ETV Bharat / state

ವಿಜಯಪುರ: ನಾಯಿ ಮರಿಗಳಿಗೆ ಹಾಲುಣಿಸಿದ ಹಂದಿ - pig feeds milk to dog in vijayapura

ಮುದ್ದೇಬಿಹಾಳದಲ್ಲಿ ನಾಯಿ ಮರಿಗಳಿಗೆ ಹಂದಿ ತನ್ನ ಹಾಲು ಕುಡಿಸಿ ಮಾತೃಪ್ರೇಮ ಮೆರೆದಿದೆ.

pig feeding milk to puppies at vijayapura
ನಾಯಿ ಮರಿಗಳಿಗೆ ಹಾಲುಣಿಸಿದ ಹಂದಿ
author img

By

Published : Feb 3, 2022, 10:44 AM IST

ಮುದ್ದೇಬಿಹಾಳ (ವಿಜಯಪುರ): ಪ್ರಾಣಿಗಳು ಕಾದಾಟ ನಡೆಸಿ ಪ್ರಾಣ ಬಿಡುವುದನ್ನು ನಾವು ಕಂಡಿದ್ದೇವೆ. ಆದರೆ ವಿಜಯಪುರದ ಮುದ್ದೇಬಿಹಾಳದಲ್ಲಿ ನಾಯಿ ಮರಿಗಳಿಗೆ ಹಂದಿ ಹಾಲು ಕುಡಿಸುವ ಮೂಲಕ ಮಾತೃಪ್ರೇಮ ಮೆರೆದಿದೆ.

ಮುದ್ದೇಬಿಹಾಳ ಪಟ್ಟಣದ ಮಹಾಂತೇಶ ನಗರದಲ್ಲಿ ಈ ದೃಶ್ಯ ಕಂಡುಬಂದಿದೆ. ಇಲ್ಲಿ ಹಂದಿಯೊಂದು ಮೂರು ನಾಯಿ ಮರಿಗಳಿಗೆ ಆಗಾಗ ತನ್ನ ಮೊಲೆ ಹಾಲು ಕುಡಿಸುತ್ತಿದೆ. ಮರಿಗಳಿಗೆ ಜನ್ಮ ನೀಡಿದ ನಾಯಿ ಎಲ್ಲೋ ಮರೆಯಾಗಿದೆ. ಹಾಗಾಗಿ ಅಲ್ಲೇ ಸುತ್ತಾಡುತ್ತಿದ್ದ ಹಂದಿಯೊಂದು ಈ ಮರಿಗಳಿಗೆ ಹಾಲುಣಿಸಿ ತಾಯಿ ಪ್ರೀತಿ ತೋರಿಸಿ ಬದುಕು ಕಲ್ಪಿಸಿಕೊಟ್ಟಿದೆ.

ನಾಯಿ ಮರಿಗಳಿಗೆ ಹಾಲುಣಿಸಿದ ಹಂದಿ

ಇದನ್ನೂ ಓದಿ: ಹಾವೇರಿ: ಕಣವಿಸಿದ್ದಗೇರಿ ಸರ್ಕಾರಿ ಶಾಲೆಗೆ ಹೊಸ ಸ್ಪರ್ಶ.. ಸುಸಜ್ಜಿತ ಕ್ರೀಡಾಂಗಣ ನಿರ್ಮಾಣ

ಈ ತಾಯಿ ಹಂದಿಯ ಮರಿಗಳನ್ನು ಬೀದಿ ನಾಯಿಗಳು ಎಳೆದಾಡಿ ಸಾಯಿಸಿವೆ ಎಂದು ಅಲ್ಲಿನ ನಿವಾಸಿಗಳು ತಿಳಿಸಿದ್ದಾರೆ. ಸದ್ಯ ಹಂದಿ ತನ್ನ ಮರಿಗಳಂತೆ ಈ ನಾಯಿಗಳಿಗೆ ಹಾಲುಣಿಸುತ್ತಿದೆ. ಈ ದೃಶ್ಯವನ್ನು ಮಹಾಂತೇಶ ನಗರದ ನಿವಾಸಿ ಇಂಜಿನಿಯರ್ ಅನಿಲ್ ಕುಲಕರ್ಣಿ ಅವರು ತಮ್ಮ ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದಾರೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಸಹಜವಾಗಿ ಮನುಷ್ಯನನ್ನು ಕಂಡರೆ ಮನುಷ್ಯನಿಗೆ ಆಗಿ ಬಾರದ ಸದ್ಯದ ಪರಿಸ್ಥಿತಿಯಲ್ಲಿ ಮಾತು ಬಾರದ ಈ ಪ್ರಾಣಿಗಳ ಬಾಂಧವ್ಯ ಬಡಾವಣೆಯ ನಿವಾಸಿಗಳಿಗೆ ಮಾತನಾಡಿಕೊಳ್ಳುವ ವಿಷಯವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.