ETV Bharat / state

ಜೀವ ವಿಮೆ, ಆರೋಗ್ಯ ಕಿಟ್ ನೀಡುವಂತೆ ಕಂದಾಯ ಇಲಾಖೆ ನೌಕರರ ಸಂಘ ಒತ್ತಾಯ - Vijayapura latest news

ಕಂದಾಯ ಇಲಾಖಾ ನೌಕರರನ್ನು ಕೊರೊನಾ ವಾರಿಯರ್ಸ್ ಎಂದು ಘೋಷಿಸಿ, ಜೀವ ವಿಮೆ ಹಾಗೂ ಆರೋಗ್ಯ ಕಿಟ್ ನೀಡಬೇಕೆಂದು ವಿಜಯಪುರದಲ್ಲಿ ಕಂದಾಯ ನೌಕರರ ಸಂಘ ಕಾರ್ಯಕರ್ತರು ಡಿಸಿಗೆ ಮನವಿ ಸಲ್ಲಿಸಿದರು.

ವಿಜಯಪುರ
ವಿಜಯಪುರ
author img

By

Published : Jul 23, 2020, 3:45 PM IST

ವಿಜಯಪುರ: ಕೊರೊನಾ ಭೀತಿ ನಡುವೆ ಕಾರ್ಯ ನಿರ್ವಹಿಸುತ್ತಿರುವ ಕಂದಾಯ ಇಲಾಖೆ ನೌಕರರನ್ನು ಕೊರೊನಾ ವಾರಿಯರ್ಸ್ ಎಂದು ಘೋಷಿಸಿ, ಜೀವ ವಿಮೆ ಹಾಗೂ ಆರೋಗ್ಯ ರಕ್ಷಾ ಕಿಟ್ ನೀಡುವಂತೆ ಕಂದಾಯ ಇಲಾಖಾ ನೌಕರರ ಸಂಘದ ಕಾರ್ಯಕರ್ತರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಕೊರೊನಾ ಭೀತಿ ಆರಂಭದ ದಿನಗಳಿಂದ ಕಂದಾಯ ಇಲಾಖೆಯ ನೌಕರರು ಕೊರೊನಾ ಕಾರ್ಯಾಚರಣೆ ಒಂದಲ್ಲ ಒಂದು ರೀತಿಯಲ್ಲಿ ಸಾಥ್ ನೀಡುತ್ತಿದ್ದಾರೆ. ಕೊರೊನಾ ಶಂಕಿತರಿಗೆ, ಹೋಮ್ ಕ್ವಾರಂಟೈನ್‌ ನಲ್ಲಿದ್ದವರಿಗೆ ಹಾಗೂ ಇತರೆ ಕಾರ್ಮಿಕರಿಗೆ ಆಹಾರ ಸಾಮಗ್ರಿಗಳನ್ನು ತಲುಪಿಸುವ ಕಾರ್ಯ ಮಾಡುತ್ತಿದ್ದು, ಕಂದಾಯ ಇಲಾಖಾ ನೌಕರರನ್ನು ಕೊರೊನಾ ವಾರಿಯರ್ ಎಂದು ಪರಿಗಣಿಸುವಂತೆ‌ ಮನವಿ ಮಾಡಿದರು.

ಜೀವದ ಹಂಗು ತೊರೆದು ಸೇವೆ ಮಾಡುತ್ತಿರುವ ಕಂದಾಯ ಇಲಾಖೆ‌ ನೌಕರರಿಗೆ ಸರ್ಕಾರ 50 ಲಕ್ಷದ ವಿಮೆ ವ್ಯಾಪ್ತಿಗೆ ಒಳಪಡಿಸಿ ಆರೋಗ್ಯ ರಕ್ಷಣಾ ಕಿಟ್ ನೀಡುವಂತೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.