ವಿಜಯಪುರ: ಆಸ್ತಿ ವಿವಾದ ಹಿನ್ನೆಲೆ ಕೊಡಲಿಯಿಂದ ಕೊಚ್ಚಿ ಹೆತ್ತವರನ್ನೇ ಪುತ್ರ ಕೊಲೆ ಮಾಡಿದ ಘಟನೆ ಕರ್ನಾಟಕ- ಮಹಾರಾಷ್ಟ್ರದ ಗಡಿ ಭಾಗದ ಸಾಂಗಲಿ ಜಿಲ್ಲೆಯ ಜತ್ತ ತಾಲೂಕಿನ ಉಮದಿಯ ತೋಟದ ಮನೆಯಲ್ಲಿ ನಡೆದಿದೆ.
ತಂದೆ ಗುರುಲಿಂಗಪ್ಪ ಅರಕೇರಿ(82), ತಾಯಿ ನಾಗವ್ವ ಅರಕೇರಿ(75) ಹಾಗೂ ಅಕ್ಕ ಸಮುದ್ರಾ ಬಾಯಿ(60) ಕೊಲೆಯಾದ ದುರ್ದೈವಿಗಳು. ಸಿದ್ದಪ್ಪ ಅರಕೇರಿ ಕೊಲೆ ಮಾಡಿದ ಪಾಪಿ ಪುತ್ರ. ಹೆತ್ತ ತಂದೆ-ತಾಯಿ ಹಾಗೂ ಒಡಹುಟ್ಟಿದ ಅಕ್ಕನನ್ನು ಕೊಂದ ಸಿದ್ದಪ್ಪ ಅರಕೇರಿ ನಂತರ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ.
ಘಟನೆಗೆ ಆಸ್ತಿ ವಿವಾದ ಕಾರಣ ಎನ್ನಲಾಗಿದ್ದು, ಮಹಾರಾಷ್ಟ್ರದ ಉಮದಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.