ವಿಜಯಪುರ: ಪೊಲೀಸ್ ಅಧಿಕಾರಿ ಹಾಗೂ ವಾಹನ ಚಾಲಕನಿಗೆ ಕೊರೊನಾ ಪಾಸಿಟಿವ್ ಕಂಡು ಬಂದ ಹಿನ್ನೆಲೆಯಲ್ಲಿ ಎಪಿಎಂಸಿ ಪೊಲೀಸ್ ಠಾಣೆಯನ್ನು ಸೀಲ್ಡೌನ್ ಮಾಡಲಾಗಿದೆ.
ಕಳೆದ ಒಂದು ವಾರದಿಂದ ಗುಮ್ಮಟನಗರಿಯಲ್ಲಿ ಕೊರೊನಾ ತನ್ನ ಅಟ್ಟಹಾಸ ಮುಂದುವರಿಸಿದೆ. ಮೂವರು ಪೊಲೀಸ್ ಕಾನ್ಸ್ಟೇಬಲ್ಗಳನ್ನ ಹೋಂ ಕ್ವಾರಂಟೈನ್ಗೆ ಒಳಪಡಿಸಲಾಗಿದೆ ಎಂದು ತಿಳಿದು ಬಂದಿದೆ. ಎಪಿಎಂಸಿ ಠಾಣೆಗೆ ಸಾರ್ವಜನಿಕರಿಗೆ ನಿಷೇಧ ಹೇರಲಾಗಿದ್ದು, ಠಾಣೆಗೆ ಬೀಗ ಹಾಕಲಾಗಿದೆ.
ಇನ್ನು ಸಾರ್ವಜನಿಕರ ಸೇವೆ ಅನಿವಾರ್ಯವಾಗಿರುವುದರಿಂದ ಪೊಲೀಸ್ ಕ್ಯಾಂಟೀನ್ನಲ್ಲೇ ಇನ್ನುಳಿದ ಪೊಲೀಸರು ತಮ್ಮ ಕರ್ತವ್ಯ ನಿರ್ವಹಣೆ ಮಾಡಲು ಮುಂದಾಗಿದ್ದಾರೆ.