ETV Bharat / state

‘ಪೊಲೀಸರು ನನ್ನ ಫೋನ್ ಟ್ರ್ಯಾಪ್​ ಮಾಡಿದ್ದಾರೆ’: ಮಾಜಿ ಶಾಸಕರ ಆರೋಪ ತಳ್ಳಿಹಾಕಿದ ಎಸ್ಪಿ - former MLA Nadagouda Police Trap news

ಮುದ್ದೇಬಿಹಾಳ ಪೊಲೀಸರು ಫೋನ್ ಟ್ರ್ಯಾಪ್ ಮಾಡಿದ್ದಾರೆ ಮಾಜಿ ಶಾಸಕ ಸಿ ಎಸ್​ ನಾಡಗೌಡ ಆರೋಪಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಎಸ್​ಪಿ ಅನುಪಮ ಅಗರವಾಲ್ ಇದೊಂದು ಆಧಾರ ರಹಿತ ಆರೋಪವಾಗಿದೆ ಎಂದಿದ್ದಾರೆ.

Letter from former MLA to SPವಿಜಯಪುರ ಎಸ್ಪಿಗೆ ಮಾಜಿ ಶಾಸಕ ಸಿ.ಎಸ್. ನಾಡಗೌಡ
ಮಾಜಿ ಶಾಸಕ ಸಿ.ಎಸ್. ನಾಡಗೌಡ
author img

By

Published : Jul 22, 2020, 4:39 PM IST

ವಿಜಯಪುರ: ಪೊಲೀಸ್ ಅಧಿಕಾರಿಗಳು ತಮ್ಮ ಹಾಗೂ ಕಾರ್ಯಕರ್ತರ ಮೊಬೈಲ್ ಟ್ರ್ಯಾಪ್ ಮಾಡುತ್ತಿದ್ದಾರೆ ಎಂದು ಮುದ್ದೇಬಿಹಾಳ ಮಾಜಿ ಶಾಸಕ ಸಿ.ಎಸ್. ನಾಡಗೌಡ ತಮಗೆ ಪತ್ರ ಬರೆದಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಎಸ್ಪಿ ಅನುಪಮ ಅಗರವಾಲ್ ಹೇಳಿದರು.

ಫೋನ್​ ಟ್ರ್ಯಾಪ್​ ಆರೋಪ ತಳ್ಳಿಹಾಕಿದ ಎಸ್ಪಿ ಅಗರವಾಲ್

ನಗರದ ಹಳೆ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುದ್ದೇಬಿಹಾಳ ಪೊಲೀಸರು ಫೋನ್ ಟ್ರ್ಯಾಪ್ ಮಾಡಿದ್ದಾರೆ ನಾಡಗೌಡ ಅವರು ಹೇಳಿದ್ದಾರೆ. ಆದ್ರೆ ಇದೊಂದು ಆಧಾರ ರಹಿತ ಆರೋಪವಾಗಿದೆ. ಆ ರೀತಿ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದರು.

ನಿನ್ನೆ ರಾತ್ರಿ ಈ ಸಂಬಂಧ ಮಾಜಿ ಶಾಸಕರು ತಮ್ಮ ಜತೆ ದೂರವಾಣಿ ಕರೆಯಲ್ಲಿ ಮಾತನಾಡಿದ್ದು, ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಲಾಗಿದೆ ಎಂದರು.

Letter from former MLA to SPವಿಜಯಪುರ ಎಸ್ಪಿಗೆ ಮಾಜಿ ಶಾಸಕ ಸಿ.ಎಸ್. ನಾಡಗೌಡ
ಎಸ್ಪಿಗೆ ಮಾಜಿ ಶಾಸಕರ ಪತ್ರ

ನಾಳೆ ನಡೆಯಲಿರುವ ಮುದ್ದೇಬಿಹಾಳ ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ತಮ್ಮ ಬೆಂಬಲಿಗರಿಗೆ ಜೀವ ಬೆದರಿಕೆ ಇದ್ದು, ಚುನಾವಣೆಯಲ್ಲಿ ಸ್ಥಳೀಯರು ಬಿಟ್ಟು ಬೇರೆ ಪೊಲೀಸರನ್ನು ನಿಯೋಜಿಸಬೇಕೆಂಬ ಮನವಿ ಬಂದಿದೆ. ಆದರೆ ನಮ್ಮ ಪೊಲೀಸರು ಭದ್ರತೆ ನೀಡಲು ಶಕ್ತರಿದ್ದಾರೆ. ಅವರ ಮೇಲೆ ಪೂರ್ಣ ನಂಬಿಕೆ ಇದ್ದು, ಅವರೇ ಚುನಾವಣೆ ಭದ್ರತೆ ಕೈಗೊಳ್ಳಲಿದ್ದಾರೆ ಎಂದು ಎಸ್​ಪಿ ಸ್ಪಷ್ಟಪಡಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.