ವಿಜಯಪುರ: ಕಳೆದ ಕೆಲವು ತಿಂಗಳಿಂದ ವ್ಯವಹಾರವಿಲ್ಲದೇ ನಷ್ಟದಲ್ಲಿರುವ ಕೇಂದ್ರ ಬಸ್ ನಿಲ್ದಾಣ ಮಳಿಗೆಗಳ ಬಾಡಿಗೆ ಮನ್ನಾ ಮಾಡುವಂತೆ ಮಳಿಗೆ ಮಾಲೀಕರ ಒಕ್ಕೂಟ ಕಾರ್ಯಕರ್ತರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಅಂಗಡಿ ಮಾಲೀಕರು ಕಳೆದ ಕೆಲವು ತಿಂಗಳಿಂದ ಕೊರೊನಾ ಹಾವಳಿ ಆರಂಭದ ದಿನದಿಂದಲೂ ಸರಿಯಾದ ವ್ಯಾಪಾರವಿಲ್ಲದೇ ಆರ್ಥಿಕ ಸಂಕಷ್ಟ ಅನುಭವಿಸುವಂತಾಗಿದೆ. ಇತ್ತ ಅಂಗಡಿ ಕೂಲಿಕಾರರಿಗೆ ಸಂಬಳ ನೀಡಲು ಹಣವಿಲ್ಲದಂತಾಗಿದೆ. ಕೇಂದ್ರ ಬಸ್ ನಿಲ್ದಾಣಕ್ಕೆ ಜನರು ಬಾರದೇ ಸಂಕಷ್ಟ ಅನುಭವಿಸುತ್ತಿರುವ, ಮಳಿಗೆ ಬಾಡಿಗೆದಾರರ ನೆರವಿಗೆ ಬರುವಂತೆ ನಗರ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಅಪರ ಜಿಲ್ಲಾಧಿಕಾರಿಗೆ ಮನವರಿಕೆ ಮಾಡಿದರು.