ವಿಜಯಪುರ : ನೆರೆ ಪೀಡಿತರ ಸಲುವಾಗಿ ಯತ್ನಾಳ ಹಾಗೂ ಮಾಧ್ಯಮದವರ ಹೇಳಿಕೆಯಿಂದಲೇ 1,200 ಕೋಟಿ ಬಂದಿದೆ. ಶ್ರೀಶೈಲ ಜಗದ್ಗುರು ಬಗ್ಗೆ ಮಾಜಿ ಸಚಿವರು ಹಗುರವಾಗಿ ಮಾತನಾಡಿದ್ದಾರೆ. ಶ್ರೀಶೈಲ ಜಗದ್ಗುರುಗಳೇ ಪತ್ರ ಬರೆದಿದ್ದಾರೋ ಅಥವಾ ಯಾರೋ ಬರೆಸಿದ್ದಾರೆ ಎಂದಿರುವುದು ಅಕ್ಷಮ್ಯ ಅಫರಾಧ. ಮಾಜಿ ಸಚಿವರು ಜಗದ್ಗುರುಗಳ ಹಾಗೂ ಹಿಂದೂ ಸಮಾಜದ ಕ್ಷಮೆ ಕೇಳಬೇಕು ಎಂದು ವಿವೇಕಾನಂದ ಸೇನೆಯ ಅಧ್ಯಕ್ಷ ರಾಘವ ಅಣ್ಣಿಗೇರಿ ಆಗ್ರಹಿಸಿದ್ದಾರೆ.
ಜನಪ್ರತಿನಿಧಿಯಾಗಿ ಯತ್ನಾಳ ಅವರು ಮಾತನಾಡಿದ್ದಾರೆ. ಶೋಕಾಸ್ ನೋಟಿಸ್ ವಾಪಸ್ಸು ಪಡೆಯಬೇಕೆಂದು ಸ್ವಾಮಿ ವಿವೇಕಾನಂದ ಸೇನೆ ಹಾಗೂ ಯತ್ನಾಳ ಬೆಂಬಲಿಗರು ಮತ್ತು ಬಿಜೆಪಿ ಕಾರ್ಯಕರ್ತರು ಆಗ್ರಹಿಸುತ್ತೇವೆ. 15 ವರ್ಷಗಳಲ್ಲಿ ಮೊದಲ ಬಾರಿಗೆ ವಿಜಯಪುರದ ರಸ್ತೆಗಳ ಬಗ್ಗೆ ಮಾಜಿ ಸಚಿವರು ಮಾತನಾಡಿದ್ದಾರೆ. 2004 ರಲ್ಲಿ ನಾವೆಲ್ಲರೂ ಸೇರಿ ಪ್ರಚಾರ ಮಾಡಿ ಗೆಲ್ಲಿಸಿದ್ದೆವು. 2008 ರಲ್ಲಿ ಮತ್ತೆ ಶಾಸಕರಾಗಿ ಆಯ್ಕೆಯಾಗಿದ್ದರು. ಅಪ್ಪಾಸಾಹೇಬ ಪಟ್ಟಣಶೆಟ್ಟಿ ಪಕ್ಷ ವಿರೋಧಿ ಚಟುವಟಿಕೆ ಮಾಡುತ್ತಿದ್ದಾರೆ. ಪಕ್ಷ ವಿರೋಧಿ ಹೇಳಿಕೆ ನೀಡುತ್ತಿದ್ದು ಅವರನ್ನು ಉಚ್ಚಾಟನೆ ಮಾಡಲು ನಾವು ರಾಜ್ಯಾಧ್ಯಕ್ಷರಿಗೆ ಪತ್ರ ಬರೆಯುತ್ತೇವೆ ಎಂದು ತಿಳಿಸಿದರು.
ರಾಜ್ಯಾಧ್ಯಕ್ಷರ ಸಭೆಗೆ ಯತ್ನಾಳ ಹೋಗಿದ್ದಾರೆ. ಅಪ್ಪಾಸಾಹೇಬ ಪಟ್ಟಣಶೆಟ್ಟಿ ಗುಂಪುಗಾರಿಕೆ ಮಾಡುತ್ತಿದ್ದಾರೆ. ಭ್ರಷ್ಟಾಚಾರದಲ್ಲಿ ಕರ್ನಾಟಕದಲ್ಲಿ ವಿಜಯಪುರ ನಂ. 1 ಸ್ಥಾನದಲ್ಲಿದೆ. 9 ವರ್ಷ ಅಧಿಕಾರದಲ್ಲಿದ್ದವರೇ ಎಲ್ಲದಕ್ಕೂ ಹೊಣೆ. ಯತ್ನಾಳ ಅವರು ಈಗ ಅಧಿಕಾರಕ್ಕೆ ಬಂದು 15 ತಿಂಗಳುಗಳಾಗಿವೆ. 2014 ರ ಚುನಾವಣೆಯಲ್ಲಿ ಅಪ್ಪಾಸಾಹೇಬ 3 ನೇ ಸ್ಥಾನಕ್ಕೆ ಹೋಗಿದ್ದರು. ಅಮಿತ್ ಶಾ ಅವರೇ ಯತ್ನಾಳ ಅವರನ್ನು ದೆಹಲಿಗೆ ಕರೆಸಿಕೊಂಡು ಟಿಕೆಟ್ ಕೊಟ್ಟಿದ್ದಾರೆ. 15 ತಿಂಗಳಲ್ಲಿ 500 ಕೋಟಿ ರೂ.ಕ್ಕಿಂತ ಅಧಿಕ ಹಣವನ್ನು ಜಿಲ್ಲೆಗೆ ತಂದಿದ್ದಾರೆ. ಅಲ್ಲದೆ 100 ಕೋಟಿ ಹಣವನ್ನು ಸ್ಪೆಷಲ್ ಗ್ರ್ಯಾಂಟ್ ಅಡಿ ತಂದಿದ್ದಾರೆ. ನೀವು ಬುಕ್ ತಗೊಂಡು ಬನ್ನಿ ನಾನು ಓಪನ್ ಆಗಿ ಉತ್ತರ ಕೊಡುತ್ತೇನೆ ಎಂದು ಸವಾಲ್ ಹಾಕಿದರು.
9 ವರ್ಷದಲ್ಲಿ 5 ಆಶ್ರಯ ಮನೆ ನಿರ್ಮಿಸಲು ಆಗಿಲ್ಲ, ಅವರೇನಾದ್ರು 5 ಮನೆ ತಂದಿದ್ದರೆ ನಾನು ರಾಜೀನಾಮೆ ನೀಡುತ್ತೇನೆ. ಈ ಬಾರಿ ಯತ್ನಾಳ ಅವರು 9500 ಮನೆ ತಗೊಂಡು ಬಂದಿದ್ದಾರೆ. 9 ವರ್ಷಗಳ ಸಾಧನೆಯ ಪುಸ್ತಕ ಬರೆಯಿರಿ ಎಂದು ಆಗ್ರಹಿಸುತ್ತೇನೆ ಎಂದರು.