ETV Bharat / state

ವಿಜಯಪುರದಲ್ಲೂ ಭಾರಿ ಮಳೆ: 4 ಅಡಿ ನೀರಿನಲ್ಲಿ ಸಿಲುಕಿದ ಕೆಎಸ್​ಆರ್​ಟಿಸಿ ಬಸ್​

ವಿಜಯಪುರ ಜಿಲ್ಲೆಯಲ್ಲೂ ನಿನ್ನೆ ಭಾರಿ ಮಳೆ ಸುರಿದಿದೆ. ಮಸೂತಿ ಗ್ರಾಮಕ್ಕೆ ತೆರಳುತ್ತಿದ್ದ ಸಾರಿಗೆ ಸಂಸ್ಥೆ ಬಸ್​ವೊಂದು ಕೂಡಗಿ ಗ್ರಾಮದಲ್ಲಿನ ಎನ್​ಟಿಪಿಸಿ ರೈಲು ಸೇತುವೆ ಕೆಳಗೆ 4 ಅಡಿ ನೀರಲ್ಲಿ ಸಿಲುಕಿಕೊಂಡಿತ್ತು.

4 ಅಡಿ ನೀರಿನಲ್ಲಿ ಸಿಲುಕಿದ ಖಾಸಗಿ ಬಸ್​..ಪ್ರಯಾಣಿಕರ ಪರದಾಟ
author img

By

Published : Sep 25, 2019, 9:32 AM IST

ವಿಜಯಪುರ: ವಿಜಯಪುರದಿಂದ ಮಸೂತಿ ಗ್ರಾಮಕ್ಕೆ ತೆರಳುತ್ತಿದ್ದ ಸಾರಿಗೆ ಸಂಸ್ಥೆ ಬಸ್​ವೊಂದು ಕೂಡಗಿ ಗ್ರಾಮದಲ್ಲಿನ ಎನ್​ಟಿಪಿಸಿ ರೈಲು ಸೇತುವೆ ಕೆಳಗಡೆ 4 ಅಡಿ ನೀರಲ್ಲಿ ಸಿಲುಕಿಕೊಂಡ ಘಟನೆ ಕಳೆದ ರಾತ್ರಿ ನಡೆದಿದೆ.

4 ಅಡಿ ನೀರಿನಲ್ಲಿ ಸಿಲುಕಿದ ಸಾರಿಗೆ ಬಸ್​...ಪ್ರಯಾಣಿಕರ ಪರದಾಟ

ರಾತ್ರಿ ವರುಣ ಅಬ್ಬರಿಸಿದ್ದು, ಎನ್​ಟಿಪಿಸಿ ರೈಲು ಸೇತುವೆ ಕೆಳಗೆ ಭಾರಿ ಪ್ರಮಾಣದಲ್ಲಿ ನೀರು ಸಂಗ್ರಹಗೊಂಡಿತ್ತು. ಮಸುತಿ ಗ್ರಾಮಕ್ಕೆ ತೆರಳುತ್ತಿದ್ದ ಕೆಎಸ್​ಆರ್​ಟಿಸಿ ಬಸ್ ನೀರಲ್ಲಿ ಸಿಲುಕಿದ್ದರಿಂದ ಪ್ರಯಾಣಿಕರು ಪರದಾಡುವಂತಾಗಿತ್ತು. ಬಳಿಕ ಪ್ರಯಾಣಿಕರನ್ನ ಪರ್ಯಾಯ ವಾಹನದಲ್ಲಿ ಸ್ವಗ್ರಾಮಕ್ಕೆ ಕಳುಹಿಸಲಾಯಿತು. ಮಧ್ಯರಾತ್ರಿವರೆಗೂ ಪರದಾಟ ನಡೆಸಿ, ಬಳಿಕ ಚಾಲಕ ಹಾಗೂ ನಿರ್ವಾಹಕ ಬಸ್​ ಹೊರ ತೆಗೆದರು.

ಅವೈಜ್ಞಾನಿಕವಾಗಿ ಸೇತುವೆ ನಿರ್ಮಾಣವಾಗಿದೆ ಎಂಬ ಆರೋಪಗಳಿವೆ. ಮಳೆಯಾದ್ರೆ ಇಲ್ಲಿ ನೀರು ನಿಲ್ಲುವುದರಿಂದ ಇಂತಹ ಘಟನೆಗಳು ಮರುಕಳಿಸುತ್ತಿವೆ ಎಂದು ಸೇತುವೆ ನಿರ್ಮಾಣ ಕಾಮಗಾರಿ ಗುತ್ತಿಗೆದಾರನ ವಿರುದ್ಧ ಪ್ರಯಾಣಿಕರು, ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Intro:ವಿಜಯಪುರ Body:ವಿಜಯಪುರ:
ಕೆಳಸೇತುವೆಯಲ್ಲಿ ನಿಂತ ನೀರಿನಲ್ಲಿ ಸಾರಿಗೆ ಬಸ್ ಯೊಂದು ಸಿಲುಕಿದ ಘಟನೆ
ಕೂಡಗಿ ಗ್ರಾಮದಲ್ಲಿನ ಎನ್ ಟಿ ಪಿ ಸಿ ರೈಲು ಸೇತುವೆ ಕೆಳಗಡೆ ಸಂಗ್ರಹಗೊಂಡ 4 ಅಡಿ ನೀರಲ್ಲಿ ಸಿಲುಕಿತ್ತು.
ಕಳೆದ ರಾತ್ರಿ ಸುರಿದ ಬಾರಿ ಮಳೆಯಿಂದ ನೀರು ಸಂಗ್ರಹಗೊಂಡು ಬಸ್ ಸಿಲುಕಿ ಮುಂದುಗಡೆ ಹೋಗದೆ ಪ್ರಯಾಣಿಕರು ಪರದಾಡಿದರು.
ಮಸೂತಿ ಗ್ರಾಮದ ಪ್ರಯಾಣಿಕರು ಬಸ್ ಅವಾಂತರದಿಂದ ಪರದಾಡಿದರು.
ಪರ್ಯಾಯ ವಾಹನ ಹುಡುಕಿಕೊಂಡು ಸ್ವಗ್ರಾಮ ಸೇರಿದ ಪ್ರಯಾಣಿಕರು.
ವಿಜಯಪುರದಿಂದ ಮಸೂತಿ ಗ್ರಾಮಕ್ಕೆ ತೆರಳುತ್ತಿದ್ದ ಮಸೂತಿ ಬಸ್.
ಸುಮಾರು ಒಂದು ಗಂಟೆಗೂ ಹೆಚ್ಚು ಕಾಲದಿಂದಲೂ ನೀರಿನಿಂದ ಬಸ್ ಹೊರ ತೆಗೆಯಲು ಶತಪ್ರಯತ್ನ ನಡೆಸಲಾಯಿತು.
ಬಸ್ ಹೊರ ತೆಗೆಯಲು ಮಧ್ಯರಾತ್ರಿ ವರೆಗೂ ಪರದಾಡಿದ ಚಾಲಕ ಹಾಗೂ ನಿರ್ವಾಹಕ.
ಇತರೆ ವಾಹನಗಳು ಹಾಗೂ ಬೈಕ್ ಸವಾರರು ಸಹ ಪರದಾಡಿದರು.
ಅವೈಜ್ಞಾನಿಕವಾಗಿ ಸೇತುವೆ ನಿರ್ಮಾಣ ಹಿನ್ನೆಲೆ ಮಳೆಯಾದ್ರೆ ಸಂಗ್ರಹಗೊಳ್ಳುತ್ತಿರುವ ನೀರು.
ಸೇತುವೆ ನಿರ್ಮಾಣ ಕಾಮಗಾರಿ ಗುತ್ತಿಗೆದಾರನ ವಿರುದ್ಧ ಪ್ರಯಾಣಿಕರ, ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದರು.Conclusion:ವಿಜಯಪುರ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.