ವಿಜಯಪುರ: ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣದಲ್ಲಿ ಮಳೆಗಾಗಿ ಪ್ರಾರ್ಥಿಸಿ ಮುತ್ತೈದೆಯರು ಬೃಹತ್ ಕುಂಭಾಭಿಷೇಕ ನಡೆಸಿದರು. ಸುಮಾರು 3 ಕಿ.ಮೀ.ವರೆಗೆ ಕುಂಭೋತ್ಸವದ ಮೆರವಣಿಗೆ ನಡೆಯಿತು.
ಮಂಟಪ ಕಟ್ಟಿಯಿಂದ ಕಮರಿಮಠದವರೆಗೆ ಕುಂಭೋತ್ಸವದಲ್ಲಿ 201 ಮಹಿಳೆಯರು ಪಾಲ್ಗೊಂಡಿದ್ದರು. ಕುಂಭ ಹೊತ್ತು ಗಮನ ಸೆಳೆದ ಶಾಲಾ ವಿದ್ಯಾರ್ಥಿನಿಯರು ಜಿಲ್ಲೆಯಲ್ಲಿ ಈ ಬಾರಿ ಉತ್ತಮ ಮಳೆಯಾಗಿ ಸಮೃದ್ಧ ಬೆಳೆ ಬರಲಿ ಎಂದು ಮಳೆರಾಯನಿಗಾಗಿ ಪ್ರಾರ್ಥನೆ ಸಲ್ಲಿಸಿದರು.
ಮೆರವಣಿಗೆಯ ಸಾನ್ನಿಧ್ಯವನ್ನು ಬಂಥನಾಳದ ವೃಷಭಲಿಂಗ ಮಹಾಶಿವಯೋಗಿಗಳು, ಹಳಿಂಗಳಿಯ ಶಿವಾನಂದ ಮಹಾಸ್ವಾಮೀಜಿ ವಹಿಸಿದ್ದರು.
ಕುಂಭ ಮೇಳದೊಂದಿಗೆ ಗುರು ಶಿಷ್ಯರ ಶಿಲಾ ಮೂರ್ತಿಗಳ ಭವ್ಯ ಮೆರವಣಿಗೆ ನಡೆಯಿತು. ವಾದ್ಯ ಮೇಳದೊಂದಿಗೆ ನಡೆದ ಗುರು ಸಂಗನಬಸವ ಶ್ರೀಗಳು, ಶಿಷ್ಯ ಸಿದ್ಧಲಿಂಗ ಮಹಾರಾಜರ ಶಿಲಾ ಮೂರ್ತಿಗಳ ಭವ್ಯ ಮೆರವಣಿಗೆ ಆಕರ್ಷಣೀಯವಾಗಿತ್ತು.