ವಿಜಯಪುರ: ನಗರದ ಹೊರವಲಯದ ಟೋಲ್ ಗೇಟ್ನಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಕಳೆದ 8 ತಿಂಗಳಿಂದ ವೇತನ ಪಾವತಿಯಾಗಿಲ್ಲ ಎಂದು ಆರೋಪಿಸಿ ಕಾರ್ಮಿಕರು ಪ್ರತಿಭಟನೆ ನಡೆಸಿದರು. ಸದ್ಭವ ಗ್ರೂಪ್ ರಾಷ್ಟ್ರೀಯ ಹೆದ್ದಾರಿಯ ರಸ್ತೆ ಕಾಮಗಾರಿ ಗುತ್ತಿಗೆ ಪಡೆದುಕೊಂಡಿದ್ದು ಇದರಡಿ 1,500 ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ.
ವೇತನ ಕೇಳಿದರೆ ಸದ್ಭವ ಗ್ರೂಪ್‌ನವರು ಸರ್ಕಾರದಿಂದ ಇನ್ನೂ ಹಣ ಬಿಡುಗಡೆಯಾಗಿಲ್ಲ. ಹೀಗಾಗಿ ತಾವೂ ಸಹ ವೇತನ ಪಡೆದುಕೊಂಡಿಲ್ಲ ಎಂದು ಸಬೂಬು ನೀಡುತ್ತಿದ್ದಾರೆ. ಆದರೆ ಅದೇ ವೇತನದ ಮೇಲೆ ನಮ್ಮ ಸಂಸಾರ ನಡೆಯುತ್ತಿದೆ. ಅದನ್ನು ಮೊದಲು ಬಿಡುಗಡೆ ಮಾಡಿ ಎಂದು ಪ್ರತಿಭಟನಾ ಕಾರ್ಮಿಕರು ಒತ್ತಾಯಿಸಿದರು. ವೇತನ ನೀಡುವುದು ವಿಳಂಬವಾದರೆ ಉಪವಾಸ ಸತ್ಯಾಗ್ರಹ ಮಾಡುವುದಾಗಿಯೂ ಕಾರ್ಮಿಕರು ಎಚ್ಚರಿಸಿದರು.
ಇದನ್ನೂ ಓದಿ:ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿ ಮತ್ತೆ ವಿಳಂಬ