ETV Bharat / state

ಪ್ರತ್ಯೇಕ ಘಟನೆ: ಟಾಟಾ ಏಸ್​ ಡಿಕ್ಕಿಯಾಗಿ ಬೈಕ್​ ಸವಾರ ಸಾವು, ಮನೆ ಗೋಡೆ ಕುಸಿದು ವೃದ್ಧೆ ಬಲಿ - ನಿಡಗುಂದಿ ಪೊಲೀಸ್ ಠಾಣೆ

ಮಹಿಳೆ ಮನೆಯ ಗೋಡೆ ಕುಸಿದು ಓರ್ವ ವೃದ್ಧೆ ಹಾಗೂ ಬೈಕ್​ ಅಪಘಾತದಲ್ಲಿ ಓರ್ವ ಯುವಕ ಸಾವನ್ನಪ್ಪಿರುವ ಘಟನೆ ವಿಜಯಪುರದಲ್ಲಿ ನಡೆದಿದೆ.

vijaypura crime news
ವೃದ್ಧೆ ಸಾವು, ಬೈಕ್​ ಅಪಘಾತ
author img

By

Published : Jul 20, 2020, 12:09 PM IST

ವಿಜಯಪುರ: ಬೈಕ್ ಮತ್ತು ಟಾಟಾ ಏಸ್​ ವಾಹನ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ನಿಡಗುಂದಿ ತಾಲೂಕಿನ ಗೋನಾಳ ಕ್ರಾಸ್ ಬಳಿ ರಾತ್ರಿ ನಡೆದಿದೆ.

ತಾಲೂಕಿನ ಕಿರಿಶ್ಯಾಳ ಗ್ರಾಮದ 30 ವರ್ಷದ ಮಹಾಂತಯ್ಯ ಪೂಜಾರಿ ಮೃತ ವ್ಯಕ್ತಿಯಾಗಿದ್ದಾನೆ. ಬೈಕ್ ಹಿಂಬದಿ ಸವಾರ ರವಿ ಪಾಟೀಲ ತೀವ್ರ ಗಾಯಗೊಂಡಿದ್ದು,
ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ರವಾನಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ನಿಡಗುಂದಿ ಪಟ್ಟಣ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮನೆ ಗೋಡೆ ಕುಸಿದು ವೃದ್ಧೆ ಸಾವು
ಮಳೆಗೆ ನೆನೆದಿದ್ದ ಮನೆ ಗೋಡೆ ಕುಸಿದು ಬಿದ್ದು ವೃದ್ಧೆ ಸಾವನ್ನಪ್ಪಿರುವ ಘಟನೆ ಬಸವನ ಬಾಗೇವಾಡಿ ತಾಲೂಕಿನ ಹೂವಿನ ಹಿಪ್ಪರಗಿಯಲ್ಲಿ ನಡೆದಿದೆ. 80 ವರ್ಷದ ಲಾಲಬಿ ಶಾಬಾದಿ ಮೃತಪಟ್ಟ ವೃದ್ಧೆಯಾಗಿದ್ದು, ಮಣ್ಣಿನಡಿ ಸಿಲುಕಿದ್ದ ಶವವನ್ನು ಸ್ಥಳೀಯರು ಹೊರ ತೆಗೆದಿದ್ದಾರೆ. ಬಸವನಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.