ವಿಜಯಪುರ: ಕೊರೊನಾ ಭೀತಿಯಿಂದ ನಷ್ಟ ಅನುಭಿಸುತ್ತಿದ್ದ ಸರಾಫ್ ವರ್ತಕರು ಲಾಕ್‌ಡೌನ್ ಸಡಿಲಿಕೆಗೊಂಡ ಬಳಿಕ ವ್ಯಾಪಾರ ವಹಿವಾಟು ಚೆನ್ನಾಗಿ ಸಾಗಬಹುದು ಅಂದು ಕೊಂಡಿದ್ದರು. ಆದರೆ, ಕಳೆದ ಒಂದು ತಿಂಗಳಿಂದ ಅಂಗಡಿಗಳಿಗೆ ಗ್ರಾಹಕರು ಸುಳಿಯದಿರುವ ಕಾರಣ ಸರಾಫ್ ವ್ಯಾಪಾರಸ್ಥರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಕೊರೊನಾ ವೈರಸ್ ಹಾವಳಿಯಿಂದ ಕಳೆದ ನಾಲ್ಕೈದು ತಿಂಗಳಿಂದ ವ್ಯಾಪಾರಿಗಳ ಉದ್ಯೋಗಕ್ಕೆ ನಷ್ಷ ಉಂಟಾಗಿದೆ. ಅಂಗಡಿಗಳಲ್ಲಿ ಪಳ ಪಳ ಹೊಳೆಯುತ್ತಿರುವ ಚಿನ್ನ, ಇನ್ನೊಂದೆಡೆ ಗ್ರಾಹಕರ ಬರುವಿಕೆಗಾಗಿ ಕಾದುಕುಳಿತಿರುವ ಸರಾಫ್ ವರ್ತಕರು. ಇತ್ತ ಮಾರ್ಚ್ ತಿಂಗಳಿಂದ ಜುಲೈ ಅಂತ್ಯದವರಿಗೂ ಪ್ರತಿ ವರ್ಷ ಉತ್ತಮವಾಗಿ ಚಿನ್ನ ಬೆಳ್ಳಿಯ ವಹಿವಾಟು ನಡೆಯುತ್ತಿದ್ದು, ಕೊರೊನಾ ಭೀತಿಯಿಂದ ಲಾಕ್‌ಡೌನ್ ತೆರವಿನ ಬಳಿಕವೂ ನಮ್ಮ ಉದ್ಯೋಗ ಸರಿಯಾಗಿ ಸಾಗುತ್ತಿಲ್ಲ ಎಂದು ವರ್ತಕರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಜಿಲ್ಲೆಯಲ್ಲಿ ಸುಮಾರು 400 ಅಧಿಕ ಚಿನ್ನದಗಂಡಿಗಳಿವೆ. ನಿತ್ಯ ಲಕ್ಷಾಂತರ ಚಿನ್ನ, ಬೆಳ್ಳಿ ಮಾರಾಟವಾಗುತ್ತಿತ್ತು. ಇತ್ತ ಸರಾಫ್ ವರ್ತಕನ ಮಾಹಿತಿ ಪ್ರಕಾರ ಪ್ರತಿ ವರ್ಷ ಮಾರ್ಚ್ ತಿಂಗಳಿನಿಂದ ಜುಲೈ ಅಂತ್ಯದ ವರಿಗೂ ಸರಾಫ್ ಉದ್ಯಮದಿಂದ 300 ಕೋಟಿಗೂ ಅಧಿಕ ವ್ಯಾಪಾರ ವಹಿವಾಟು ನಡೆಯುತ್ತಿತ್ತು.
ಕೊರೊನಾ ಭಯ ಜನರಿಂದ ದೂರವಾದ ಬಳಿಕೆ ದಿಢೀರ್ ಚಿನ್ನ ಬೆಲೆ 59 ಸಾವಿರಕ್ಕೆ ತಲುಪಿದ ಪರಿಣಾಮ ಲಾಕ್‌ಡೌನ್ ಭೀತಿಯಿಂದ ಉದ್ಯೋಗವಿಲ್ಲದೇ ಕಂಗಾಲಾದ ಜನರು, ಚಿನ್ನದ ಏರಿಕೆಯಿಂದ ಗೋಲ್ಡ್ ಶಾಪ್‌ಗಳತ್ತ ಹೆಚ್ಚಾಗಿ ಗ್ರಾಹಕರು ಸುಳಿಯುತ್ತಿವಲ್ಲಂತೆ. ಇತ್ತ ಸರ್ಕಾರಕ್ಕೆ ಭರಿಸಬೇಕಾದ ತೆರಿಗೆ ಭರ್ತಿ ಮಾಡುವುದು ಕಷ್ಟವಾಗಿದೆ ಎನ್ನುವುದು ವರ್ತಕರ ಅಳಲಾಗಿದೆ.
ವಾರದ ಹಿಂದೆ 59 ಸಾವಿರ ( 10 ಗ್ರಾಂ) ಇದ್ದ ಚಿನ್ನ, ನಿನ್ನೆ 52 ಸಾವಿರಕ್ಕೆ ಇಳಿಕೆ ಕಂಡರೂ ಜನ ಬೆಲೆಯಲ್ಲಿ ಕಡಿಮೆಯಾಗಬಹುದು ಎಂದು ಕಾಯುತ್ತಿದ್ದಾರೆ. ಬೆಳ್ಳಿ ಬೆಲೆಯಲ್ಲಿ ಕೂಡ ಏರಿಕೆ ಕಂಡಿದ್ದು, ಕೆ.ಜಿ ಬೆಳ್ಳಿಗೆ 64 ಸಾವಿರದ ಗಡಿ ದಾಟಿದೆ.
ಒಟ್ಟಿನಲ್ಲಿ ಕಳೆದ ಮೂರ್ನಾಲ್ಕು ತಿಂಗಳ ಕಾಲ ಉದ್ಯೋಗವಿಲ್ಲದೇ ನಷ್ಟದಲ್ಲಿದ್ದ ಸರಾಫ್ ವರ್ತಕರಿಗೆ ಚಿನ್ನದ ಬೆಲೆಯಲ್ಲಿ ಏರಿಕೆಯಿಂದ ಗ್ರಾಹಕರು ಅಂಗಡಿಗಳತ್ತ ಮುಖ ಮಾಡದಿರೋದು ಮತ್ತಷ್ಟು ಚಿಂತೆಗೀಡುಮಾಡಿದೆ.