ಮುದ್ದೇಬಿಹಾಳ : ವಿದ್ಯುತ್ ಅವಘಡದಿಂದ ಲಕ್ಷಾಂತರ ರೂ. ಬೆಲೆ ಬಾಳುವ ವಸ್ತುಗಳು ಹಾಗೂ 80 ಸಾವಿರ ನಗದು ಬೆಂಕಿಗೆ ಆಹುತಿಯಾದ ಘಟನೆ ತಾಲೂಕಿನ ಮಡಿಕೇಶ್ವರ ಗ್ರಾಮದಲ್ಲಿ ಗುರುವಾರ ನಡೆದಿದೆ.
ಗ್ರಾಮದ ಶ್ರೀಶೈಲ ಈರಯ್ಯ ಹಿರೇಮಠ ಹಾಗೂ ಚೇತನ ಹಿರೇಮಠ ಸಹೋದರರಿಗೆ ಸೇರಿದ ಡಿಜೆ ಸೌಂಡ್ ಸಿಸ್ಟಮ್ ಅಂಗಡಿ ವಿದ್ಯುತ್ ಅವಘಡದಲ್ಲಿ ಬೆಂಕಿಗೆ ಆಹುತಿಯಾಗಿದೆ.
ಶಾಸಕ ಎ ಎಸ್ ಪಾಟೀಲ ನಡಹಳ್ಳಿ ಹಾಗೂ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ತಹಶೀಲ್ದಾರ್ ಜಿ ಎಸ್ ಮಳಗಿ, ಸಿಪಿಐ ಆನಂದ ವಾಘ್ಮೋಡೆ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದರು.
ಬ್ಯಾಂಕ್ನಲ್ಲಿ ಸಾಲ ತೆಗೆದುಕೊಂಡು ಅಂಗಡಿ ಪ್ರಾರಂಭಿಸಿದ್ದೆವು. ಲಾಕ್ಡೌನ್ನಿಂದ ಈಗಾಗಲೇ ಆದಾಯ ಕಡಿಮೆಯಾಗಿತ್ತು. ಈಗ ಬೆಂಕಿ ಬಿದ್ದು ಹಾನಿಯಾಗಿದೆ. ಸರ್ಕಾರ ಪರಿಹಾರ ನೀಡಬೇಕು ಎಂದು ಮಾಲೀಕರಾದ ಶ್ರೀಶೈಲ ಹಾಗೂ ಚೇತನ ಮನವಿ ಮಾಡಿದರು.