ವಿಜಯಪುರ: ಕೊರೊನಾ ವೈರಸ್ ಭೀತಿಯಿಂದ ಸೂರತ್ನಿಂದ ಬಂದಿದ್ದ 10 ಜನರ ಪೈಕಿ ಇಬ್ಬರಲ್ಲಿ ಸೋಂಕು ಇದೆ ಎಂಬ ಆತಂಕ ಜಿಲ್ಲೆಯ ಜನರಲ್ಲಿತ್ತು. ಆದ್ರೀಗ ಇಬ್ಬರ ಗಂಟಲು ದ್ರವ ಪರೀಕ್ಷೆ ನೆಗೆಟಿವ್ ಬಂದಿರುವುದರಿಂದ ಜನತೆ ನಿರಾಳವಾಗಿದ್ದಾರೆ.
ನಿನ್ನೆ ಕಳುಹಿಸಿದ್ದ ಇಬ್ಬರ ಗಂಟಲು ದ್ರವ ಪರೀಕ್ಷೆ ನೆಗೆಟಿವ್ ಬಂದಿದೆ. ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ, ಜಿಲ್ಲೆಯಲ್ಲಿ ವಿದೇಶದಿಂದ ಬಂದವರು, ಹೊರ ರಾಜ್ಯದಿಂದ ಬಂದವರು ಸೇರಿ 413 ಜನ ನಿಗಾದಲ್ಲಿ ಇದ್ದರು. ಇವತ್ತಿಗೆ 30 ಜನ ಕ್ವಾರಂಟೈನ್ನಲ್ಲಿ ಇದ್ದಾರೆ.
ಇಲ್ಲಿಯವರೆಗೆ 59 ವರದಿಗಳನ್ನು ಕಳುಹಿಸಲಾಗಿದೆ. ಅದರಲ್ಲಿ 57 ವರದಿಗಳು ನೆಗೆಟಿವ್ ಬಂದಿವೆ. ಎರಡು ವರದಿಗಳು ಮಾತ್ರ ಬಾಕಿ ಇವೆ ಎಂದರು. ಇಂದು ಮತ್ತೆ ಎರಡು ಸ್ಯಾಂಪಲ್ ಕಳುಹಿಸಲಾಗಿದೆ. ನಮ್ಮ ಜಿಲ್ಲೆಯಲ್ಲಿ ಯಾರೂ ಭಯ ಪಡುವ ಅಗತ್ಯ ಇಲ್ಲ ಎಂದರು.
ಎಸ್ಪಿ ಅನುಪಮ್ ಅಗರವಾಲ್ ಮಾತನಾಡಿ, ತಬ್ಲಿಘಿ ಜಮಾತ್ನಲ್ಲಿ ಭಾಗವಹಿಸಿ ಜಿಲ್ಲೆಗೆ 370 ಜನರು ಬಂದಿದ್ದಾರೆ. ನಿಜಾಮುದ್ದೀನ್ ಸಭೆಯಲ್ಲಿ 29 ಜನ ಭಾಗವಹಿಸಿದ್ರು. ಅವರ ವರದಿಗಳು ನೆಗೆಟಿವ್ ಬಂದಿವೆ. ಸೂರತ್ನಿಂದ ಬಂದ ಇಬ್ಬರದ್ದು ಸ್ಯಾಂಪಲ್ ಕಳುಹಿಸಲಾಗಿತ್ತು, ಅವರದ್ದು ಸಹ ವರದಿ ನೆಗೆಟಿವ್ ಬಂದಿವೆ ಎಂದರು.