ಮಂಗಳೂರು/ಚಿಕ್ಕೋಡಿ/ವಿಜಯಪುರ: ಇಂದು ಬೆಳಿಗ್ಗೆ ಸೂರ್ಯಗ್ರಹಣ ಸಂಭವಿಸಿತ್ತು. ಅದರ ಬೆನ್ನಲ್ಲೇ ರಾಜ್ಯದ ಕೆಲವೆಡೆ ಗುಡುಗು ಸಹಿತ ಭಾರಿ ಮಳೆ ಸುರಿದಿದೆ.
ಕುಕ್ಕೆ ಸುಬ್ರಹ್ಮಣ್ಯದಲ್ಲಿ ಗುಡುಗು ಸಹಿತ ಭಾರಿ ಮಳೆ...
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನಾದ್ಯಂತ ಗುಡುಗು ಸಹಿತ ಮಳೆಯಾಗಿದೆ. ಏಕಾಏಕಿ ಸುರಿದ ಮಳೆಯಿಂದಾಗಿ ಜನರು ಕಂಗಾಲಾಗಿದ್ದಾರೆ. ಕುಕ್ಕೆ ಸುಬ್ರಹ್ಮಣ್ಯದಲ್ಲೂ ಸುರಿದ ಮಳೆಯಿಂದಾಗಿ ಪ್ರವಾಸಿಗರು ಸಂಕಷ್ಟಕ್ಕೀಡಾಗಿದ್ದಾರೆ. ಮಳೆಯಿಂದಾಗಿ ಕ್ರಿಸ್ಮಸ್ ಆಚರಣೆಗೂ ಅಡ್ಡಿಯಾಗಿದೆ.
ಚಿಕ್ಕೋಡಿ ಭಾಗದಲ್ಲಿ ಮಳೆರಾಯನ ಅರ್ಭಟ...
ಬೆಳಗಾವಿ ಜಿಲ್ಲೆಯ ಗೋಕಾಕ್, ಚಿಕ್ಕೋಡಿ, ಹುಕ್ಕೇರಿ, ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಮಳೆಯಾಗಿದ್ದು, ಕೊಯ್ಲಿಗೆ ಬಂದ ಬೆಳೆಗಳು ಹಾಳಗಿವೆ.
ಸೂರ್ಯಗ್ರಹಣದ ಬಳಿಕ ಸುರಿದ ಮಳೆಯಿಂದ ಗಡಿ ಭಾಗದ ಜನರು ಆಶ್ಚರ್ಯಕ್ಕೊಳಗಾಗಿದ್ದಾರೆ. ಮಳೆಯ ವಾತಾವರಣ ನಿರ್ಮಾಣವಾಗದೆ. ಏಕಾಏಕಿ ಮಳೆ ಬಿದ್ದಿರುವ ಪರಿಣಾಮ ಬೆಳೆಗಳು ಹಾಳಾಗಿದ್ದು, ಮತ್ತೆ ಈ ಭಾಗದ ರೈತರು ಕಂಗಾಲಾಗುವಂತಾಗಿದೆ.
ವಿಜಯಪುರದಲ್ಲೂ ಮಳೆ...
ಅತ್ತ ವಿಜಯಪುರದಲ್ಲಿ ಸಂಜೆಯಿಂದ ಮಳೆ ಪ್ರಾರಂಭವಾಗಿತ್ತು. ಮಧ್ಯಾಹ್ನದಿಂದಲೇ ಮೋಡ ಕವಿದ ವಾತಾವರಣವಿತ್ತು. ಗ್ರಹಣದ ನಿಮಿತ್ತ ಮಧ್ಯಾಹ್ನಕ್ಕೂ ಮುಂಚೆ ಮೋಡವಿದ್ದ ಕಾರಣ ಕಂಕಣ ಸೂರ್ಯಗ್ರಹಣ ಸ್ಪಷ್ಟವಾಗಿ ಗೋಚರಿಸಿರಲಿಲ್ಲ. ಕಳೆದ ಕೆಲ ದಿನಗಳಿಂದಲೂ ನಗರದಲ್ಲಿ ಮೋಡಕವಿದ ವಾತಾವರಣ ನಿರ್ಮಾಣವಾಗಿತ್ತು. ಅಲ್ಲಲ್ಲಿ ತುಂತುರು ಮಳೆಯಾಗಿದೆ. ಈ ಮಳೆಯಿಂದ ಜಿಲ್ಲೆಯಲ್ಲಿ ಬೆಳೆದ ದ್ರಾಕ್ಷಿ ಹಾಗೂ ತೊಗರಿ ಬೆಳೆ ಹಾಳಾಗುವ ಸಾಧ್ಯತೆ ಇದೆ. ಇದರಿಂದಾಗಿ ಬೆಳೆಗಾರರಲ್ಲೂ ಆತಂಕ ಮೂಡಿದೆ.