ವಿಜಯಪುರ: ಮುಖ್ಯಮಂತ್ರಿಗಳು ನಮ್ಮನ್ನು ಸಚಿವರನ್ನಾಗಿ ಮಾಡಿದ್ದಾರೆ. ಅವರು ಹೇಳಿದರೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ದ ಎಂದು ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ಹೇಳಿದ್ದಾರೆ.
ಸಚಿವ ಸಂಪುಟ ವಿಸ್ತರಣೆ ವೇಳೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಎಂದು ಸಿಎಂ ಕೇಳಿದರೆ ತಮ್ಮ ಉತ್ತರ ಏನು ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ನನಗೆ ಸಚಿವ ಸ್ಥಾನ ನೀಡಿದವರು ಮುಖ್ಯಮಂತ್ರಿಗಳು, ಈಗ್ಲೆ ಸಚಿವ ಸ್ಥಾನ ಬಿಟ್ಟು ಕೊಡು ಎಂದರೆ, ನಾನು ಬಿಟ್ಟು ಕೊಡಲು ಸಿದ್ದ ಎಂದರು.
ಕಳೆದ 30 ವರ್ಷಗಳಿಂದ ಪಕ್ಷದಲ್ಲಿ ಇದ್ದೇನೆ, ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡಿದ್ದೇನೆ. ನಾಳೆಯಿಂದ ಪಕ್ಷದ ಚಟುವಟಿಕೆಯಲ್ಲಿ ತೊಡಗಿಕೊಳ್ಳಿ ಎಂದು ಸಿಎಂ ಹೇಳಿದ್ರೆ ಆ ಕ್ಷಣದಲ್ಲೇ ಜವಬ್ದಾರಿ ವಹಿಸಿಕೊಳ್ಳುವುತ್ತೇನೆ ಎಂದು ಹೇಳಿದರು.