ETV Bharat / state

ಕಿಡ್ನಿ ವೈಫಲ್ಯ: ಬಡ ಬಾಲಕನ ನೆರವಿಗೆ ಬಂದ ಅಪ್ಪು ಅಭಿಮಾನಿಗಳು, ಹೆಚ್ಚಿನ ಸಹಾಯಕ್ಕೆ ಮೊರೆ - ಬಡ ಬಾಲಕನ ನೆರವಿಗೆ ಬಂದ ಅಪ್ಪು ಅಭಿಮಾನಿಗಳು

ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ 12 ವರ್ಷದ ಬಾಲಕನ ಶಸ್ತ್ರ ಚಿಕಿತ್ಸೆಗೆ ಧನಸಹಾಯ ಮಾಡುವಂತೆ ಚಡಚಣ ಹುಡುಗರ ತಂಡದಿಂದ ಹಣ ಸಂಗ್ರಹಿಸಲಾಗುತ್ತಿದೆ.

puneeth rajkumar fans
ಬಾಲಕನ ಸಹಾಯಕ್ಕೆ ಮೊರೆಯಿಟ್ಟ ಪುನೀತ್​ ರಾಜ್​ಕುಮಾರ್ ಅಭಿಮಾನಿಗಳು
author img

By

Published : Nov 21, 2022, 12:12 PM IST

Updated : Nov 21, 2022, 12:31 PM IST

ವಿಜಯಪುರ: ಪವರ್​ಸ್ಟಾರ್ ಪುನೀತ್​ ರಾಜ್​ಕುಮಾರ್​ ಸಮಾಜಮುಖಿ ಕಾರ್ಯಗಳಿಂದ ಪ್ರೇರಣೆಗೊಂಡಿರುವ ಭೀಮಾತೀರದ ಯುವಕರ ತಂಡವೊಂದು ಸದ್ದಿಲ್ಲದೇ ನೊಂದವರ ಬಾಳಿಗೆ ಬೆಳಕಾಗುತ್ತಿದ್ದಾರೆ.‌ ಇದೀಗ ಎರಡೂ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ 12 ವರ್ಷದ ಬಾಲಕನ ಶಸ್ತ್ರ ಚಿಕಿತ್ಸೆಗೆ ಧನಸಹಾಯ ಮಾಡಲು ಸಾಮಾಜಿಕ ಜಾಲತಾಣ, ಶಾಲೆ, ಕಾಲೇಜ್​ಗಳಿಗೆ ಭೇಟಿ, ಉದ್ಯಮಿ, ರಾಜಕಾರಣಿಗಳಿಂದ ಹಣ ಸಂಗ್ರಹಿಸುತ್ತಿದ್ದಾರೆ. ‌

ಹೌದು, ವಿಜಯಪುರ ಜಿಲ್ಲೆಯ ಚಡಚಣ ಪಟ್ಟಣದ ದಯಾನಂದ ಹಾಗೂ ಅಶ್ವಿನಿ ದಯಾನಂದ ವಾಲಿ ಎಂಬುವರ ಪುತ್ರ ಈರಣ್ಣ ವಾಲಿ ಹುಟ್ಟಿನಿಂದಲೇ ಒಂದೇ ಕಿಡ್ನಿ ಹೊಂದಿದ್ದನು. 7ನೇ ವರ್ಷದವನಿದ್ದಾಗ ಇನ್ನೊಂದು ಕಿಡ್ನಿ ಸಹ ಸರಿಯಾಗಿ ಬೆಳವಣಿಗೆಯಾಗದೇ ವೈಫಲ್ಯ ಕಂಡಿದೆ. ಬಾಲಕನ ಜೀವ ಉಳಿಯಬೇಕಾದ್ರೆ ಒಂದು ತಿಂಗಳೊಳಗಾಗಿ ಮೂತ್ರಪಿಂಡದ ಕಸಿ ಮಾಡಬೇಕಾಗಿದೆ. ತಂದೆಯನ್ನು ಕಳೆದುಕೊಂಡಿರುವ ಈರಣ್ಣ, ತಾಯಿಯ ಆರೈಕೆಯಲ್ಲಿದ್ದಾನೆ. ಕಸಿ ಮಾಡಲು ಸುಮಾರು 25 ಲಕ್ಷ ರೂ. ಖರ್ಚಾಗಲಿದ್ದು, ಬಡವರಾಗಿರುವ ಇವರಿಗೆ ಅಷ್ಟು ಹಣ ಹೊಂದಿಸುವುದು ಕಷ್ಟಸಾಧ್ಯವಾಗಿದೆ.

ಬಾಲಕನ ಶಸ್ತ್ರ ಚಿಕಿತ್ಸೆ ನೆರವಿಗೆ ಬಂದ ಅಪ್ಪು ಅಭಿಮಾನಿಗಳು

ಸಹಾಯಕ್ಕೆ ನಿಂತ ಟೀಂ ಚಡಚಣ ಹುಡುಗರು: ಚಡಚಣದಲ್ಲಿ ವಿವಿಧ ಹುದ್ದೆಯಲ್ಲಿರುವ 13 ಯುವಕರು ಪುನೀತ್ ಪ್ರೇರಣೆಯಿಂದ ತಂಡ ಕಟ್ಟಿಕೊಂಡು ಆರ್ಥಿಕ ಸಂಕಷ್ಟ, ಅನಾರೋಗ್ಯದಿಂದ ಸಂಕಷ್ಟ ಅನುಭವಿಸುತ್ತಿರುವವರ ಸಹಾಯಕ್ಕೆ ಮುಂದಾಗುವ ಕೆಲಸ ಮಾಡುತ್ತಿದ್ದಾರೆ. ತಮ್ಮ ಸಂಬಳದ ಕೆಲ ಭಾಗ ಹಾಗೂ ದಾನಿಗಳ ಸಹಾಯದಿಂದ ಸಂಕಷ್ಟದಲ್ಲಿರುವರಿಗೆ‌ ನೆರವಾಗುತ್ತಿದ್ದಾರೆ. ಈಗ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಬಾಲಕ ಈರಣ್ಣನ‌ ನೆರವಿಗೆ‌ ನಿಂತಿದ್ದಾರೆ.

ಇದನ್ನೂ ಓದಿ: ಥಲಸ್ಸೇಮಿಯಾ ಕಾಯಿಲೆಯಿಂದ ಬಳಲುತ್ತಿರುವ ವರ್ಷದ ಕಂದಮ್ಮ: ಈ ಕುಟುಂಬಕ್ಕೆ ಬೇಕಿದೆ ನೆರವಿನ ಹಸ್ತ

ಸಾಮಾಜಿಕ ಜಾಲತಾಣಗಳ ಮೂಲಕ ಬಾಲಕನ ಸ್ಥಿತಿ ವಿವರಿಸಿದ ಯುವಕರು, ಫೋನ್ ಪೇ, ಗೂಗಲ್ ಪೇ ಇಲ್ಲವೇ ಬ್ಯಾಂಕ್ ಖಾತೆಗೆ ಹಣ ಹಾಕಿ ನೆರವಾಗಬೇಕೆಂದು ದಾನಿಗಳಲ್ಲಿ ಮನವಿ ಮಾಡಿಕೊಳ್ಳುತ್ತಿದ್ದಾರೆ. ಜೊತೆಗೆ, ಬಿಡುವಿನ‌ ಸಮಯದಲ್ಲಿ ಶಾಲೆ, ಕಾಲೇಜ್​ಗಳಿಗೆ ತೆರಳಿ ಬಾಲಕನ ಸಂಕಷ್ಟಕ್ಕೆ ಸ್ಪಂದಿಸುವಂತೆ ವಿದ್ಯಾರ್ಥಿಗಳ ನೆರವು ಕೇಳುತ್ತಿದ್ದಾರೆ. ಜೊತೆಗೆ ಚಿತ್ರನಟ ಯಶ್​ ಭೇಟಿಯಾಗಿ ಪರಿಸ್ಥಿತಿ ವಿವರಿಸಿದ್ದು, ಅವರಿಂದಲೂ ಆರ್ಥಿಕ ನೆರವು ನೀಡುವ ಭರವಸೆ ಸಿಕ್ಕಿದೆ ಎನ್ನಲಾಗ್ತಿದೆ.

ಒಂದು ಇಂಜೆಕ್ಷನ್​ಗೆ 600 ರೂ‌.: ಬಾಲಕ ಈರಣ್ಣನಿಗೆ ಎರಡೂ ಕಿಡ್ನಿ ಇಲ್ಲದ ಕಾರಣ ದಿನೇ ದಿನೇ ದೇಹದ ಸ್ಥಿತಿ ಹದಗೆಡುತ್ತಿದೆ. ಆತನ ಶಸ್ತ್ರಚಿಕಿತ್ಸೆ ಆಗುವವರಿಗೆ ಜೀವ ಉಳಿಸಿಕೊಳ್ಳಲು ನಿತ್ಯ 600 ರೂ. ವೆಚ್ಚದ ಇಂಜೆಕ್ಷನ್ ಪಡೆದುಕೊಳ್ಳಬೇಕಾಗಿದೆ. ಈ ಹಣ ಹೊಂದಿಸಲು ಆತನ ತಾಯಿ ಪರದಾಡುತ್ತಿದ್ದಾರೆ. ಇದ್ದ ಒಂದು ಮನೆಯನ್ನೂ ಗಂಡನ ಚಿಕಿತ್ಸೆಗಾಗಿ ಮಾರಿದ್ದಾರೆ.

ಇದನ್ನೂ ಓದಿ: ನವರಾತ್ರಿಗೆ ವೇಷಗಳ ವಿಶೇಷ.. ಸಹಾಯ ಮಾಡಲು ಪ್ರೇತ ವೇಷಧಾರಿಯಾದ ಯುವಕ

ಸಹೃದಯಿಗಳು ಯಾರಾದರೂ ಬಾಲಕನ ಶಸ್ತ್ರಚಿಕಿತ್ಸೆಗೆ‌ ನೆರವಾಗಲು ಬಯಸುವವರು ಈ ಕೆಳಗಿನ ಬ್ಯಾಂಕ್ ಖಾತೆಗೆ ಧನ ಸಹಾಯ ಮಾಡುವಂತೆ ಪುನೀತ್​ ಅಭಿಮಾನಿಗಳು ಮನವಿ ಮಾಡಿದ್ದಾರೆ.

ಬ್ಯಾಂಕ್ ವಿವರ:

  • ಅಶ್ವಿನಿ ದಯಾನಂದ ವಾಲಿ
  • ಕೆನರಾ ಬ್ಯಾಂಕ್ ಚಡಚಣ ಬ್ರ್ಯಾಂಚ್ ವಿಜಯಪುರ ಜಿಲ್ಲೆ
  • ಅಕೌಂಟ್ ನಂ: 110084273887
  • ಐಎಫ್​ಸಿ ಕೋಡ್: CNRB0010813
  • MICR Code: 586015011
  • ಮೊಬೈಲ್ ನಂ: ಅಶ್ವಿನಿ ದಯಾನಂದ ವಾಲಿ - 916362964900

Last Updated : Nov 21, 2022, 12:31 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.