ವಿಜಯಪುರ : ಎಸ್‌ಟಿ ಸಮುದಾಯಕ್ಕೆ ಸೇರದ ವರ್ಗಗಳು ಎಸ್‌ಟಿ ವರ್ಗಕ್ಕೆ ಪ್ರಮಾಣ ಪತ್ರ ಪಡೆಯಲು ಮುಂದಾಗುತ್ತಿರುವುದನ್ನು ತಡೆಯುವಂತೆ ವಿಜಯಪುರ ಜಿಲ್ಲಾ ಮಹರ್ಷಿ ವಾಲ್ಮೀಕಿ ನಾಯಕ ಮಹಾಸಭಾದಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಪರಿವಾರ ಹಾಗೂ ತಳವಾರ ಸಮುದಾಯ ಪರಿಶಿಷ್ಟ ಪಂಗಡ ವರ್ಗಕ್ಕೆ ಸೇರಿಸಿ ಎಂದು ಆದೇಶ ಮಾಡಿದ ಬೆನ್ನಲ್ಲೇ ಅರ್ಹವಲ್ಲದ ಸಮುದಾಯಗಳು ಎಸ್‌ಟಿ ಮೀಸಲಾತಿ ಪಡೆಯಲು ತುದಿಗಾಲಿನಲ್ಲಿ ನಿಂತಿವೆ. ಉತ್ತರ ಕರ್ನಾಟಕದಲ್ಲಿ ಸರ್ಕಾರದ ಆದೇಶ ಅನ್ವಯಿಸದ ಸಮುದಾಯಗಳು ತಳವಾರ ಸಮುದಾಯಗಳಾಗಿವೆ. ಸರ್ಕಾರ ಆದೇಶವನ್ನು ಮೂಲ ಎಸ್‌ಟಿ ಸಮುದಾಯಗಳಿಗೆ ಸ್ಪಷ್ಟಪಡಿಸಬೇಕು.
ಅಲ್ಲದೆ ಆಯಾ ಜಿಲ್ಲಾಡಳಿತಕ್ಕೆ ಆದೇಶ ಹೊರಡಿಸಿಬೇಕು. ಎಸ್‌ಟಿ ಸಮುದಾಯಗಳಿಗೆ ಸಿಗುವ ಸಮುದಾಯಗಳಿಗೆ ವಂಚನೆಯಾಗದಂತೆ ಸರ್ಕಾರ ಕ್ರಮಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು. ಉತ್ತರಕರ್ನಾಟಕ ಭಾಗದಲ್ಲಿ ಮೀಸಲಾತಿಗೆ ಅರ್ಹವಲ್ಲದ ಸಮುದಾಯಗಳು ಎಸ್‌ಟಿ ಮೀಸಲಾತಿ ಪಡೆಯಲು ಹವಣಿಸುತ್ತಿವೆ. ಸರ್ಕಾರ ಸರಿಯಾದ ನಿರ್ದೇಶನ ನೀಡುವವರಿಗೂ ಅರ್ಹವಲ್ಲದ ಸಮುದಾಯಗಳಿಗೆ ಎಸ್‌ಟಿ ಪ್ರಮಾಣ ಪತ್ರ ನೀಡದಂತೆ ವಾಲ್ಮೀಕಿ ಮಹಾಸಭಾದ ಕಾರ್ಯಕರ್ತರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.