ETV Bharat / state

ಕಾರ್ಮಿಕರಿಗೆ ಸರ್ಕಾರ ಆರ್ಥಿಕ ನೆರವು ನೀಡುವಂತೆ ಜಿಲ್ಲಾಧಿಕಾರಿಗೆ ಮನವಿ..

ಬಾಡಿಗೆಗೆ ಶಾಮಿಯಾನ ನೀಡುವ ಮಾಲೀಕರಿಗೆ ಹಾಗೂ ಕಾರ್ಮಿಕರಿಗೆ ಸರ್ಕಾರ ಅನುದಾನ ನೀಡುವಂತೆ ದಿ ನಾರ್ಥ್ ಕರ್ನಾಟಕ ಟೆಂಟ್ ಆ್ಯಂಡ್ ಡೆಕೋರೇಶನ್ ವೆಲ್​ಫೆರ್​ ಅಸೋಸಿಯೇಶನ್ ವತಿಯಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

Vijayapura
ದಿ ನಾರ್ಥ್ ಕರ್ನಾಟಕ ಟೆಂಟ್ ಆ್ಯಂಡ್ ಡೆಕೋರೇಶನ್ ವೆಲ್​ಫೆರ್​ ಅಸೋಸಿಯೇಶನ್
author img

By

Published : May 13, 2020, 3:18 PM IST

ವಿಜಯಪುರ : ಲಾಕ್‌ಡೌನ್‌ ಜಾರಿಯಾದ ದಿನದಿಂದ ಸಂಕಷ್ಟದಲ್ಲಿರುವ ಬಾಡಿಗೆಗೆ ಶಾಮಿಯಾನ ನೀಡುವ ಮಾಲೀಕರಿಗೆ ಹಾಗೂ ಕಾರ್ಮಿಕರಿಗೆ ಸರ್ಕಾರ ಅನುದಾನ ನೀಡುವಂತೆ ದಿ ನಾರ್ಥ್ ಕರ್ನಾಟಕ ಟೆಂಟ್ ಅಂಡ್ ಡೆಕೊರೇಶನ್​ ವೆಲ್​ಫೇರ್​ ಅಸೋಸಿಯೇಷನ್ ವತಿಯಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಅವರು ಜಾತ್ರೆ ಮದುವೆ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳು ನಡೆಯುವ ಸಮಯದಲ್ಲಿ ಕೊರೊನಾ ಭೀತಿ ಎದುರಾಗಿ ಲಾಕ್​ಡೌನ್​ನಿಂದ ಡೆಕೊರೇಷನ್​ ಸಪ್ಲೈಯರ್ಸ್​​ ಮಾಲೀಕರು ಹಾಗೂ ಕಾರ್ಮಿಕರು ಕೆಲಸವಿಲ್ಲದೆ ನಷ್ಟ ಅನುಭವಿಸಿ ಆರ್ಥಿಕ ಸಂಕಷ್ಟ ಅನುಭವಿಸುವಂತಾಗಿದೆ ಎಂದರು.

ಆರ್ಥಿಕ ನೆರವು ನೀಡುವಂತೆ ಮನವಿ..

ಮಂಟಪ ನಿರ್ಮಾಣ ಕೆಲಸ ಮಾಡುತ್ತಿದ್ದ ಕಾರ್ಮಿಕರು ಲಾಕ್​ಡೌನ್​ನಿಂದ ತುತ್ತು ಅನ್ನಕ್ಕಾಗಿ ಪರದಾಟ ನಡೆಸುವಂತಾಗಿದೆ. ಅಲ್ಲದೆ ಯಾವುದೇ ಸಭೆ, ಸಮಾರಂಭ ನಡೆಯದೇ ಕೆಲಸವಿಲ್ಲದೆ ಮಾಲೀಕರು ವೃತ್ತಿ ನಂಬಿಕೊಂಡು ಮಾಡಿದ ಸಾಲ ಮರುಕಳಿಸಲಾಗದೆ ಕಷ್ಟ ಅನುಭವಿಸುವಂತಾಗಿದೆ ಎಂದು ಜಿಲ್ಲಾಧಿಕಾರಿ ಮುಂದೆ ಕಷ್ಟ ಹೇಳಿಕೊಂಡರು.

ನಾರ್ಥ್ ಕರ್ನಾಟಕ ಟೆಂಟ್ ಅಂಡ್ ಡೆಕೊರೇಷನ್​ ವೆಲ್​ಫೇರ್ ಅಸೋಸಿಯೇಷನ್​ಗೆ ಒಳಪಡುವ 16 ಜಿಲ್ಲೆಗಳಲ್ಲಿ ಸುಮಾರು 11 ಸಾವಿರ ಮಾಲೀಕರು ಹಾಗೂ 1.5 ಲಕ್ಷ ಕಾರ್ಮಿಕರು ವೃತ್ತಿ ನಂಬಿಕೊಂಡು ಬದುಕು ಕಟ್ಟಿಕೊಂಡವರಿಗೆ ಆರ್ಥಿಕ ಸಂಕಷ್ಟ ಅನುಭವಿಸುಂತಾಗಿದೆ. ಸರ್ಕಾರ ಆರ್ಥಿಕ ನೆರವು ನೀಡುವಂತೆ ಎಡಿಸಿ ಔದ್ರಾಮ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.