ವಿಜಯಪುರ: ಅಪರಿಚಿತ ವ್ಯಕ್ತಿಯ ಓಡಾಟದಿಂದ ನಗರದ ಜನರಲ್ಲಿ ಆತಂಕ ಸೃಷ್ಟಿಯಾಗಿದೆ.
ಕೈಗೆ ಕ್ವಾರಂಟೈನ್ ಸೀಲ್ ಹೊಂದಿದ್ದ ವ್ಯಕ್ತಿಯ ಓಡಾಟದಿಂದ ಜನತೆ ಭಯಭೀತರಾಗಿದ್ದಾರೆ. ನಗರದ ಸ್ಟೇಷನ್ ರಸ್ತೆಯ ಬಡಿಕಮಾನ ಬಸ್ ನಿಲ್ದಾಣದಲ್ಲಿ ವ್ಯಕ್ತಿ ಕುಳಿತಿದ್ದು, ಇದು ಸಾರ್ವಜನಿಕರಲ್ಲಿ ಹಲವು ಅನುಮಾನಗಳನ್ನು ಮೂಡಿಸಿವೆ.
ಇನ್ನು, ಆ ವ್ಯಕ್ತಿ ಕ್ವಾರಂಟೈನ್ನಿಂದ ತಪ್ಪಿಸಿಕೊಂಡು ಬಂದಿರುವ ಶಂಕೆ ವ್ಯಕ್ತವಾಗಿದೆ. ಹೋಂ ಕ್ವಾರಂಟೈನ್ನಲ್ಲಿದ್ದನೋ ಅಥವಾ ಸಾಂಸ್ಥಿಕ ಕ್ವಾರಂಟೈನ್ನಲ್ಲಿ ಇದ್ದನೋ ಎಂಬುದು ತಿಳಿದುಬರಬೇಕಾಗಿದೆ.
ಸೀಲ್ ಹೊಂದಿದ್ದ ವ್ಯಕ್ತಿಯ ಓಡಾಟದಿಂದ ಜನರಲ್ಲಿ ಸದ್ಯ ಆತಂಕ ಮೂಡಿದ್ದು, ಕೂಡಲೇ ಆತನನ್ನು ಕ್ವಾರಂಟೈನ್ ಮಾಡಬೇಕು ಎಂದು ಜನರು ಆಗ್ರಹಿಸಿದ್ದಾರೆ.