ETV Bharat / state

ಅವ್ರು ಯೋಚಿಸಿ ಮಾತಾಡಬೇಕು, ಜೈಲಿಗೆ ಹೋಗೋಕೆ ನಾ ಸಿದ್ಧ : ಸಚಿವ ಸುಧಾಕರ್ ವಿರುದ್ಧ ರಮೇಶ್ ಕುಮಾರ್ ಗರಂ - ಸಚಿವ ಸುಧಾಕರ್​ ಹೇಳಿಕೆಗೆ ಮಾಜಿ ಸ್ಪೀಕರ್​ ರಮೇಶ್​ ಕುಮಾರ್​​​ ಪ್ರತಿಕ್ರಿಯೆ

ಅವರು ಮಾತನಾಡುವಾಗ ಗೌರವಯುತವಾಗಿ, ಯೋಚನೆ ಮಾಡಿ ಮಾತಾಡಬೇಕು. ಸರ್ಕಾರ ನಡೆಸುವವರು ಹೀಗೆ ಮಾಡ್ತೀವಿ ಅಂದ್ರೆ ಅವರ ಬಳಿ ಸರಿಯಾದ ಸಾಕ್ಷ್ಯಾಧಾರ ಇರಬೇಕು. ಜೈಲಿಗೆ ಹೋಗೋ ಸ್ಥಿತಿ ಬಂದಾಗ ನಾನು ಹೋಗೋಕೆ ಸಿದ್ಧವಾಗಿದ್ದೇನೆ, ನಂದೇನು ತಕರಾರಿಲ್ಲ..

ramesh-kumar-reaction-on-minister-sudhakar-statement
ರಮೇಶ್ ಕುಮಾರ್
author img

By

Published : Oct 22, 2021, 3:25 PM IST

ವಿಜಯಪುರ : ಜೈಲಿಗೆ ಹೋಗೊದಕ್ಕೆ ನಾನು ಸಿದ್ಧವಾಗಿದ್ದೇನೆ. ಅವರ ಕೆಲಸ ಅವರು ಮುಂದುವರೆಸಲಿ, ನಾನು ಈ ದೇಶದ ಪ್ರಜೆ, ಕಾನೂನನ್ನು ಗೌರವಿಸುತ್ತೇನೆ ಎಂದು ಸಚಿವ ಸುಧಾಕರ್​ ಹೇಳಿಕೆಗೆ ಮಾಜಿ ಸ್ಪೀಕರ್​ ರಮೇಶ್​ ಕುಮಾರ್​​​ ತಿರುಗೇಟು ನೀಡಿದರು.

ನಗರದಲ್ಲಿ ಮಾತನಾಡಿದ ಅವರು, ಸರ್ಕಾರ ಅಂದ ಮೇಲೆ ಅವರು ಯೋಚನೆ ಮಾಡಿಯೇ ಮಾತಾಡಿರ್ತಾರೆ. ಜೈಲಿಗೆ ಕಳಿಸೋ ವ್ಯವಸ್ಥೆ ಅವರು ಮಾಡಿದ್ರೆ, ಹೋಗೋಕೆ ನಾ ಸಿದ್ಧವಾಗಿದ್ದೇನೆ ಎಂದು ಹೇಳಿದರು.

ಸಚಿವ ಸುಧಾಕರ್‌ ಅವರಿಗೆ ಮಾಜಿ ಸ್ಪೀಕರ್‌ ರಮೇಶ್‌ಕುಮಾರ್‌ ತಿರುಗೇಟು ನೀಡಿರುವುದು..

ಇದನ್ನು ಓದಿ-ಮಾಜಿ ಸ್ಪೀಕರ್ ರಮೇಶ್‌ಕುಮಾರ್‌ರನ್ನ ಜೈಲಿಗೆ ಕಳುಹಿಸುವವರೆಗೂ ವಿರಮಿಸಲ್ಲ : ಸಚಿವ ಸುಧಾಕರ್ ಶಪಥ

ಸಾಕ್ಷ್ಯಾಧಾರ ಇರಬೇಕು : ಅವರು ಮಾತನಾಡುವಾಗ ಗೌರವಯುತವಾಗಿ, ಯೋಚನೆ ಮಾಡಿ ಮಾತಾಡಬೇಕು. ಸರ್ಕಾರ ನಡೆಸುವವರು ಹೀಗೆ ಮಾಡ್ತೀವಿ ಅಂದ್ರೆ ಅವರ ಬಳಿ ಸರಿಯಾದ ಸಾಕ್ಷ್ಯಾಧಾರ ಇರಬೇಕು. ಜೈಲಿಗೆ ಹೋಗೋ ಸ್ಥಿತಿ ಬಂದಾಗ ನಾನು ಹೋಗೋಕೆ ಸಿದ್ಧವಾಗಿದ್ದೇನೆ, ನಂದೇನು ತಕರಾರಿಲ್ಲ ಎಂದರು.

ಆರ್​ಎಸ್​ಎಸ್ ಟೀಕಾ ಪ್ರಹಾರ : ನಾನೊಬ್ಬ ಆರ್ಡಿನರಿ ಮನುಷ್ಯ. ಏನೋ ಗ್ರಹಚಾರಕ್ಕೆ ರಾಜಕೀಯಕ್ಕೆ ಬಂದಿರ್ತೇವೆ, ಜನ ನಮಗೊಂದು ಅವಕಾಶ ಕೊಟ್ಟಿರ್ತಾರೆ. ದೊಡ್ಡ ದೊಡ್ಡವರ ವಿಚಾರಕ್ಕೆಲ್ಲಾ ನಾವು ಮಾತಾಡೋದಿಲ್ಲ. ಆರ್​ಎಸ್​ಎಸ್ ಸಂಘಟನೆ, ಅವರ ಪಾಡಿಗೆ ಅವರಿದ್ದಾರೆ, ಹೇಳಬೇಕಾದ ಅಗತ್ಯ ಬಂದಾಗ ಹೇಳ್ತೇನೆ ಎಂದರು.

ರಮೇಶ್‌ಕುಮಾರ್‌ ನಾಮಕಾವಾಸ್ತೆಗೆ ಬಂದ್ರಾ?: ಕ್ಯಾಂಪ್ ಆಫೀಸ್ ಎಲ್ಲಿ ಹೋಗಂದ್ರೆ ಹೋಗೋದು, ಏನ್ ಹೇಳಿದ್ರೆ ಕೇಳೋದು. ನಾನು ಮೊನ್ನೆ ಬಂದೆ, ಹೆಚ್ಚು ಕೆಲಸ ಇದೆ ಅಂತಾ ನನಗೇನು ತೋಚುತ್ತಿಲ್ಲ. ಇವತ್ತು ಕ್ಯಾಂಪೇನ್‌ಗೆ ಹೋಗಬೇಕು ಅಂದುಕೊಂಡಿದ್ದೇನೆ. ಹೋಗೋದಕ್ಕೆ ವ್ಯವಸ್ಥೆ ಆದ್ರೆ ಇವತ್ತು ಅಥವಾ ನಾಳೆ ವಾಪಸ್ ಹೋಗ್ತೀನಿ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.