ವಿಜಯಪುರ: ಕಬಡ್ಡಿ ಪ್ರೋ ಲೀಗ್ ಪಂದ್ಯಾವಳಿಯ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಲು ತೆರಳುತ್ತಿದ್ದ ಕ್ರೀಡಾಪಟುಗಳಿದ್ದ ಟವೇರಾ ವಾಹನಕ್ಕೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಕ್ರೀಡಾಪಟುಗಳು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕೊಲ್ಹಾರ ಬಳಿ ನಡೆದಿದೆ.
ಮೃತ ಕ್ರೀಡಾಪಟುಗಳನ್ನು ಸೋಹೆಲ್ (22) ಹಾಗೂ ಮಹಾದೇವ (20) ಎಂದು ಗುರುತಿಸಲಾಗಿದೆ. ಮಹಾರಾಷ್ಟ್ರದ ಬಾರಾಮಟ್ಟಿ ಜಿಲ್ಲೆಯ ಎಂಟು ಕ್ರೀಡಾ ಪಟುಗಳು ಟವೇರಾ ವಾಹನದಲ್ಲಿ ಬಾಗಲಕೋಟೆಯ ಜಿಲ್ಲೆಯ ತುಳಸಿಗೇರಿ ಗ್ರಾಮಕ್ಕೆ ತೆರಳುತ್ತಿದ್ದರು. ಈ ವೇಳೆ, ಎದುರಿಗೆ ಬಂದ ಲಾರಿ ಡಿಕ್ಕಿಯಾಗಿ ಇಬ್ಬರು ಕ್ರೀಡಾಪಟುಗಳು ಸ್ಥಳದಲ್ಲೇ ಸಾವನ್ನಪ್ಪಿದ್ದು, ಆರು ಜನ ಕ್ರೀಡಾಪಟುಗಳು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಕೊಲ್ಹಾರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.
ಓದಿ: ಸಿಡಿ ಪ್ರಕರಣ: ಕಿಂಗ್ ಪಿನ್ಗಳ ಶೋಧ ಕಾರ್ಯಕ್ಕೆ ನಾಲ್ಕು ತಂಡ ರಚಿಸಿದ ಎಸ್ಐಟಿ
ಘಟನಾ ಸ್ಥಳಕ್ಕೆ ಕೊಲ್ಹಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಈ ಸಂಬಂಧ ಕೊಲ್ಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.