ETV Bharat / entertainment

ಶೈನ್​, ಪ್ರವೀರ್ ಶೆಟ್ಟಿ 'ನಿದ್ರಾದೇವಿ Next Door' ಸಿನಿಮಾಗೆ ಸಿಕ್ತು 'ಬಘೀರ'ನ ಬಲ; ಟೀಸರ್​ ರಿಲೀಸ್​​ - NIDRADEVI NEXT DOOR TEASER

ಇತ್ತೀಚೆಗೆ ವಿಭಿನ್ನ ಶೀರ್ಷಿಕೆಯ ''ನಿದ್ರಾದೇವಿ Next door'' ಚಿತ್ರದ ಟೀಸರ್​​ ಅನ್ನು ಬಘೀರ ಸಿನಿಮಾ ಗೆಲುವಿನ ಖುಷಿಯಲ್ಲಿರುವ ರೋರಿಂಗ್ ಸ್ಟಾರ್ ಶ್ರೀಮುರಳಿ ಅನಾವರಣಗೊಳಿಸಿದ್ದಾರೆ.

Nidradevi Next Door film event
''ನಿದ್ರಾದೇವಿ Next door'' ಈವೆಂಟ್ (Photo: ETV Bharat)
author img

By ETV Bharat Entertainment Team

Published : Nov 22, 2024, 7:23 PM IST

ಹೊಸಬರು ವಿಭಿನ್ನ ಕಥೆಗಳ ಮೂಲಕ ಪ್ರೇಕ್ಷಕರೆದುರು ಬರುತ್ತಿದ್ದಾರೆ. ಅದರ ಭಾಗವಾಗಿ ರೂಪಗೊಂಡಿರುವ ಸಿನಿಮಾವೇ ''ನಿದ್ರಾದೇವಿ Next door''. ಇತ್ತೀಚೆಗೆ ಈ ವಿಭಿನ್ನ ಶೀರ್ಷಿಕೆಯ ಚಿತ್ರದ ಟೀಸರ್​​ ಅನಾವರಣಗೊಂಡಿದೆ.

ಈ ಚಿತ್ರ ಸುರಮ್ ಮೂವೀಸ್​ ಅಡಿ ನಿರ್ಮಾಣಗೊಂಡಿದ್ದು, ಟೀಸರ್ ಸುರಮ್ ಮೂವೀಸ್ ಯುಟ್ಯೂಬ್​ನಲ್ಲಿ ಅನಾವರಣಗೊಂಡಿದೆ. ಬೆಂಗಳೂರಿನ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಟೀಸರ್ ಬಿಡುಗಡೆ ಕಾರ್ಯಕ್ರಮ ನಡೆಯಿತು. ಬಘೀರ ಸಿನಿಮಾ ಗೆಲುವಿನ ಖುಷಿಯಲ್ಲಿರುವ ರೋರಿಂಗ್ ಸ್ಟಾರ್ ಶ್ರೀಮುರಳಿ 'ನಿದ್ರಾದೇವಿ Next door' ಟೀಸರ್ ರಿಲೀಸ್ ಮಾಡಿ ಇಡೀ ತಂಡಕ್ಕೆ ಸಾಥ್‌ ನೀಡಿದರು. ಸಿನಿಮಾ ಯಶ ಕಾಣಲೆಂದು ಶುಭ ಹಾರೈಸಿದರು.

ನಟ ಶ್ರೀಮುರಳಿ ಮಾತನಾಡಿ, ನಿರ್ಮಾಪಕರಾದ ಜಯರಾಮ್ ದೇವಸಮುದ್ರ ಅವರು ಬಹಳ ಕಾಳಜಿ ವಹಿಸಿ ಪ್ರೀತಿಯಿಂದ ಸಿನಿಮಾ ಮಾಡಿದ್ದಾರೆ ಅನ್ನೋದು ಟೀಸರ್​ನಲ್ಲಿ ಗೊತ್ತಾಗುತ್ತದೆ. ಅವರಿಗೆ ಒಳ್ಳೆಯದಾಗಲಿ. ನಿಮ್ಮಂತಹ ನಿರ್ಮಾಪಕರು ಇರುವವರೆಗೂ ನಮ್ಮಂತಹ ಕಲಾವಿದರಿಗೆ ಹೆದರುವ ಅವಕಾಶವಿಲ್ಲ. ಪ್ರಯತ್ನ ಪಡಬೇಕು. ಪ್ರಯತ್ನ ಪಡುವುದರಲ್ಲಿ ತಪ್ಪಿಲ್ಲ. ನಿಮ್ಮ ದಯೆಯಿಂದ ಕಲಾವಿದರು, ನಿರ್ದೇಶಕ ಮತ್ತು ಚಿತ್ರತಂಡಕ್ಕೆ ಒಳ್ಳೆಯದಾಗುತ್ತದೆ ಎಂದು ತಿಳಿಸಿದರು.

ನಾನು ಪ್ರವೀರ್ ಜಿಮ್ ಮೇಟ್ಸ್. ಅವರಿಗೆ ಒಳ್ಳೆಯದಾಗುಗುತ್ತದೆ. ನಿಮ್ಮ ಕಣ್ಣಲ್ಲಿ ನಟನೆ ನೋಡಿದ್ದೇನೆ. ಇನ್ನೂ ನಾನು ಶೈನ್ ಅವರ ಫ್ಯಾನ್. ನೀವು ಟೀಸರ್​ನಲ್ಲಿ ಚೆನ್ನಾಗಿ ಕಾಣಿಸುತ್ತಿದ್ದೀರ. ರಿಷಿಕಾಗೂ ಒಳ್ಳೆಯದಾಗಲಿ. ಹಣ ಖರ್ಚು ಮಾಡಿ, ಸಿನಿಮಾ ಸುಮ್ಮನೇ ಮಾಡುವುದಲ್ಲ. ಇದನ್ನು ಕ್ಯಾಪ್ಟನ್ ಆಗಿ ಸುರಾಗ್ ಏನೋ ವಿಷಯ ಹೇಳಲೊರಟಿರುವುದು ಗೊತ್ತಾಗುತ್ತಿದೆ. ಟೀಸರ್​ನಲ್ಲಿ ಮ್ಯೂಸಿಕ್​ ಕೂಡಾ ಚೆನ್ನಾಗಿದೆ ಎಂದರು.

Nidradevi Next Door film event
''ನಿದ್ರಾದೇವಿ Next door'' ಈವೆಂಟ್ (Photo: ETV Bharat)

ನಟ ಪ್ರವೀರ್ ಶೆಟ್ಟಿ ಮಾತನಾಡಿ, ಸುರಾಗ್ ನನಗೂ ಎರಡು ವರ್ಷದ ಜರ್ನಿ. ನಮ್ಮ ಸ್ಟೋರಿ ಇಟ್ಟುಕೊಂಡು ಹಲವಾರು ನಿರ್ಮಾಪಕರ ಬಳಿ ಹೋದೆವು. ಆದ್ರೆ ಜಯರಾಮ್ ಸರ್ ರಿಸೀವ್ ಮಾಡಿದಷ್ಟು ಬೇರೆ ಯಾರೂ ರಿಸೀವ್ ಮಾಡಲಿಲ್ಲ. ಧನ್ಯವಾದಗಳು ಸರ್. ಇದು ನಿಮ್ಮಿಂದ ಆಗಿರೋದು. ಬ್ಯೂಟಿಫುಲ್ ವಿಷ್ಯುವಲ್ಸ್ ಶೂಟ್ ಮಾಡಿದ್ದಾರೆ ನಮ್ಮ ಛಾಯಾಗ್ರಹಕರು, ಮ್ಯೂಸಿಕ್ ಕೂಡಾ ತುಂಬಾ ಚೆನ್ನಾಗಿದೆ. ರಿಷಿಕಾ ಅವರಿಂದ ಬಹಳಷ್ಟು ಕಲಿಯುತ್ತಿದ್ದೇವೆ. ನಮ್ಮ ತಂಡಕ್ಕೆ ನಿಮ್ಮ ಬೆಂಬಲ ಇರಲಿ ಎಂದು ಹೇಳಿದರು.

ನಿರ್ದೇಶಕ ಸುರಾಗ್ ಮಾತನಾಡಿ, ಪ್ರವೀರ್ ಮತ್ತು ನನಗೆ ಒಂದೇ ತರ ಸಿನಿಮಾ ಮಾಡಬೇಕೆಂಬ ವಿಷನ್ ಇತ್ತು. ಅದು ನಮ್ಮಿಬ್ಬರಿಗೂ ಮ್ಯಾಚ್ ಆಯಿತು. ನಾನೇನು ಕಥೆ ಮಾಡಿಕೊಂಡಿದ್ದೆನೋ ಅದನ್ನು ಪ್ರವೀರ್ ಅವರಿಗೆ ಹೇಳಿದಾಗ ಅವರು ಖುಷಿಪಟ್ಟರು. ನಮ್ಮ ಟೆಕ್ನಿಕಲ್ ಟೀಂ ಸಾಕಷ್ಟು ಶ್ರಮಿಸಿದೆ. ಒಂದೊಳ್ಳೆ ತಂಡದ ಜೊತೆ ಕೆಲಸ ಮಾಡಿದ ಖುಷಿ ಇದೆ. ನಿರ್ಮಾಪಕ ಜಯರಾಮ್ ಸರ್ ಒಳಗಡೆ ಒಬ್ಬ ನಿರ್ದೇಶಕರಾಗಿದ್ದಾರೆ. ಅವರ ಸಿನಿಮಾ ಟೇಸ್ಟ್ ತುಂಬಾ ಚೆನ್ನಾಗಿದೆ ಎಂದರು.

ಇದನ್ನೂ ಓದಿ: ವಿವಾದದ ನಂತರ ಒಂದೇ ಕಡೆ ಕಾಣಿಸಿಕೊಂಡ ನಯನತಾರಾ - ಧನುಷ್​: ಒಬ್ಬರನ್ನೊಬ್ಬರು ನಿರ್ಲಕ್ಷಿಸಿರುವ ವಿಡಿಯೋ ನೋಡಿ

'ನಿದ್ರಾದೇವಿ Next door' ಟೀಸರ್ ಪ್ರೇಕ್ಷಕರ ಕುತೂಹಲ ಹೆಚ್ಚಿಸಿದೆ. ಕಥೆಯ ಗಟ್ಟುರಟ್ಟು ಮಾಡದೇ ಟೀಸರ್ ಕಟ್ ಮಾಡಲಾಗಿದೆ. ಚೆಂದದ ಲವ್ ಸ್ಟೋರಿ, ನಿದ್ರೆ ಇಲ್ಲದ ವ್ಯಕ್ತಿಯ ಸುತ್ತ ಸಾಗುವ ಕಥಾಹಂದರ ಸಿನಿಮಾದಲ್ಲಿದೆ. ಪ್ರವೀರ್ ಶೆಟ್ಟಿ, ರಿಷಿಕಾ ನಾಯಕ್ ಜೋಡಿಯಾಗಿ ಕಾಣಿಸಿಕೊಂಡಿದ್ದು, ಬಿಗ್ ಬಾಸ್ ಖ್ಯಾತಿಯ ಶೈನ್ ಶೆಟ್ಟಿ ಹಾಗೂ ಶ್ರುತಿ ಹರಿಹರನ್, ಹಿರಿಯ ನಟ ಕೆ.ಎಸ್.ಶ್ರೀಧರ್, ಸುಧಾರಾಣಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಶ್ರೀವತ್ಸ, ಅನೂಪ್, ಐಶ್ವರ್ಯಾ ಗೌಡ , ಮಾಸ್ಟರ್ ಸುಜಯ್ ರಾಮ್, ಕಾರ್ತಿಕ್ ಪತ್ತಾರ್ ಮತ್ತು ಅನುರಾಗ್ ಪಾಟೀಲ್ ಸೇರಿದಂತೆ ಇತರರು ತಾರಾಬಳಗದಲ್ಲಿದ್ದಾರೆ.

ಇದನ್ನೂ ಓದಿ: ಸ್ಯಾಂಡಲ್​ವುಡ್​ ಸಿನಿ ಸಂಭ್ರಮ: ಪ್ರೇಕ್ಷಕರ ಮನಗೆಲ್ಲಲು ಚಿತ್ರಮಂದಿರ ಪ್ರವೇಶಿಸಿದವು ವಿಭಿನ್ನ ಕಥೆಗಳುಳ್ಳ 7 ಸಿನಿಮಾಗಳು

ಜಯರಾಮ್ ದೇವಸಮುದ್ರ ಅವರು ತಮ್ಮ ಸುರಮ್ ಮೂವೀಸ್ ಬ್ಯಾನರ್​ ಅಡಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಈ ಹಿಂದೆ ಇದೇ ಸಂಸ್ಥೆಯಲ್ಲಿ ರೇವ್ ಪಾರ್ಟಿ ಮತ್ತು ಎಂಗೇಜ್ಮೆಂಟ್ ಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ. ಸಿನಿಮಾಗೆ ನಕುಲ್ ಅಭ್ಯಂಕರ್ ಅವರ ಸಂಗೀತ, ಅಜಯ್ ಕುಲಕರ್ಣಿ ಅವರ ಛಾಯಾಗ್ರಹಣ, ಊಲಾಸ್ ಹೈದೂರ್ ಅವರ ಪ್ರೊಡಕ್ಷನ್ ಡಿಸೈನ್, ಅರ್ಜುನ್ ರಾಜ್ ಅವರ ಸಾಹಸ ನಿರ್ದೇಶನ (ಯುವ ಸಿನಿಮಾ ಖ್ಯಾತಿ) ಮತ್ತು ಹೇಮಂತ್ ಕುಮಾರ್ ಡಿ ಅವರ ಸಂಕಲನವಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.