ETV Bharat / state

ಕಳ್ಳಭಟ್ಟಿ ಅಡ್ಡೆ ಮೇಲೆ ಪೊಲೀಸರ ದಾಳಿ

ಕಳ್ಳಭಟ್ಟಿ ತಯಾರಿಸುತ್ತಿದ್ದ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿ 2000ಕ್ಕೂ ಅಧಿಕ ಲೀಟರ್ ಕಳ್ಳಬಟ್ಟಿಯನ್ನು ನಾಶ ಮಾಡಿದ್ದಾರೆ.

author img

By

Published : Apr 25, 2020, 3:42 PM IST

Illicit liquor
ಕಳ್ಳಬಟ್ಟಿ ಅಡ್ಡೆ ಮೇಲೆ ಪೊಲೀಸ್ ದಾಳಿ

ವಿಜಯಪುರ: ಆಕ್ರಮವಾಗಿ ಕಳ್ಳಭಟ್ಟಿ ತಯಾರಿಸುತ್ತಿದ್ದ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿ ಕಳ್ಳಭಟ್ಟಿ ಬಳಕೆ ಸಾಮಗ್ರಿ ಹಾಗೂ ತಯಾರಿಕೆಗೆ ಬಳಸಲಾಗುತ್ತಿದ್ದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ನಗರದ ಹರಣಶಿಕಾರಿ ಕಾಲೋನಿಯಲ್ಲಿ ಆಕ್ರಮವಾಗಿ ಕಳ್ಳಭಟ್ಟಿ ತಯಾರಿಸುತ್ತಿರುವ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ. 2000ಕ್ಕೂ ಅಧಿಕ ಲೀಟರ್ ಕಳ್ಳಭಟ್ಟಿ ನಾಶ ಮಾಡಿದ್ದಾರೆ. ಕಲೋನಿಯ ಬಡಾವಣೆಯ ಮನೆ ಮೆನೆಗಳಿಗೂ ಪೊಲೀಸರು ತೆರಳಿ ಕೊಡಗಳಲ್ಲಿ ಸಂಗ್ರಹಿಸಿದ್ದ ಕಳ್ಳಭಟ್ಟಿಯನ್ನು ನಾಶ ಮಾಡಿದ್ದಾರೆ. ಬೀಗ ಹಾಕಲಾಗಿದ್ದ ಮನೆಗಳ ಬೀಗ ಒಡೆದು ಕಳ್ಳಭಟ್ಟಿ ತಯಾರಿಕೆ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

ಕಳ್ಳಭಟ್ಟಿ ಅಡ್ಡೆ ಮೇಲೆ ಪೊಲೀಸ್ ದಾಳಿ

ಒಂದು ಟ್ರ್ಯಾಕ್ಟರ್ ಡಬ್ಬದಷ್ಟು ಕಳ್ಳಭಟ್ಟಿ ತಯಾರಿಕೆಗೆ ಬಳಸಲಾಗುತ್ತಿದ್ದ ಬ್ಯಾರೆಲ್, ಕೊಡಗಳು, ಬಕೇಟ್ ಸೇರಿದಂತೆ ಹಲವು ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಾರ್ಯಾಚರಣೆಯಲ್ಲಿ ಇಬ್ಬರು ಡಿಎಸ್‌ಪಿ, ಒಬ್ಬ ಸಿಪಿಐ, ಮೂವರು ಪಿಎಸ್‌ಐ ಸೇರಿದಂತೆ 50 ಜನ ಸಿಬ್ಬಂದಿ ಭಾಗಿಯಾಗಿದ್ದರು.

ಇನ್ನು ಪೊಲೀಸರು ಬಡವಣೆಗೆ ಆಗಮಿಸುತ್ತಿದ್ದಂತೆ ದಂಧೆಯಲ್ಲಿ ತೊಡಗಿದ್ದ ವ್ಯಕ್ತಿಗಳು ಪರಾರಿಯಾಗಿದ್ದಾರೆ. ಗೋಲಗುಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ದಾಳಿ ನಡೆದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.