ವಿಜಯಪುರ: ವರ ಮಹಾಲಕ್ಷ್ಮಿ ಪೂಜೆಗೆ ಅಗತ್ಯ ಸಾಮಗ್ರಿಗಳ ಖರೀದಿಗೆ ಗುಮ್ಮಟನಗರಿಯ ಜನರು ಮುಗಿಬಿದ್ದಿದ್ದು, ಸಂಜೆಯಾಗುತ್ತಿದ್ದಂತೆ ಎಲ್‌ಬಿಎಸ್ ಮಾರುಕಟ್ಟೆ ಜನ ಸಂದಣಿಯಿಂದ ತುಂಬಿ ತುಳಕುತ್ತಿದ್ದ ದೃಶ್ಯ ಕಂಡು ಬಂದಿತು.
ಹೂವು-ಹಣ್ಣು, ಬಾಳೆ ಎಲೆ ಸೇರಿದಂತೆ ಇತರ ಅಗತ್ಯ ವಸ್ತುಗಳು ದುಬಾರಿಯಾಗಿದ್ದು, ಕಳೆದ ವಾರ ಕೆ.ಜಿಗೆ 140 ರೂ. ಇದ್ದ ಸೇಬು ಹಣ್ಣಿನ ಬೆಲೆ ಇದೀಗ 250 ರೂಪಾಯಿಯಾಗಿದೆ. ಡಜನ್ಗೆ 30 ರೂ. ಇದ್ದ ಬಾಳೆಹಣ್ಣು, 60 ರೂಪಾಯಿಯಾಗಿದೆ. ಇತ್ತ ಒಂದು ಹೂವಿನ ಹಾರಕ್ಕೆ 60 ರೂ. ಬೆಲೆ ಏರಿಕೆಯಾಗಿದೆ. ಸಂಜೆಯಾಗುತ್ತಿದ್ದಂತೆ ಸಾರ್ವಜನಿಕರು ವರ ಮಹಾಲಕ್ಷ್ಮಿ ಹಬ್ಬದ ಖರೀದಿಗೆ ಮುಗಿಬಿದ್ದರು.
ನಗರದ ಗಾಂಧಿ ವೃತ್ತದಿಂದ ಸಿದ್ದೇಶ್ವರ ಮಂದಿರವರಿಗೂ ರಸ್ತೆಯ ಮೇಲೆ ಜನರು ಜಮಾವಣೆಗೊಂಡಿದ್ದು, ಮಾಸ್ಕ್, ಸಾಮಾಜಿಕ ಅಂತರ ಕಾಪಾಡಿಕೊಳ್ಳದೆ ವ್ಯಾಪಾರ ವಹಿವಾಟಿನಲ್ಲಿ ತೊಡಗಿದ್ದಾರೆ.