ETV Bharat / state

ಇನ್ಫೋಸಿಸ್ ವತಿಯಿಂದ ಪ್ರವಾಹ ಸಂತ್ರಸ್ತರಿಗೆ ಪರಿಹಾರ ಸಾಮಗ್ರಿ ವಿತರಣೆ

ಸಿಂದಗಿ, ಇಂಡಿ, ಚಡಚಣ ತಾಲೂಕಿನ 36 ಹಳ್ಳಿಗಳಿಗೆ 1,500 ಆಹಾರ ಸಾಮಗ್ರಿಗಳ ಕಿಟ್​ಗಳನ್ನು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ನೇತೃತ್ವದಲ್ಲಿ ತಲುಪಿಸುವ ಕಾರ್ಯವನ್ನು ಇನ್ಫೋಸಿಸ್‌ ಮಾಡುತ್ತಿದೆ.

Relief for flood victims by the Infosys Foundation
ಇಸ್ಫೋಸಿಸ್ ಫೌಂಡೇಶನ್‌ ವತಿಯಿಂದ ಪ್ರವಾಹ ಸಂತ್ರಸ್ತರಿಗೆ ಪರಿಹಾರ ಸಾಮಗ್ರಿ
author img

By

Published : Oct 22, 2020, 12:53 PM IST

ವಿಜಯಪುರ: ಜಿಲ್ಲೆಯ ಪ್ರವಾಹ ಸಂತ್ರಸ್ತರಿಗೆ ಇಸ್ಫೋಸಿಸ್ ಫೌಂಡೇಶನ್‌ ವತಿಯಿಂದ ಅಗತ್ಯ ಪರಿಹಾರ ಸಾಮಗ್ರಿ ವಿತರಿಸಲಾಯಿತು.

ಇಸ್ಫೋಸಿಸ್ ಫೌಂಡೇಶನ್‌ ವತಿಯಿಂದ ಪ್ರವಾಹ ಸಂತ್ರಸ್ತರಿಗೆ ಪರಿಹಾರ ಸಾಮಗ್ರಿ ವಿತರಣೆ

ಕಳೆದ ವಾರ ಭೀಮಾ ನದಿಯ ನೆರೆಗೆ ಅನೇಕ ಗ್ರಾಮಗಳು ಸಂಪೂರ್ಣವಾಗಿ ಜಲಾವೃತವಾದ ಪರಿಣಾಮ, ಪ್ರವಾಹದಿಂದ ಹಲವು ಕುಟುಂಬಗಳು ಮನೆ ಕಳೆದುಕೊಂಡು ಬೀದಿಯಲ್ಲಿ ವಾಸ ಮಾಡುತ್ತಿವೆ. ಹೀಗಾಗಿ, ಸಂತ್ರಸ್ತರ ನೆರವಿಗೆ ಧಾವಿಸಿರುವ ಸುಧಾಮೂರ್ತಿ ಪರಿಹಾರ ಸಾಮಗ್ರಿಗಳನ್ನು ತಲುಪಿಸುವ ಕಾರ್ಯ ಮಾಡುತ್ತಿದ್ದಾರೆ.

ಈಗಾಗಲೇ ನಾಲ್ಕು ವಾಹನಗಳ ಮೂಲಕ ಸಂತ್ರಸ್ತರಿಗೆ ಅಗತ್ಯ ಸಾಮಗ್ರಿಗಳನ್ನು ತಲುಪಿಸುವ ಕಾರ್ಯ ಮಾಡಲಾಗುತ್ತಿದ್ದು, ರಾಮಕೃಷ್ಣ ಸೇವಾಶ್ರಮ, ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಕೇಂದ್ರ ಈ ಕೆಲಸಕ್ಕೆ ಸಾಥ್ ನೀಡಿದೆ. ಎಡಿಸಿ ಔದ್ರಾಮ್ ಸಾಮಗ್ರಿಗಳನ್ನು ಹೊತ್ತ ವಾಹನಗಳಿಗೆ ಚಾಲನೆ ನೀಡಿ ಅಗತ್ಯ ವಸ್ತುಗಳನ್ನು ಸಂತ್ರಸ್ತರಿಗೆ ಕಳುಹಿಸಿದರು.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.