ವಿಜಯಪುರ : ನಮ್ಮ ಪ್ರಧಾನಿ ಈಗ ವಿದೇಶದ ಪ್ರಧಾನ ಮಂತ್ರಿಗಳಾಗಿದ್ದಾರೆ , ಅವರಿಗೆ ದೇಶದಲ್ಲಿ ಜಿಡಿಪಿ ಎಷ್ಟಿದೆ? ಪ್ರವಾಹದ ಪರಿಸ್ಥಿತಿ ಹೇಗಿದೆ ? ಈಗ ದೇಶದಲ್ಲಿ ಏನು ನಡೆಯುತ್ತಿದೆ ಎಂಬುದು ಗೊತ್ತಿಲ್ಲ ಎಂದು ಪ್ರಧಾನಿ ಮೋದಿ ವಿರುದ್ಧ ಮಾಜಿ ಗೃಹ ಸಚಿವ ಎಂ.ಬಿ. ಪಾಟೀಲ್ ವಾಗ್ದಾಳಿ ನಡೆಸಿದ್ದಾರೆ.
ವಿಜಯಪುರದ ತಿಕೋಟಾದಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕದ ಪ್ರವಾಹದ ಬಗ್ಗೆ ಮೋದಿಗೆ ಗೊತ್ತಿಲ್ಲ. ಮೋದಿ ಒಬ್ಬ ಗ್ರೇಟ್ ಶೋಮ್ಯಾನ್ ಎಂದು ಹರಿಹಾಯ್ದರು. ಇನ್ನು ಅನರ್ಹ ಶಾಸಕರ ವಿಚಾರದಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಆದೇಶವನ್ನು ಕೋರ್ಟ್ ಎತ್ತಿ ಹಿಡಿಯಬೇಕು. ಹಾಗಾದರೆ ಮಾತ್ರ ಇಂತಹ ಕೆಲಸಕ್ಕೆ ಶಾಸಕರು ಕೈ ಹಾಕಲ್ಲ ಎಂದು ಅನರ್ಹ ಶಾಸಕರಿಗೆ ಟಾಂಗ್ ನೀಡಿದರು.
ಅಲ್ಲದೇ, ಉಪಚುನಾವಣೆ ನಡೆದರೆ ಅದು ಜನರ ಮೇಲೆ ಹೊರೆಯಾಗುತ್ತದೆಯೇ ವಿನಹಃ , ಶಾಸಕರ ಮೇಲಲ್ಲ, ಜನರ ದುಡ್ಡಿನಲ್ಲಿ ಚುನಾವಣೆ ಆಗುತ್ತದೆ, ಹೊರತು ಅನರ್ಹ ಶಾಸಕರ ದುಡ್ಡಿನಲ್ಲಿ ಅಲ್ಲ ಎಂದು ಕಿಡಿ ಕಾರಿದ್ದಾರೆ.