ETV Bharat / state

ವಿಜಯಪುರದಲ್ಲಿ ಉತ್ತಮ ಮಳೆ: ಹವಾಮಾನ ಇಲಾಖೆ ಮಾಹಿತಿ

ವಿಜಯಪುರ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ಇಂದಿನವರಿಗೆ 557.3 ಮೀ.ಮೀ ಪ್ರಮಾಣದ ಮಳೆ ದಾಖಲಾಗಿದೆ ಎಂದು ಜಿಲ್ಲಾ ಹವಾಮಾನ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಿಜಯಪುರದಲ್ಲಿ ಉತ್ತಮ ಮಳೆ
ವಿಜಯಪುರದಲ್ಲಿ ಉತ್ತಮ ಮಳೆ
author img

By

Published : Sep 16, 2020, 5:28 PM IST

Updated : Sep 16, 2020, 5:50 PM IST

ವಿಜಯಪುರ: ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ ಉತ್ತಮವಾಗಿ ಮಳೆಯಾಗುತ್ತಿದೆ ಎಂದು ಜಿಲ್ಲಾ ಹವಾಮಾನ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ‌.

ಕಳೆದ ಮೂರ್ನಾಲ್ಕು ದಿನಗಳಿಂದ ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣ ನಿರ್ಮಾಣವಾಗಿದ್ದು, ಜಿಟಿ ಜಿಟಿ ಮಳೆಯ ಆರ್ಭಟ ಮುಂದುವರೆದಿದೆ. ಜಿಲ್ಲಾ ಹವಾಮಾನ ಇಲಾಖೆ ಅಧಿಕಾರಿಗಳ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ ಸೆಪ್ಟಂಬರ್ ಕೊನೆಯವರೆಗೆ 514 ಮೀ.ಮೀ ಮಳೆಯಾಗುವುದು ವಾಡಿಕೆ. ಆದ್ರೆ ಇಂದಿನವರಿಗೆ 557.3 ಮೀ.ಮೀ ಪ್ರಮಾಣದ ಮಳೆ ದಾಖಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ವಿಜಯಪುರದಲ್ಲಿ ಉತ್ತಮ ಮಳೆ

ಜಿಲ್ಲೆಯ ಮನಗೂಳಿಯಲ್ಲಿ 18.2 ಮೀ ಮೀ, ಬಸವನ ಬಾಗೇವಾಡಿ 17.1 ಹಾಗೂ ಹೂವಿನ ಹಿಪ್ಪರಗಿಯಲ್ಲಿ 22.2 ಮೀ.ಮೀ ಮಳೆ ವರದಿಯಾಗಿದೆ‌. ನಿನ್ನೆಯ ದಿನ ಮನಗೂಳಿಯಲ್ಲಿ 15.1 ಮೀ.ಮೀ, ಅಲಮೇಲ ಪಟ್ಟಣದಲ್ಲಿ 15.8 ಮೀ.ಮೀ ಮಳೆ ಪ್ರಮಾಣ ದಾಖಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Last Updated : Sep 16, 2020, 5:50 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.