ವಿಜಯಪುರ: ಹುಲ್ಲುಗಾವಲು ಜಮೀನಿನಲ್ಲಿ ಕುರಿ ಮತ್ತು ದನಗಳನ್ನು ಮೇಯಿಸಲು ಅವಕಾಶ ಕಲ್ಪಿಸುವಂತೆ ಒತ್ತಾಯಿಸಿ ಗೋಮಾಳ ಬಚಾವೋ ಆಂದೋಲನ ಸಮಿತಿ ಕಾರ್ಯಕರ್ತರು ಹೆಸ್ಕಾಂ ಕಛೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು. ನಗರದ ಜಲನಗರದಲ್ಲಿರುವ ಹೆಸ್ಕಾಂ ಇಂಜಿನಿಯರ್ ಕಛೇರಿ ಮುಂಭಾಗದಲ್ಲಿ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು.
ವಿಜಯಪುರ ತಾಲೂಕಿನ ಹಡಗಲಿ ಗ್ರಾಮದಲ್ಲಿ 291 ಎಕರೆ ಸರ್ಕಾರಿ ಜಮೀನನಿದ್ದು, ಈ ಪೈಕಿ 120 ಎಕರೆ ಪ್ರದೇಶದಲ್ಲಿ ಈ ಭಾಗದ ರೈತರು ಹಾಗೂ ಕುರಿಗಾಹಿಗಳು ಜಾನುವಾರು ಮೇಯಿಸುತ್ತಾರೆ.
ಆದ್ರೆ ಹೆಸ್ಕಾಂ ಇಲಾಖೆಯಿಂದ ವಿದ್ಯುತ್ ಸ್ಥಾವರ ನಿರ್ಮಾಣ ಇದೇ ಜಾಗದಲ್ಲಿ ಮಾಡುತ್ತಿರೋದು ಹಡಗಲಿ ಸುತ್ತಮುತ್ತಲಿನ ಗ್ರಾಮದ ರೈತರಿಗೆ ತೊಂದರೆಯಾಗುತ್ತಿದೆ ಎಂದು ಪ್ರತಿಭಟನಾಕಾರು ಜಾನಪದ ವಾದ್ಯ ಬಾರಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ವಿದ್ಯುತ್ ಸ್ಥಾವರ ನಿರ್ಮಾಣ ಮಾಡುವುದರಿಂದ ಜಾನುವಾರುಗಳಿಗೆ ಕುರಿ ಹಾಗೂ ದನ ಮೇಯಿಸಲು ಮೇವಿನ ಕೊರತೆ ಉಂಟಾಗುತ್ತದೆ. ತಕ್ಷಣವೇ ವಿದ್ಯುತ್ ಸ್ಥಾವರ ನಿರ್ಮಾಣ ಕಾಮಗಾರಿ ಸ್ಥಗಿತಗೊಳಿಸುವಂತೆ ಒತ್ತಾಯಿಸಿ ಪ್ರತಿಭಟನಾಕಾರು ಹೆಸ್ಕಾಂ ಕಛೇರಿ ಎದುರು ಪ್ರತಿಭಟನೆ ನಡೆಸಿದ್ರು.