್ ಸೀಡ್ ಕುರಿತು ಮಾಹಿತಿ ಪಡೆಯುತ್ತಿದ್ದಾರೆ. ಇನ್ನು ಯೆಸ್ ಬ್ಯಾಂಕ್‌ನ ಗ್ರಾಹಕರು ಹಣ ಡ್ರಾ ಮಾಡಿಕೊಳ್ಳಲು ಬ್ಯಾಂಕ್‌ಗಳಿಗೆ ದೌಡಾಯಿಸುತ್ತಿದ್ದು, ಚೆಕ್ ಮೂಲಕ ಹಣ ಮರುಪಾವತಿ ಮಾಡುವಂತೆ ಕೇಳಿಕೊಳ್ಳುತ್ತಿದ್ದಾರೆ. ಇತ್ತ ಯಾವುದೇ ಆತಂಕಕ್ಕೆ ಒಳಗಾಗದಂತೆ ಬ್ಯಾಂಕ್ ಸಿಬ್ಬಂದಿ ಗ್ರಾಹಕರಿಗೆ ಧೈರ್ಯ ಹೇಳುವ ಕಾರ್ಯಕ್ಕೆ ಮುಂದಾಗಿದ್ದಾರೆ. ಇನ್ನು ಮುಂಜಾಗ್ರತಾ ಕ್ರಮವಾಗಿ ಬ್ಯಾಂಕ್‌ಗೆ ಪೊಲೀಸ್ ಭದ್ರತೆ ಒದಗಿಸಲಾಗಿದೆ.
ಇದನ್ನು ಓದಿ: ಆರ್ಬಿಐನಿಂದ YES ಬ್ಯಾಂಕ್ ಸೂಪರ್ ಸೀಡ್: ಹಣ ಬಿಡಿಸಿಕೊಳ್ಳಲು ಗ್ರಾಹಕರಿಗೆ 50 ಸಾವಿರ ಮಿತಿ