ವಿಜಯಪುರ: ಸಿಂಡಿಕೇಟ್ ಬ್ಯಾಂಕ್ ಮ್ಯಾನೇಜರ್ ಅವಾಚ್ಯ ಶಬ್ದಗಳಂದ ನಿಂದಿಸಿ, ಬ್ಯಾಂಕ್‌ನಿಂದ ಹೊರ ಹಾಕಿದ್ದಾರೆ ಎಂದು ಆರೋಪಿಸಿ ಯುವಕನೊರ್ವ ಅರೆ ಬೆತ್ತಲೆಯಾಗಿ ಪ್ರತಿಭಟನೆ ನಡೆಸಿದ ಘಟನೆ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ನಡೆದಿದೆ.
ಬಸವನ ಬಾಗೇವಾಡಿ ತಾಲೂಕಿನ ಹೂವಿನ ಹಿಪ್ಪರಗಿಯ ಸಿಂಡಿಕೇಟ್ ಬ್ಯಾಂಕ್‌ಗೆ ಯುವಕ ವೆಂಕಟೇಶ ದೊಡ್ಡಮನಿ ಗುತ್ತಿಗೆದಾರ ಲೈಸನ್ಸ್ ಪಡೆಯಲು 2 ಲಕ್ಷ ರೂ.ಗಳ ಸಾಲದ ಪತ್ರ ಪಡೆಯಲು ಹೋಗಿದ್ದಾಗ ಬ್ಯಾಂಕ್ ಮ್ಯಾನೇಜರ್ ಅರ್ಜಿಯನ್ನ ಸ್ವೀಕರಿಸದೆ ನಿಂದಿಸಿರೋದಾಗಿ ಯುವಕ ಆರೋಪಿಸಿದ್ದಾನೆ. ಅಲ್ಲದೇ ಬ್ಯಾಂಕ್‌ನಿಂದ ತನ್ನನ್ನು ಹೊರಹಾಕಿದ್ದಾರೆ ಎಂದು ಅರೆ ಬೆತ್ತಲೆಯಾಗಿ ಪ್ರತಿಭಟನೆ ನಡೆಸಿದ್ದಾನೆ.
ಅವಾಚ್ಯ ಪದಗಳಿಂದ ನಿಂದಿಸಿದ ಹೂವಿನಹಿಪ್ಪರಗಿ ಶಾಖೆಯ ಬ್ಯಾಂಕ್ ಮ್ಯಾನೇಜರ್ ವಿರುದ್ಧ ಸೂಕ್ತ ಕ್ರಮಕ್ಕೆ ಜಿಲ್ಲಾಡಳಿತ ಮುಂದಾಗುವಂತೆ ಪ್ರತಿಭಟನಾ ಯುವಕ ವೆಂಕಟೇಶ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಕುಳಿತಿದ್ದಾನೆ.